Advertisement

ಮಹಿಳೆಗೆ ಅಶ್ಲೀಲ ಎಸ್‌ಎಂಎಸ್‌: ಅಮಾನತಾಗಿದ್ದ ಎಸ್‌ಐ ಆತ್ಮಹತ್ಯೆ

03:07 PM Sep 09, 2017 | udayavani editorial |

ಮೈನ್‌ಪುರಿ : ಉತ್ತರ ಪ್ರದೇಶದ 42ರ ಹರೆಯದ ಪೊಲೀಸ್‌ ಎಸ್‌ಐ ರಾಧಾರಮಣ್‌ ಯಾದವ್‌ ತಮ್ಮ ಮನೆಯಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಮಹಿಳೆಯೋರ್ವರಿಗೆ ಅಶ್ಲೀಲ ಎಸ್‌ಎಂಎಸ್‌ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಯಾದವ್‌ ಅವರನ್ನು ಅಮಾನತು ಮಾಡಲಾಗಿತ್ತು. 

ಅನಂತರ ಯಾದವ್‌ ಅವರ ಅಮಾನತನ್ನು ತೆರವುಗೊಳಿಸಿ ಅವರನ್ನು ಕಿಶ್ನಿ ಪೊಲೀಸ್‌ ಠಾಣೆಯ ಪೊಲೀಸ್‌ ಲೈನ್ಸ್‌ ಗೆ ವರ್ಗಾವಣೆ ಮಾಡಲಾಗಿತ್ತು. 

ಮನೆಯ ಬಾತ್‌ ರೂಮಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next