ಬೆಳಗಾವಿ: ಹೊರ ರಾಜ್ಯದ ಯುವತಿಯರನ್ನು ಕರೆಯಿಸಿ ಸದಾಶಿವ ನಗರದ ಬಸ್ ನಿಲ್ದಾಣ ಬಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಎಪಿಎಂಸಿ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ
ಬೈಲಹೊಂಗಲ ತಾಲೂಕಿನ ವನ್ನೂರ ಗ್ರಾಮದ ಮಾರುತಿ ಬಾಳಪ್ಪ ಕೆಳಗೇರಿ ಹಾಗೂ ಹುಕ್ಕೇರಿ ತಾಲೂಕಿನ ಸಿದ್ದಪ್ಪ ಪುಂಡಲೀಕ ಚೌಗಲಾ ಎಂಬಾತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ.
ಇದನ್ನೂ ಓದಿ:ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ
ಸ್ವಿಪ್ಟ್ ಕಾರನ್ನುಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಪಿಎಂಸಿ ಇನ್ಸ್ ಪೆಕ್ಟರ್ ಜಾವೇದ್ ಮುಶಾಪುರಿ ಹಾಗೂ ತಂಡ ದಾಳಿ ನಡೆಸಿದೆ.
ಶನಿವಾರ ರಾತ್ರಿಯಷ್ಟೇ ನಗರದ ಕಾಂಗ್ರೆಸ್ ರಸ್ತೆಯಲ್ಲಿರುವ ನ್ಯೂ ಗೇಟ್ ವೇ ಯೂನಿಸೆಕ್ಸ್ ಸ್ಪಾ ಮಸಾಜ್ ಸೆಂಟರ್ ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಇಎನ್ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದರು