ವೆಂಕಟೇಶ ಜೋಶಿ ಹೇಳಿದರು.
Advertisement
ರವಿವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸ್ ಸೇವೆ ಮಹತ್ವದ್ದಾಗಿದೆ. ಸಮಾಜದಲ್ಲಿ ನಡೆಯುತ್ತಿರುವು ಅನ್ಯಾಯ ಸರಿಪಡಿಸಿ ಒಳ್ಳೆ ದಾರಿಗೆ ತರುವಲ್ಲಿ ಪೊಲೀಸ್ ಪಾತ್ರ ಮಹತ್ವದ್ದಾಗಿದೆ ಎಂದರು.
Related Articles
Advertisement
ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಕರ್ತವ್ಯದಲ್ಲಿ ನಿರತರಾಗಿ ಹುತಾತ್ಮರಾಗಿರುವ ರಾಜ್ಯದ 15 ಜನ ಪೊಲೀಸರು ಸೇರಿದಂತೆ ದೇಶಾದ 414 ಹುತಾತ್ಮ ಪೊಲೀಸರ ನಾಮಸ್ಮರಣೆ ಮಾಡಿ ಗೌರವ ಸಲ್ಲಿಸಿದರು.
1959 ಅಕ್ಟೋಬರ್ 21ರಂದು ಹಾಟ್ ಸ್ಟ್ರಿಂಗ್ಸ್ ಪೋಸ್ಟ್ ಹತ್ತಿರ ಗಡಿ ಭಾಗದಲ್ಲಿ ಭಾರತದ ಸಿಆರ್‌ಪಿಎಫ್ ಪೊಲೀಸ್ ದಳ, ಡಿಎಸ್‌ಪಿ ಕರಣ್ ಸಿಂಗ್ ಅವರ ನೇತೃತ್ವದಲ್ಲಿ ಪಹರೆ ಮಾಡುತ್ತಿರುವ ಸಮಯದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಚೀನಾ ಸೈನಿಕರು ಹಠಾತ್ ದಾಳಿ ನಡೆಸಿದರು. ಆದರೆ ನಮ್ಮ ಪೊಲೀಸ್ ಕೆಲವೇ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿ ವೀರ ಮರಣ ಹೊಂದಿದ್ದರು. ದೇಶಕ್ಕಾಗಿ ವೀರ ಮರಣ ಹೊಂದಿದ್ದ ಪೊಲೀಸರ ಸ್ಮರಣೆಗಾಗಿ ಈ ದಿನಾಚರಣೆ ಮಾಡಲಾಗಿದೆ ಎಂದು ಹುತಾತ್ಮ ದಿನಾಚರಣೆಯ ಕುರಿತು ವಿವರಣೆ ನೀಡಿದರು.
ನಂತರ ಪಥ ಸಂಚಲನ ಬಳಿಕ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮ ಪೋಲಿಸರಿಗೆ ಗೌರವ ಸಮರ್ಪಿಸಿದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಡಿವೈಸ್ಪಿ ಡಿ.ಅಶೋಕ ಇದ್ದರು.