Advertisement

ಪಿಪಿಇ ಕಿಟ್‌ ಧರಿಸಿ ಪೊಲೀಸರ ಸೇವೆ

02:19 PM May 12, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ದಿನೇ ದಿನೆ ಕೊವಿಡ್‌ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲಾ ಇಲಾಖೆಗಳಲ್ಲಿಯೂ ಸಿಬ್ಬಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ.ಅಂತೆಯೇ ಪೊಲೀಸ್‌ ಸಿಬ್ಬಂದಿಯೂ ಸೋಂಕಿಗೆಒಳಗಾಗುತ್ತಿದ್ದು, ಮಂಗಳವಾರ ಗ್ರಾಮಾಂತರ ಹಾಗೂನಗರ ಠಾಣೆಯಲ್ಲಿ ಪೊಲೀಸರು ಪಿಪಿಇ ಕಿಟ್‌ಗಳನ್ನು ಧರಿಸಿಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

ಕೊವಿಡ್‌ ಹಿನ್ನೆಲೆಯಲ್ಲಿ ಪೊಲೀಸರು ಆತಂಕದಲ್ಲಿ ಕೆಲಸಮಾಡುವ ವಾತಾವರಣ ನಿರ್ಮಾಣವಾಗಿದೆ. ಪ್ರತಿದಿನವುಪೊಲೀಸರು ಸೋಂಕಿಗೆ ಒಳಗಾಗಿ ಕರ್ತವ್ಯಕ್ಕೆ ಗೈರು ಆಗುತ್ತಿರುವ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಹೀಗಾಗಿಠಾಣೆಯಲ್ಲಿ ಸೆಂಟರಿಯಾಗಿ (ಠಾಣೆಯ ಸ್ವಾಗತಕಾರರಾಗಿ)ಕರ್ತವ್ಯ ನಿರ್ವಹಿಸುವವರು ಪಿಪಿಇ ಕಿಟ್‌ಗಳನ್ನು ಧರಿಸಿಕೆಲಸ ಮಾಡುತ್ತಿದ್ದ ದೃಶ್ಯ ಕಂಡು ಬಂದಿದೆ.

ಸಾರ್ವಜನಿಕರುನಾವು ಆಸ್ಪತ್ರೆಗೆ ಬಂದಿದ್ದೆವೆಯೋ ಅಥವಾ ಠಾಣೆಗೆಬಂದಿದ್ದೇವೆಯೋ ಎನಿಸುವಂತಾಗಿದೆ.ಸುಮಾರು 20 ದಿನಗಳಿಂದಲೂ ಠಾಣೆಗೆ ಸಾರ್ವಜನಿಕರಅನಗತ್ಯ ಪ್ರವೇಶವನ್ನು ನಿಷೇಧಿಸಿ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿ ಕಟ್ಟಲಾಗಿತ್ತು. ಸಾರ್ವಜನಿಕರನ್ನು ಠಾಣೆಯ ಹೊರಭಾಗ ದಲ್ಲಿ ನಿಲ್ಲಿಸಿ ದೂರುಗಳನ್ನು ಸ್ವೀಕರಿಸಿ ಪರಿಹಾರಗಳನ್ನುಸೂಚಿಸಿ ಕಳುಹಿಸಲಾಗುತಿತ್ತು. ಆದರೆ ಈಗ ಪಿಪಿಇ ಕಿಟ್‌ಗಳೊಂದಿಗೆ ಕರ್ತವ್ಯ ನಿರ್ವಹಿಸುವಂತ ಸ್ಥಿತಿ ನಿರ್ಮಾಣವಾಗಿರುವುದು ಸೋಂಕಿನ ತೀವ್ರತೆಗೆ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next