ಮುಂಬೈ: ಬಿಜೆಪಿ ಮುಖಂಡ ಕಿರಿತ್ ಸೋಮೈಯಾ (Kirit Somaiya) ಪತ್ನಿ ಮೇಧಾ ಸೋಮೈಯಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಮುಂಬೈ ಕೋರ್ಟ್ (Mumbai Court) ಶಿವಸೇನಾ (UBT) ಸಂಸದ ಸಂಜಯ್ ರಾವತ್ ಗೆ ಸಾದಾ 15 ದಿನಗಳ ಜೈಲುಶಿಕ್ಷೆ ವಿಧಿಸಿದೆ.
ರಾಜ್ಯಸಭಾ ಸದಸ್ಯ ರಾವತ್ ಗೆ ಭಾರತೀಯ ದಂಡ ಸಂಹಿತೆ (IPC) ಕಲಂ 500 ಅಡಿ (ಮಾನನಷ್ಟ ಶಿಕ್ಷೆ) ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೋಷಿ ಎಂದು ತೀರ್ಪು ನೀಡಿ, 25,000 ಸಾವಿರ ರೂ. ದಂಡ ವಿಧಿಸಿದೆ.
ನನ್ನ ಹಾಗೂ ನನ್ನ ಗಂಡನ ವಿರುದ್ಧ ಸಂಜಯ್ ರಾವತ್ ಆಧಾರರಹಿತ ಆರೋಪ ಮಾಡಿದ್ದು, ಅವರ ಆರೋಪ ಸಂಪೂರ್ಣವಾಗಿ ಮಾನನಷ್ಟ ಪ್ರಕರಣವಾಗಿದೆ ಎಂದು ಮೇಧಾ ಸೋಮೈಯಾ ವಕೀಲರಾದ ವಿವೇಕಾನಂದ ಗುಪ್ತಾ ಮೂಲಕ ದೂರು ದಾಖಲಿಸಿದ್ದರು.
ಮೀರಾ ಭಯಾಂದರ್ ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿನ ಕೆಲವು ಸಾರ್ವಜನಿಕ ಶೌಚಾಲಯದ ನಿರ್ಮಾಣ ಹಾಗೂ ಕಾರ್ಯನಿರ್ವಹಣೆಯಲ್ಲಿ ನೂರು ಕೋಟಿ ರೂಪಾಯಿಗೂ ಅಧಿಕ ಹಗರಣದಲ್ಲಿ ಮೇಧಾ ಶಾಮೀಲಾಗಿರುವುದಾಗಿ ರಾವತ್ ಆರೋಪಿಸಿದ್ದರು.