ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂನ ಸಬ್ ಇನ್ಸ್‌ಪೆಕ್ಟರ್ ಪದ್ಮಯ್ಯ ರಾಣೆ ಅವರ ಪುತ್ರ, ಬಲ್ಮಠದಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯಲ್ಲಿ ಸಹಾಯಕ ಅಡಿಟರ್ ಆಗಿದ್ದ ಅಂಕಿತ್ ರಾಣೆ (27) ಅವರು ಸೋಮವಾರ ಕಚೇರಿಯ ಸ್ಟೋರ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪದ್ಮಯ್ಯ ರಾಣೆ ಕುಟುಂಬ ಬಿಕರ್ನಕಟ್ಟೆಯ ಕಂಡೆಟ್ಟುನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ಅಂಕಿತ್ 5 ವರ್ಷಗಳಿಂದ ಬಲ್ಮಠದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.
ಶನಿವಾರ ಮಧ್ಯಾಹ್ನ ಕಚೇರಿಯಿಂದ ಮನೆಗೆ ತೆರಳಿದ್ದ ಅವರು ಸೋಮವಾರ ಬೆಳಗ್ಗಿನ ತನಕ ಮನೆಯಲ್ಲಿಯೇ ಇದ್ದರು. ಸೋಮವಾರ ತನಗೆ ಕೆಲಸ ಇದೆ ಎಂದು ಹೇಳಿ ಮನೆಯಿಂದ 7.45ಕ್ಕೆ ಹೊರಟು ಕಚೇ ರಿ ಗೆ ಬಂದಿ ದ್ದರು. ಅಲ್ಲಿ ವಾಚ್‌ಮೆನ್ ಕೈಯಿಂದ ಸ್ಟೋರ್ ರೂಂ ಕೀ ಪಡೆದು ಅದ ರೊ ಳಗೆ ಮನೆಯಿಂದಲೇ ತಂದಿದ್ದ ಸೀರೆಯನ್ನು ಉಪಯೋಗಿಸಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ.
ಸ್ಟೋರ್ ರೂಂಗೆ ಹೋದವರು ಬಹಳಷ್ಟು ಹೊತ್ತಾದರೂ ಹೊರಗೆ ಬಾರದಿರುವುದರಿಂದ ಸಂಶಯ ಗೊಂಡು ಕಚೇರಿಯ ಸಿಬಂದಿ ಬಾಗಿಲಿನ ಸಂದಿನಿಂದ ಒಳಗೆ ಇಣುಕಿದಾಗ ಅಂಕಿತ್ ಫ್ಯಾನಿನಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ. ಕದ್ರಿ ಪೊಲೀಸರು ಸುದ್ದಿ ತಿಳಿದು ಸ್ಥಳಕ್ಕೆ ತೆರಳಿ ಸ್ಟೋರ್ ರೂಂ ಬಾಗಿಲು ಒಡೆದು ಒಳ ಪ್ರವೇಶಿಸಿದರು. ಆತ್ಮಹತ್ಯೆಗೆ ಸ್ಪಷ್ಟ ಕಾರಣವೇನೆಂದು ತಿಳಿದು ಬಂದಿಲ್ಲ.
ಪದ್ಮಯ್ಯ ದಂಪತಿಯ ಇಬ್ಬರು ಮಕ್ಕಳಲ್ಲಿ ಅಂಕಿತ್ ಹಿರಿಯವನಾಗಿದ್ದು, ಪುತ್ರಿ ಮೆಡಿಕಲ್ ಓದುತ್ತಿದ್ದಾರೆ. ಪದ್ಮಯ್ಯ ಅವರ ಸ್ವಂತ ಊರು ವೇಣೂರು ಆಗಿದ್ದು, 2 ವರ್ಷಗಳ ಹಿಂದೆ ಶಿವಮೊಗ್ಗದಿಂದ ವರ್ಗವಾಗಿ ಮಂಗಳೂರಿಗೆ ಬಂದಿದ್ದರು.