Advertisement
ಉದ್ಯಮಿಗಳ ಕಿಡ್ನಾಪ್ ಮತ್ತು 50 ಲಕ್ಷ ರೂಪಾಯಿ ಹಫ್ತಾ ಪಡೆದ ಪ್ರಕರಣದಲ್ಲಿ ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದು ಹೆಣ್ಣೂರು ಪೊಲೀಸರು ದಾಳಿ ನಡೆಸಿದ್ದಾರೆ.
Related Articles
Advertisement
ಮಂಚದಲ್ಲಿ ಹಣ !ಬಾಕ್ಸ್ ರೀತಿಯ ಮಂಚದಲ್ಲಿ ಕೋಟಿಗಳಷ್ಟು ಹಣವನ್ನು ಕೂಡಿಟ್ಟಿದ್ದಿರುವುದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದರು. ಮನೆಯಲ್ಲಿದ್ದ ನಾಗನ ಪತ್ನಿ ಲಕ್ಷ್ಮಿ ಮತ್ತು ಪುತ್ರಿಯನ್ನೂ ಈ ಬಗ್ಗೆ ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಮನೆಯ ಟೆರೇಸ್ ಬಾಗಿಲಿನಿಂದ ಪರಾರಿ ? ದಾಳಿ ವೇಳೆ ಬಾಂಬ್ ನಾಗ ಮನೆಯಲ್ಲಿದ್ದ ಎನ್ನಲಾಗಿದ್ದು, ಮನೆಯ ಟೆರೇಸ್ ಮೂಲಕ ಹಾರಿ ಪರಾರಿಯಾಗಿರುವ ಸಾಧ್ಯತಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಮನೆಯ ಮೇಲ್ ಛಾವಣಿಯ ಬಾಗಿಲು ತೆರೆದಿರುವುದು ಪೊಲೀಸರ ಈ ಅನುಮಾನಕ್ಕೆ ಕಾರಣವಾಗಿದೆ. ವ್ಯಾಪಕ ಶೋಧ ಪೊಲೀಸರು ನಾಗನಿಗಾಗಿ ಭಾರೀ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು , ಸುತ್ತಮುತ್ತಲೂ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.