ವಾಷಿಂಗ್ಟನ್: ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಪ್ರಮಾಣ ಸ್ವೀಕಾರ ಸಮಾ ರಂಭಕ್ಕೆ ಅಮೆರಿಕ ಸನ್ನದ್ಧವಾಗಿದ್ದು, ರಾಜ ಧಾನಿಯು ಪೊಲೀಸರ ಭದ್ರಕೋಟೆಯಾಗಿ ಮಾರ್ಪಾಡಾಗಿದೆ. ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರ ನಡೆಯುವ ಸಾಧ್ಯತೆ ಅಧಿಕ ವಾಗಿರುವ ಕಾರಣ, ಭಾರೀ ಪ್ರಮಾಣದ ಭದ್ರತೆ ಏರ್ಪಡಿಸಲಾಗಿದೆ.
ವಾಷಿಂಗ್ಟನ್ ಡಿಸಿಯಲ್ಲಿ ಬುಧವಾರ ಕಾರ್ಯಕ್ರಮ ನಡೆಯಲಿದ್ದು, ಮುನ್ನೆಚ್ಚರಿಕ ಕ್ರಮವಾಗಿ, ಎಲ್ಲ ರಸ್ತೆಗಳನ್ನೂ ಮುಚ್ಚಲಾ ಗಿದ್ದು, ವೈರ್ ಬೇಲಿಗಳನ್ನು ಹಾಕಲಾಗಿದೆ. 25 ಸಾವಿರಕ್ಕೂ ಅಧಿಕ ನ್ಯಾಷನಲ್ ಗಾರ್ಡ್ ಗಳು, ಸಾವಿರಾರು ಪೊಲೀಸರು ಹಾಗೂ ಇತರೆ ಭದ್ರತ ಸಿಬಂದಿಯನ್ನೂ ರಾಜಧಾನಿ ಯಲ್ಲಿ ನಿಯೋಜಿಸಲಾಗಿದೆ. 8 ಅಡಿ ಎತ್ತರದ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸ ಲಾಗಿದೆ. ಜ. 6ರ ಮಾದರಿ ಹಿಂಸಾಚಾರದ ಭೀತಿಯಿರುವ ಕಾರಣ ಇಡೀ ನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆ ಆರಂಭ: ಸೋಮವಾರವೇ ಅಮೆರಿಕದ ಹಲವು ಪ್ರಾಂತ್ಯಗಳಲ್ಲಿ ಟ್ರಂಪ್ ಹಿಂಬಾಲಕರಿಂದ ಪ್ರತಿಭಟನೆಗಳು ನಡೆದಿವೆ. ಆಯಾ ಪ್ರಾಂತ್ಯಗಳ ಪ್ರಧಾನ ಆಡಳಿತ ಕಚೇರಿಗಳು, ರಸ್ತೆಗಳಲ್ಲಿ ಸಣ್ಣ ಪುಟ್ಟ ಗುಂಪುಗಳು ಘೋಷಣೆ ಕೂಗುತ್ತಾ, ರೈಫಲ್‌ಗಳನ್ನು ಹಿಡಿದು ಪ್ರತಿಭಟನೆ ನಡೆಸಿವೆ.
ಸೀರೆ ಉಡುವರೇ ಕಮಲಾ ಹ್ಯಾರಿಸ್? :
ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಕಮಲಾ ಸೀರೆಯುಟ್ಟು ಬರುತ್ತಾರೋ, ಸೂಟು ಧರಿಸಿಕೊಂಡು ಬರುತ್ತಾರೋ ಎಂಬ ಚರ್ಚೆ ಈಗ ಶುರುವಾ ಗಿದೆ. ಕಮಲಾ ಹಲವು ಬಾರಿ ತಮ್ಮ ಸಾಂಸ್ಕೃತಿಕ ಹಿನ್ನೆಲೆ ಬಗ್ಗೆ ಪ್ರಸ್ತಾವಿಸಿ, ಅದರ ಬಗ್ಗೆ ಹೆಮ್ಮೆ ಪಡುವುದಾಗಿಯೂ ಹೇಳಿದ್ದಾರೆ. ಅಲ್ಲದೆ, ಚುನಾವಣ ಪ್ರಚಾರದ ವೇಳೆ ಕಮಲಾಗೆ ಅಭಿಮಾನಿಯೊಬ್ಬರು, “ನೀವು ಪದಗ್ರಹಣದ ವೇಳೆ ಸೀರೆ ಉಡುತ್ತೀರಾ’ ಎಂದು ಪ್ರಶ್ನಿಸಿದಾಗ, ಕಮಲಾ “ಮೊದಲು ಗೆಲ್ಲೋಣ’ ಎಂದಷ್ಟೇ ಉತ್ತರಿಸಿದ್ದರು. ಈಗ ಜಾಲತಾಣಗಳಲ್ಲಿ ಅನೇಕರು, “ಕಮಲಾ ಸೀರೆಯುಟ್ಟು ಬಂದರೆ ಚೆನ್ನಾಗಿ ರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕಮಲಾರ ಆಯ್ಕೆ ಯಾವುದು ಎನ್ನುವುದು ಗೊತ್ತಾಗಬೇಕಿದ್ದರೆ ಇನ್ನೂ ಒಂದು ದಿನ ಕಾಯಬೇಕು.