ಉಳ್ಳಾಲ: ಸೋಮೇಶ್ವರ ಬಳಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದಕ್ಕೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಮಹಿಳಾ ಪಿಂಪ್ ಗಳು ಹಾಗೂ ಮೂವರು ಗ್ರಾಹಕರನ್ನು ಬಂಧಿಸಿದ್ದಾರೆ. ಯುವತಿಯರನ್ನು ಪೂರೈಸುತ್ತಿದ್ದಾಕೆ ತಲೆಮರೆಸಿಕೊಂಡಿದ್ದಾಳೆ.
ಖಚಿತ ಮಾಹಿತಿಯಂತೆ ಸಿಸಿಬಿ ಸಿಬಂದಿ ಉಳ್ಳಾಲ ಪೊಲೀಸರೊಂದಿಗೆ ದಾಳಿ ನಡೆಸಿದ್ದಾರೆ. ಪಿಂಪ್‌ಗ್ಳ ಮೇಲೆ ಪ್ರಕರಣ ದಾಖಲಾಗಿಲ್ಲ.
ಪೊಲೀಸ್ ಆಯುಕ್ತ ಡಾ| ಪಿ.ಎಸ್. ಹರ್ಷ ಅವರ ಮಾರ್ಗದರ್ಶನದಲ್ಲಿ ಉಪ ಆಯುಕ್ತರಾದ ಅರುಣಾಂಶು ಗಿರಿ, ಲಕ್ಷ್ಮೀ ಗಣೇಶ್ ಮಾರ್ಗದರ್ಶನ ದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಿವ ಪ್ರಕಾಶ್ ಆರ್. ನಾಯ್ಕ, ಪಿಎಸ್‌ಐ ಕಬ್ಟಾಳ್‌ರಾಜ್ ಎಚ್.ಡಿ., ಸಿಸಿಬಿ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.
ಮಂಗಳೂರು ಪೊಲೀಸ್ ಆಯುಕ್ತ ಡಾ| ಪಿ.ಎಸ್.ಹರ್ಷ ಅವರ ಆದೇಶದಂತೆ ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀಗಣೇಶ್ ಹಾಗೂ ಉತ್ತರ ಉಪವಿಭಾಗದ ಎಸಿಪಿ ಶ್ರೀ ನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜಪೆ ಠಾಣಾ ಪೊಲೀಸ್ ನಿರೀಕ್ಷಕ ಕೆ.ಆರ್. ನಾಯಕ್, ಪಿಎಸ್‌ಐ ಸತೀಶ್ ಎಂ.ಪಿ., ಎಎಸ್‌ಐ ರಾಮ ಪೂಜಾರಿ, ಹೆಡ್‌ಕಾನ್ಸ್ ಟೇಬಲ್ ಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್ ಶೆಟ್ಟಿ, ಸತ್ಯನಾರಾಯಣ ಕೆ., ಪುರುಷೋತ್ತಮ, ಸಂತೋಷ್ ಸುಳ್ಯ, ಕಾನ್ಸ್‌ಟೆಬಲ್ಗಳಾದ ಮಂಜುನಾಥ, ವಕೀಲ ಲಮಾಣಿ, ಕುಮಾರಸ್ವಾಮಿ ಅವರು ಭಾಗವಹಿಸಿದ್ದರು.
Advertisement
ಮಂಜೇಶ್ವರದ ಅರುಂಧತಿ ಹಾಗೂ ಜಪ್ಪಿನಮೊಗರಿನ ಸರಸ್ವತಿ ಬಂಧಿತರು. ಬೆಂಗಳೂರಿನಿಂದ ಯುವತಿಯರನ್ನು ಪೂರೈಕೆ ಮಾಡುತ್ತಿದ್ದ ರಂಜಿತಾ ತಲೆಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇಲ್ಲಿ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾ ಗಿದ್ದು, ಮೂವರು ಗ್ರಾಹಕರನ್ನು ಬಂಧಿಸಲಾಗಿದೆ. ಬಂಧಿತರಿಂದ 20,800 ರೂ., 2 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಮನೆ ಸ್ವಚ್ಛಗೊಳಿಸಲು ಕೀ ಪಡೆದಿದ್ದರು:
ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮಾಲಕ ನಿಧನ ಹೊಂದಿ ಹಲವು ವರ್ಷಗಳು ಕಳೆದಿದ್ದು, ಅವರ ಸ್ನೇಹಿತ ಮಾಧವ ಎಂಬವರು ಮನೆಯನ್ನು ನೋಡಿಕೊಳ್ಳುತ್ತಿದ್ದರು. ಈ ಮನೆಯಲ್ಲಿ ಬಾಡಿಗೆಗಿದ್ದವರು ತಿಂಗಳ ಹಿಂದೆ ಮನೆ ಖಾಲಿ ಮಾಡಿದ್ದು, ಎರಡು ದಿನಗಳ ಹಿಂದೆ ಮಂಜೇಶ್ವರ ನಿವಾಸಿ ಅರುಂಧತಿ ಮನೆಯನ್ನು ಬಾಡಿಗೆಗೆ ಪಡೆದಿದ್ದು, ಸೆಪ್ಟಂಬರ್‌ನಿಂದ ವಾಸ ಮಾಡುತ್ತೇನೆ ಎಂದು ತಿಳಿಸಿದ್ದರು. ಈ ನಡುವೆ ಮನೆಯನ್ನು ಸ್ವಚ್ಛ ಮಾಡಲೆಂದು ಕೀ ಪಡೆದು ವೇಶ್ಯಾವಾಟಿಕೆ ಆರಂಭಿಸಿದ್ದಳು.