ಕುಣಿಗಲ್: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು, ಕಾರು ಬಿಡಲು ಹಣ ಕೇಳಿದ ಅಪರಾಧ ವಿಭಾಗದ ಪೇದೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ರನ್ನು ಸೇವೆಯಿಂದ ಅಮಾನತು ಪಡಿಸಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ನವೀನ್ ಅಮಾನತುಗೊಂಡ ಪೇದೆ.
ಏನಿದು ಪ್ರಕರಣ: ವಕೀಲರೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ, ನಗದು ಸೇರಿದಂತೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದ ತೃತೀಯ ಲಿಂಗಿಗಳು ಸೇರಿದಂತೆ ಐವರನ್ನು ಕುಣಿಗಲ್ ಪೊಲೀಸರು ಬಂಧಿಸಿ ಅವರಿಂದ ಕಾರು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು. ಕಾರಿನ ಮಾಲೀಕರು ವಕೀಲರ ಮೂಲಕ ಕಾರು ಬಿಡುಗಡೆಗೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು ಎನ್ನಲಾಗಿದೆ.
ಈ ನಿಟ್ಟಿನಲ್ಲಿ ನ್ಯಾಯಾಲಯವು ಕಾರು ಬಿಡುಗಡೆಗೆ ಆದೇಶ ನೀಡಿತ್ತು ಎನ್ನಲಾಗಿದೆ. ಆದರೆ ಕಾರು ಬಿಡುಗಡೆಗೆ ಪೇದೆ ನವೀನ್ 50 ಸಾವಿರ ರೂ.ಗಳು ಕೊಡುವಂತೆ ಕಾರು ಮಾಲೀಕರಿಗೆ ಒತ್ತಾಯಿಸಿದರು. ಈ ಸಂಬಂಧ ಕಾರು ಮಾಲೀಕರು ವಕೀಲರು ಮೂಲಕ ನ್ಯಾಯಾಧೀಶರ ಗಮನಕ್ಕೆ ತಂದಿದ್ದರು. ಈ ದಿಸೆಯಲ್ಲಿ ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಿದ ಹಿನ್ನಲೆಯಲ್ಲಿ ನವೀನ್ ಅವರನ್ನು ಸೇವೆಯಿಂದ ಜಿಲ್ಲಾ ಎಸ್ಪಿ ಅವರು ಅಮಾನತು ಪಡಿಸಿದ್ದಾರೆ