Advertisement

Kunigal ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: 11 ಮಂದಿ ಬಂಧನ, ಹಣ ವಶ

08:55 PM Nov 21, 2023 | Team Udayavani |

ಕುಣಿಗಲ್‌: ಜೂಜು ಅಡ್ಡೆ ಮೇಲೆ ಅಮೃತೂರು ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿ, ಪಣಕ್ಕೆ ಇಟ್ಟಿದ್ದ 1.75 ಲಕ್ಷ ರೂ. ನಗದು, ಮೂರು ದ್ವಿಚಕ್ರ ವಾಹನ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ಎಡಿಯೂರು ಹೋಬಳಿ ರಾಮನಾಯಕನಪಾಳ್ಯ ಗ್ರಾಮ ಬಳಿ ಮಂಗಳವಾರ ನಡೆದಿದೆ.

Advertisement

ಕುಣಿಗಲ್‌ನ ಕೆ.ವಿ.ಹರೀಶ್‌, ಕಾಳೇನಹಯಳ್ಳಿ ಗ್ರಾಮದ ಕೆ.ಜಿ.ಮನು, ನಾಗಮಂಗಲದ ರಮೇಶ್‌, ಚನ್ನಪಟ್ಟಣದ ರವಿಕುಮಾರ್‌, ಪಾಂಡವಪುರದ ಎಚ್‌.ಕೆ.ನವೀನ್‌, ಅಭಿಷೇಕ್‌ಗೌಡ, ಬೆಂಗಳೂರಿನ ಸತೀಶ್‌, ಜಿನ್ನಾಗರದ ಕಿರಣ್‌, ಮಾರ್ಕೋನಹಳ್ಳಿ ಗ್ರಾಮದ ಸಿ.ಎನ್‌.ಮದನ್‌, ಕೆಂಪನಹಳ್ಳಿ ಗ್ರಾಮದ ಸುರೇಶ್‌ ಬಂಧಿತರು. ಮೂವರು ತಲೆ ಮರೆಸಿಕೊಂಡಿದ್ದಾರೆ. ಒಟ್ಟು 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಲಕ್ಷ್ಮೀಕಾಂತ್‌ ನೇತೃತ್ವದಲ್ಲಿ ಸಿಪಿಐ ಮಾದ್ಯನಾಯಕ್‌, ಪಿಎಸ್‌ಐ ಶಮಂತ್‌ಗೌಡ, ಸಿಬ್ಬಂದಿ ಟಿ.ಕೆ.ಪ್ರಶಾಂತ, ರಂಗಪ್ಪ, ಭಗವಂತ, ಸುದರ್ಶನ, ರಂಗನಾಥ್‌, ನಾರಾಯಣಸ್ವಾಮಿ, ಹನುಮಂತ, ಅಶೋಕ್‌ ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next