Advertisement

ಶಾಲಾ ಮಕ್ಕಳಿಗೆ ಪೊಲೀಸ್‌ ಠಾಣೆ ಮಾಹಿತಿ

07:35 AM Jan 19, 2019 | Team Udayavani |

ಹಗರಿಬೊಮ್ಮನಹಳ್ಳಿ : ಮಕ್ಕಳಿಗೆ ಪೊಲೀಸ್‌ ಠಾಣೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಲು ಸರಕಾರ ತೆರೆದಮನೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಕ್ಕಳಿಗೆ ದೂರು ಸಲ್ಲಿಸುವುದು, ಪೊಲೀಸ್‌ ಸಾಧನಗಳ, ಮಾಹಿತಿ ಪುಸ್ತಕ ಸೇರಿ ವಿವಿಧ ಮಾಹಿತಿಗಳನ್ನು ತಿಳಿಸಿಕೊಡಲಾಗುವುದು ಎಂದು ತಂಬ್ರಹಳ್ಳಿ ಪಿಎಸ್‌ಐ ಪಿ.ಸರಳಾ ತಿಳಿಸಿದರು.

Advertisement

ತಾಲೂಕಿನ ತಂಬ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ತೆಲುಗೋಳಿ ಪ್ರೌಢಶಾಲೆ ಮಕ್ಕಳಿಗೆ ಆಯೋಜಿಸಿದ್ದ ತೆರೆದಮನೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾಹಿತಿ ನೀಡಿದ ನಂತರ ಮಾತನಾಡಿದ ಅವರು, ಪೊಲೀಸ್‌ ವ್ಯವಸ್ಥೆ ಜನಸಮುದಾಯದೊಂದಿಗೆ ಮುನ್ನಡೆಯಬೇಕು ಎಂಬ ಉದ್ದೇಶದಿಂದ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಠಾಣೆಯ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ತಪ್ಪ್ಪುಗಳು ನಡೆದದ್ದು ಕಂಡು ಬಂದಲ್ಲಿ ಮಕ್ಕಳು ನೇರವಾಗಿ ಠಾಣೆಗೆ ಬಂದು ದೂರು ಸಲ್ಲಿಸಬಹುದು. ತಪ್ಪಿತಸ್ಥರನ್ನು ವಿಚಾರಣೆಗೆ ಒಳಪಡಿಸಲಾಗುವುದು. ದೂರು ಅರ್ಜಿಗಳ ವಿಚಾರಣೆ, ಗುಪ್ತ ಮಾಹಿತಿ ಸಂಗ್ರಹ, ಬರಹಗಾರರ ಕೆಲಸ, ನ್ಯಾಯಾಲಯದ ಕಾರ್ಯ, ಅಪರಾಧ ತನಿಖೆ ಕುರಿತು ಮಕ್ಕಳಿಗೆ ಸಮಗ್ರ ಮಾಹಿತಿ ನೀಡಿದರು.

ಶಾಲೆಯ ಸುತ್ತಮುತ್ತ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಡುವವರ ಮಾಹಿತಿ ನೀಡಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೇದೆಗಳಾದ ರಂಗನಾಥ, ಸುರೇಶನಾಯ್ಕ, ಕೊಟ್ರೇಶ ಮಕ್ಕಳಿಗೆ ಠಾಣೆಯ ಬಗ್ಗೆ ಹಾಗೂ ಸಾಧನಗಳ ಕುರಿತು ಮಾಹಿತಿ ನೀಡಿದರು. ಎಎಸ್‌ಐ ಸಿದ್ದಲಿಂಗಪ್ಪ, ಶಿಕ್ಷಕರಾದ ರಂಗನಾಥ, ಬಸವೇಶ್ವರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next