Advertisement

ಹುಬ್ಬಳ್ಳಿ ಗಲಭೆ ಮಾಸ್ಟರ್ ಮೈಂಡ್ ಗಾಗಿ ಪೊಲೀಸರ ಶೋಧ; ಆರೋಪಿಗಳು ಕೇಂದ್ರಕಾರಾಗೃಹಕ್ಕೆ ಶಿಫ್ಟ್

02:32 PM Apr 19, 2022 | Team Udayavani |

ಹುಬ್ಬಳ್ಳಿ: ಹಳೇ ಹಬ್ಬಳ್ಳಿಯಲ್ಲಿ ಶನಿವಾರ ನಡೆದ ಗಲಭೆಯ ಹಿಂದಿನ ಮಾಸ್ಟರ್‌ ಮೈಂಡ್ ಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಕಳೆದೆರಡು ದಿನಗಳಿಂದ ನಾಪತ್ತೆಯಾಗಿರುವ ಮಂಟೂರ ರಸ್ತೆ ಮಿಲ್ಲತ್ ನಗರದ ಮೌಲ್ವಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈತ ಠಾಣೆ ಎದುರು ಸೇರಿದ್ದ ಯುವಕರ ಗುಂಪಿಗೆ ಪೊಲೀಸ್ ಕಮೀಷನರ್ ಕಾರು ಹತ್ತಿ ಪ್ರತಿಭಟಿಸುವಂತೆ ಪ್ರಚೋದಿಸಿದ್ದ. ಅಲ್ಲದೇ ಗಲಭೆಗೆ ಮಸಲತ್ತು ಮಾಡಿದ್ದ ಎನ್ನಲಾಗುತ್ತಿದೆ.

ಇದನ್ನೂ ಓದಿ:ಅಣ್ಣ-ತಂಗಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಬಸ್ ಢಿಕ್ಕಿ: ಚಕ್ರ ಹರಿದು ಅಣ್ಣನ ಎದುರೇ ತಂಗಿ ಸಾವು

ಮೌಲ್ವಿ ಸೇರಿದಂತೆ ಕಿಡಿಗೇಡಿಗಳ ಬಂಧನಕ್ಕೆ ತನಿಖಾ ತಂಡ ರಚಿಸಲಾಗಿದ್ದು, ಪ್ರತ್ಯೇಕವಾಗಿ ಎಂಟು ತಂಡಗಳಲ್ಲಿ ಬೆಳಗಾವಿ, ಶಿಗ್ಗಾವಿ, ಸವಣೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಕಾರ್ಯಾಚರಣೆಗೆ ತೆರಳಿದ್ದಾರೆ. ಪೊಲೀಸರು ಮೌಲ್ವಿಗೆ ಖುದ್ದು ಶರಣಾಗತಿ ಆಗುವಂತೆ ಅವರ ಕುಟುಂಬ ವರ್ಗದವರಿಗೆ ಖಡಕ್ ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ: ಗಲಭೆ ಪ್ರಕರಣದಲ್ಲಿ ಬಂಧಿತರಾದ ಎಲ್ಲ103 ಜನರನ್ನು ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಮಂಗಳವಾರ ಬೆಳಗ್ಗೆ ಸ್ಥಳಾಂತರಿಸಲಾಗಿದೆ. ಪ್ರಕರಣದಲ್ಲಿ ಬಂಧಿತರಾಗಿದ್ದವರನ್ನು ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಡಿಜಿಪಿಯವರ ಮನವಿ ಮೇರೆಗೆ ಕೋರ್ಟ್ ಅವರನ್ನೆಲ್ಲ ಕಲಬುರಗಿ ಕಾರಾಗೃಹಕ್ಕೆ ಸ್ಥಳಾಂತರಿಸಲು ಅನುಮತಿ ನೀಡಿದೆ. ಮಂಗಳವಾರ ಎಲ್ಲರನ್ನು ಮೂರು ವಾಹನಗಳಲ್ಲಿ ಧಾರವಾಡ ಕಾರಾಗೃಹದಿಂದ ಕಲಬುರಗಿ ಕಾರಾಗೃಹ ಕ್ಕೆ ಸ್ಥಳಾಂತರಿಸಲಾಯಿತು.

Advertisement

ಎ. 30ರ ವರೆಗೆ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಗಲಭೆ ಪ್ರಕರಣದಲ್ಲಿ ಬಂಧಿತರಾಗಿದ್ದ ಒಟ್ಟು 103 ಜನರನ್ನು ಪೊಲೀಸರು ನಗರದ 4ನೇ ಎಸಿಜೆ, ಜೆಎಂಎಫ್ ಸಿ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಹಾಜರುಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next