Advertisement
ಈಗ ಪೊಲೀಸರ ಸರದಿ.ಐಪಿಎಸ್ ಅಧಿಕಾರಿಗಳ ಅನಿಷ್ಠ ಕಾರ್ಯವೈಖರಿ,ಪ್ರಾಮಾಣಿಕತೆ ಕೊರತೆ,ಜಾತಿ ಪದ್ಧತಿ, ಜೀತ ಪದ್ಧತಿ,ಅಧಿಕಾರ ದುರುಪಯೋಗ,ಇಲಾಖೆಯ ಘನತೆ ಕಾಪಾಡುವಲ್ಲಿ ವಿಫಲ ಸೇರಿ ಹಲವು ಅಂಶಗಳ ಕುರಿತಂತೆಕರ್ನಾಟಕ ರಾಜ್ಯ ಸಶಸOಉ ಮೀಸಲು ಪಡೆಗಳ ಪೊಲೀಸ್ ಸಿಬ್ಬಂದಿ ಜಿಲ್ಲಾ ಸಂಘದ ಅಧ್ಯಕ್ಷರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಐದು ಪುಟಗಳ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಐಪಿಎಸ್ ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. – ಪೋಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದಟಛಿತಿ ನಿಷೇಧಿಸಿ ಭತ್ಯೆ ಜಾರಿಗೊಳಿಸಲಾಗಿದೆ. ಆದರೆ, ಈ ಬಗ್ಗೆ ಯಾವೊಂದು ಆದೇಶ, ಸುತ್ತೋಲೆ ಹೊರಬಿದ್ದಿಲ್ಲ. ಇದರ ಪರಿಣಾಮ ಐಪಿಎಸ್ ಅಧಿಕಾರಿಗಳು ಸೇವೆಗೆ ಸುಮಾರು 20ಕ್ಕಿಂತ ಹೆಚ್ಚು ಸಿಬ್ಬಂದಿಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಉಳಿಸಿಕೊಳ್ಳುತ್ತಿದ್ದಾರೆ.
Related Articles
Advertisement
– ಊಟದ ಬಿಲ್, ವಿದ್ಯುತ್ ಬಿಲ್, ಮನೆಗೆ ದವಸ-ಧಾನ್ಯ ತರುವುದಕ್ಕೆಲ್ಲಾ ಸರ್ಕಾರಿ ಕಚೇರಿ,ಸ್ಟೋರ್ ಹಣ ಬಳಕೆ ಮಾಡಲಾಗುತ್ತಿದೆ. ಕಚೇರಿಗೆ ಸ್ಟೇಷನರಿ ಖರೀದಿ ಸೇರಿದಂತೆ ಇನ್ನಿತರ ಸಾಮಾನುಗಳ ಖರೀದಿಗಳಲ್ಲಿ ಲೋಪ ಮಾಡಿ ಆ ಹಣದಿಂದ ಎಸ್ಪಿಮನೆಗೆ ದಿನಸಿ ಸಾಮಾನು ಸರಬರಾಜು ಮಾಡಲಾಗುತ್ತಿದೆ.
– ಪೊಲೀಸ್ ವಸತಿ ಗೃಹ ದುರಸ್ತಿಯಲ್ಲಿ ಕಮಿಷನ್ ಪಡೆದು, ವಸತಿಗೃಹವನ್ನು ಸರಿಯಾಗಿ ದುರಸ್ತಿಪಡಿಸದೆ ಸಿಬ್ಬಂದಿಗೆ ಹಂಚಿಕೆ ಮಾಡಿ, ದುರಸ್ತಿಪಡಿಸಿಕೊಳ್ಳುವಂತೆ ಹೇಳುತ್ತಾರೆ.
– ವಾಹನ ವಿಭಾಗದಲ್ಲಿ ಪೆಟ್ರೋಲ್-ಡೀಸೆಲ್ ದುರ್ಬಳಕೆ, ರಿಪೇರಿಯಿಂದ ಕಮಿಷನ್ ಪಡೆಯುವುದು ಸಾಮಾನ್ಯವಾಗಿದೆ.
– ರಾಜಕಾರಣಿಗಳ ಬಲೆಗೆ ಬಿದ್ದು, ಕೆಟ್ಟದಾರಿಯಿಂದ ಹಣಗಳಿಸುವ ಸಲುವಾಗಿ ಪೊಲೀಸ್ ಸಲಹೆಗಾರರು ಹೇಳಿದಂತೆ ಐಪಿಎಸ್ ಅಧಿಕಾರಿಗಳು ಕೇಳುತ್ತಿದ್ದಾರೆ.
– ಒಂದೇ ವರ್ಗದ, ಜಾತಿಯ ಸಿಬ್ಬಂದಿಯನ್ನು ಪದೇಪದೆ ಶಿಕ್ಷಿಸುವುದು, ತೊಂದರೆ ಕೊಡುವುದು ನಿರಂತರವಾಗಿ ನಡೆಯುತ್ತಿದೆ.
– ತಮಗೆ ಅನುಕೂಲವಾಗುವಂತೆ ಯಾರು ಹಣ ತಂದುಕೊಡುವರೋ ಅವರು ಹೇಳಿದಂತೆ ಕೇಳು ವುದು, ಕರ್ತವ್ಯದಲ್ಲಿ ದಕ್ಷತೆಯಿಂದ ನಡೆದು ಕೊಳ್ಳದೆ ಸಾರ್ವಜನಿಕರಿಗೆ ಸಂದರ್ಶನ ನೀಡದಿರುವುದು, ಸಿಬ್ಬಂದಿ ತಮ್ಮ ಕುಂದುಕೊರತೆ ಹೇಳಿಕೊಳ್ಳಲು ಬಂದರೆ ಅನುಮತಿ ಪಡೆದು ಬಂದಿಲ್ಲವೆಂದು ಮೆಮೋ ಜಾರಿ ಮಾಡಿ ಅಮಾನತುಗೊ ಳಿಸುವುದು ನಡೆದುಕೊಂಡು ಬಂದಿದೆ.
– ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿಯನ್ನು ಡಿಎಆರ್, ಸಿಎಆರ್, ಕೆಎಸ್‌ಆರ್‌ಪಿ ಸಿವಿಲ್ ಎಂದು ವಿಂಗಡಿಸಿರುವುದು,ಪೊಲೀಸ್ ಮ್ಯಾನ್ಯುವೆಲ್ 83, 84ನ್ನು ಜಾರಿಗೆ ತರದೆ ನೇಮಕಾತಿ ಬಡ್ತಿಯಲ್ಲೂ ನಿಯಮಾನುಸಾರ ನಡೆಯುತ್ತಿಲ್ಲ. ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಆತ್ಮಾವಲೋಕನ ಮಾಡಿಕೊಂಡು, ಬದಲಾವಣೆಗೆತಿದ್ದಿಕೊಂಡರೆ ಪೊಲೀಸ್ ಇಲಾಖೆಯ ಘನತೆ ಗೌರವಗಳು ಉಳಿಯುತ್ತವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.