Advertisement

ಕಂಪ್ಲಿ ಗಣೇಶ ಸೆರೆ ಸನ್ನಿಹಿತ ;ಮತ್ತೆ ರೌಡಿ ಪಟ್ಟಿಗೆ ಸೇರ್ಪಡೆ

12:33 AM Jan 24, 2019 | |

ಬೆಂಗಳೂರು: ಶಾಸಕ ಆನಂದಸಿಂಗ್‌ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ ಬಂಧನ ಸನ್ನಿಹಿತವಾಗಿದೆ. ಜತೆಗೆ ಗಣೇಶ್‌ ವಿರುದ್ಧ ಮತ್ತೆ ರೌಡಿ ಪಟ್ಟಿ ತೆರೆಯಲು ನಿರ್ಧರಿಸಲಾಗಿದೆ.

Advertisement

ಇಷ್ಟರ ನಡುವೆಯೂ ಕಂಪ್ಲಿ ಗಣೇಶ್‌ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಆನಂದ್‌ಸಿಂಗ್‌ರನ್ನು ಪಕ್ಷದಲ್ಲೇ ಉಳಿಸಿ ಕೊಂಡು ಗಣೇಶ್‌ ಬಿಜೆಪಿಗೆ ಹೋಗ ದಂತೆ ತಡೆಯುವ ಕಾರ್ಯತಂತ್ರ ಕಾಂಗ್ರೆಸ್‌ ರೂಪಿಸಿದೆ. ಸದ್ಯಕ್ಕೆ ಪ್ರಕರಣದಿಂದ ಅಂತರ ಕಾಯ್ದು ಕೊಂಡು ಮುಂದಿನ ಬೆಳವಣಿಗೆ ನೋಡಿ ಹೆಜ್ಜೆ ಇಡಲು ಬಿಜೆಪಿ ನಿರ್ಧರಿಸಿದೆ.

ಗಣೇಶ್‌ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡದಿರಲು ಸರ್ಕಾರ ತೀರ್ಮಾ ನಿಸಿದ್ದು, ಎಲ್ಲೇ ಇದ್ದರೂ ತಕ್ಷಣ ಬಂಧಿಸಿ ಎಂದು ಪೊಲೀಸ್‌ ಅಧಿಕಾರಿ ಗಳಿಗೆ ಗೃಹ ಸಚಿವ ಎಂ.ಬಿ.ಪಾಟೀಲ್‌ ಸೂಚನೆ ನೀಡಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಎಂ.ಬಿ.ಪಾಟೀಲ್‌, ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ಸಿಂಗ್‌ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್‌ ವಿರುದ್ಧ ರೌಡಿ ಶೀಟರ್‌ ಮತ್ತೆ ತೆರೆಯಲಾಗುವುದು. ಕಾನೂನು ಎಲ್ಲರಿಗೂ ಒಂದೇ. ಗಣೇಶ್‌ ಎಲ್ಲೇ ಇದ್ದರೂ ಬಂಧಿಸಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಮತ್ತೂಂದೆಡೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ರೆಸಾರ್ಟ್‌ನಲ್ಲಿ ಶಾಸಕರ ಹೊಡೆದಾಟ ಪ್ರಕರಣದಲ್ಲಿ ಈಗಾಗಲೇ ಎಫ್ಐಆರ್‌ ಆಗಿದೆ. ಕೆಪಿಸಿಸಿ ಕೂಡ ಕಾನೂನಾತ್ಮಕ ಕ್ರಮಕ್ಕೆ ಒತ್ತಾಯ ಮಾಡಿದೆ, ಜತೆಗೆ ನನ್ನ ನೇತೃತ್ವದಲ್ಲಿ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದರು.

Advertisement

ಒಂದು ವಾರ ವಿಶ್ರಾಂತಿ: ರೆಸಾರ್ಟ್‌ ರಾಜಕೀಯದಲ್ಲಿ ಗಲಾಟೆ ಮಾಡಿಕೊಂಡು ಆಸ್ಪತ್ರೆ ಸೇರಿರುವ ಆನಂದ್‌ ಸಿಂಗ್‌ ಇನ್ನೂ ಒಂದು ವಾರ ಚಿಕಿತ್ಸೆ ಮುಂದುವರೆಸುವ ಸಾಧ್ಯತೆ ಇದೆ. ಅವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆನಂದ್‌ ಸಿಂಗ್‌ ಭೇಟಿ ಮಾಡಿದ ರೆಡ್ಡಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್‌ ಸಿಂಗ್‌ ಅವರನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಬುಧವಾರ ಬೆಳಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಶಾಸಕರ ನಡುವೆ ನಡೆದಿರುವ ಈ ಘಟನೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌ ನೇರ ಹೊಣೆಯಾಗಿದ್ದಾರೆ. ಇವರಿಬ್ಬರು ಸೇರಿ ಬಳ್ಳಾರಿಯ ಶಾಸಕರನ್ನು ಇಬ್ಭಾಗ ಮಾಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು. ಶಾಸಕ ಭೀಮಾನಾಯಕ್‌, ಗಣೇಶ್‌ ಸಿದ್ದರಾಮಯ್ಯ ಬಣ ಹಾಗೂ ಉಳಿದ ಶಾಸಕರು ಡಿ.ಕೆ.ಶಿವಕುಮಾರ್‌ ಗುಂಪಿನಲ್ಲಿ ಸೇರಿಕೊಂಡಿದ್ದಾರೆ. ಮಾರಾಣಾಂತಿಕ ಹಲ್ಲೆಗೆ ಈ ಗುಂಪುಗಾರಿಕೆಯೇ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next