Advertisement
ಈ ಬಾರಿ ತಾಲೂಕು ಖಜಾನೆಗಳ ಬದಲು, ಜಿಲ್ಲಾ ಖಜಾನೆಯಿಂದಲೇ ಆಯಾ ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಪ್ರಶ್ನೆ ಪತ್ರಿಕೆಯನ್ನು ರವಾನೆ ಮಾಡಲಾಗಿದ್ದು ಸರಿಯಾದ ಸಮಯಕ್ಕೆ ಪತ್ರಿಕೆಯನ್ನು ತಲುಪಿಸಲಾಯಿತು. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಸಕಾಲಕ್ಕೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳು ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ಬರೆದರು. ಮೊದಲ ದಿನ ಗುರುವಾರ ಜೀವಶಾಸ್ತ್ರ ಮತ್ತು ಇತಿಹಾಸ ವಿಷಯಗಳ ಪರೀಕ್ಷೆ ನಡೆಯಿತು.
ಕೋರಮಂಗಲ ಪಿಯು ಕಾಲೇಜಿನ ಮುಂದೆ ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆಯಲು ಕೊನೆ ಕ್ಷಣದವರೆಗೂ ಪ್ರಯ ತ್ನಿಸಿದರು.
ಅಂಗಲಾಚಿ ಬೇಡಿದರೂ ಪ್ರಯೊಜನ ವಾಗಲಿಲ್ಲ. ಇದೇ ರೀತಿ ಹಾವೇರಿಯಲ್ಲಿಯೂ ಹಾಜರಾತಿ ಕೊರತೆಯಿಂದ 9 ವಿದ್ಯಾರ್ಥಿಗಳು ಪ್ರವೇಶ ಸಿಗದೇ ಪರಿಕ್ಷಾ ಕೇಂದ್ರದ ಹೊರಗೆ ಕಣ್ಣಿರಿಟ್ಟರು.ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ಕಲಬುರಗಿಯಲ್ಲಿ ಮೂವರು ಮತ್ತು ದಾವಣಗೆರೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
Related Articles
Advertisement
ಐವರು ವಿದ್ಯಾರ್ಥಿಗಳು ಡಿಬಾರ್ ಆಗಿರುವುದು ಬಿಟ್ಟರೆ ರಾಜ್ಯಾದ್ಯಂತ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಎಲ್ಲೆಡೆ ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳು ತಲುಪಿವೆ. ಯಾವುದೇ ಗೊಂದಲ, ಅಕ್ರಮ ನಡೆದಿಲ್ಲ. ಈ ಬಾರಿಯ ಪರೀಕ್ಷೆಗೆ ಅನುಸರಿಸಲಾಗಿರುವ “ಕರ್ನಾಟಕ ಸುರಕ್ಷಾ ಪರೀಕ್ಷಾ ವ್ಯವಸ್ಥೆ’ ತುಂಬಾ ಉಪಯೋಗಿಯಾಗಿದೆ.– ಸಿ. ಶಿಖಾ,
ಪಪೂ ಶಿಕ್ಷಣ ಇಲಾಖೆ ನಿರ್ದೇಶಕಿ ವಿದ್ಯಾರ್ಥಿ ಬಿ.ಸುಹೇಲ್ ಉತ್ತರ ಪತ್ರಿಕೆಯೊಂದಿಗೆ ಪರಾರಿಯಾಗಿರುವುದರಿಂದ ಆತನನ್ನು ಡಿಬಾರ್ ಮಾಡಲಾಗಿದೆ. ಕನಿಷ್ಠ 3 ವರ್ಷಗಳ ಕಾಲ ಆತ ಪರೀಕ್ಷೆಗೆ ಕೂರುವಂತಿಲ್ಲ. ವಿದ್ಯಾರ್ಥಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
– ವಿಜಯಾನಂದ, ಜಿಲ್ಲಾ ಉಪ
ನಿರ್ದೇಶಕ, ಪಪೂ ಶಿಕ್ಷಣ ಇಲಾಖೆ,ದಾವಣಗೆರೆ