Advertisement

ಪೊಲೀಸ್‌ ಹುದ್ದೆ ಮಹತ್ತರ ಜವಾಬ್ದಾರಿ: ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಡಾ|ಚಂದ್ರಗುಪ್ತ

12:40 AM Apr 03, 2023 | Team Udayavani |

ಮಹಾನಗರ : ಸಮವಸ್ತ್ರ ಹಾಕಿ ಕೊಂಡು ತಾನೊಬ್ಬ ಕೇವಲ ಸರಕಾರಿ ನೌಕರ ಎಂಬ ಮನಃಸ್ಥಿತಿಯಲ್ಲಿ ಪೊಲೀಸರಿಂದ ಸಮಾಜಕ್ಕೆ ಯಾವುದೇ ರೀತಿಯ ಸೇವೆ ನೀಡಲು ಸಾಧ್ಯವಿಲ್ಲ.

Advertisement

ಪೊಲೀಸ್‌ ಹುದ್ದೆ ಮಹತ್ತರವಾದ ಜವಾಬ್ದಾರಿ ಎಂಬುದನ್ನು ಮನ ದಟ್ಟು ಮಾಡಿ ಕರ್ತವ್ಯ ನಿರ್ವಹಿಸಬೇಕು ಎಂದು ಮಂಗಳೂರು ಪಶ್ಚಿಮ ವಲಯ ಪೊಲೀಸ್‌ ಉಪ ಮಹಾ ನಿರೀಕ್ಷಕ ಡಾ| ಚಂದ್ರಗುಪ್ತ ಅವರು ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ.

ನಗರದ ಡಿ.ಎ.ಆರ್‌. ಪೊಲೀಸ್‌ ಕವಾಯತು ಮೈದಾನದಲ್ಲಿ ರವಿ ವಾರ ಮಂಗಳೂರು ಪೊಲೀಸ್‌ ಕಮಿಷನರೆಟ್‌, ದ.ಕ. ಜಿಲ್ಲಾ ಪೊಲೀಸ್‌ ಮತ್ತು ಕೆಎಸ್‌ಆರ್‌ಪಿ 7ನೇ ಪಡೆ ಘಟಕಗಳ ಆಶ್ರಯದಲ್ಲಿ ಆಯೋಜಿ ಸಲಾದ ರಾಜ್ಯ ಪೊಲೀಸ್‌ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಅವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವ ಗುರುತರ ಜವಾ ಬ್ದಾರಿಯ ಭಾರ ಪೊಲೀಸರ ಹೆಗಲ ಮೇಲಿರುತ್ತದೆ. ಅದನ್ನು ಸಮರ್ಥ ವಾಗಿ ನಿಭಾಯಿಸಿದಾಗ ಸಮಾಜದಲ್ಲಿ ಪೊಲೀಸರ ಬಗ್ಗೆ ಉತ್ತಮ ಭಾವನೆ ಮೂಡಲು ಸಾಧ್ಯ ಎಂದರು.

ಸಮ್ಮಾನ
ಕಾರ್ಯಕ್ರಮದಲ್ಲಿ 2022-23ನೇ ಸಾಲಿನಲ್ಲಿ ನಿವೃತ್ತರಾದ 61 ಮಂದಿ ಪೊಲೀಸ್‌ ಅಧಿಕಾರಿ, ಸಿಬಂದಿಯನ್ನು ಗೌರವಿಸಲಾಯಿತು. ಆರಂಭದಲ್ಲಿ ವಿವಿಧ ಪೊಲೀಸ್‌ ತುಕಡಿಗಳಿಂದ ಆಕರ್ಷಕ ಪಥ ಸಂಚಲನ, ಗೌರವ ವಂದನೆ ನಡೆಯಿತು.

Advertisement

ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಸ್ವಾಗತಿಸಿದರು. ದ.ಕ. ಎಸ್‌ಪಿ ಡಾ| ವಿಕ್ರಂ ಅಮಟೆ ವರದಿ ವಾಚಿಸಿದರು. ಡಿಸಿಪಿ ದಿನೇಶ್‌ ಕುಮಾರ್‌ ವಂದಿಸಿದರು.
ಮಂಗಳೂರು ನಗರ ಡಿಸಿಪಿ ಅಂಶುಕುಮಾರ್‌, ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮಪ್ಪ ಎನ್‌.ಎಂ. ಉಪಸ್ಥಿತರಿದ್ದರು. ಗಜೇಂದ್ರ ಜಿ.ಬಿ. ನಿರೂಪಿಸಿದರು.

ನಿವೃತ್ತರನ್ನು ಗೌರವಿಸಿ: ಅಹದ್‌
ಉಡುಪಿ: ಕಾನೂನು ಸುವ್ಯವಸ್ಥೆ, ಅಪರಾಧ ಪ್ರಕರಣಗಳ ತನಿಖೆ, ನಾಗರಿಕ ಹಕ್ಕುಗಳ ಪಾಲನೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆ ಸಮಾಜದಲ್ಲಿ ವಿಶಿಷ್ಟ ಸೇವೆಯನ್ನು ನೀಡುತ್ತಿದೆ. ತಮ್ಮ ಜೀವನದಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸಧಿಕಾರಿ, ಸಿಬಂದಿಯನ್ನು ಗೌರವದಿಂದ ಕಾಣಬೇಕಿದೆ ಎಂದು ಕರಾವಳಿ ಕಾವಲು ಪಡೆ ಅಧೀಕ್ಷಕ ಅಬ್ದುಲ್‌ ಅಹದ್‌ ಹೇಳಿದರು.
ರವಿವಾರ ಪೊಲೀಸ್‌ ಕವಾಯತು ಚಂದು ಮೈದಾನದಲ್ಲಿ ಆಯೋಜಿಸಲಾದ ಪೊಲೀಸ್‌ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಿವೃತ್ತ ಸಿಐ ಜಯಂತ್‌ ಎಂ. ಗೌರವ ವಂದನೆ ಸ್ವೀಕರಿಸಿದರು. ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಕ್ಷಯ್‌ ಎಂ. ಹಾಕೆ ಮಚ್ಚೀಂದ್ರ ಸ್ವಾಗತಿಸಿ, ಪೊಲೀಸ್‌ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ನಿವೃತ್ತ ಪೊಲೀಸ್‌ ಅಧಿಕಾರಿ, ಸಿಬಂದಿಗೆ ಕಲ್ಯಾಣ ನಿಧಿಯನ್ನು ವಿತರಿಸಲಾಯಿತು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌. ಟಿ. ಸಿದ್ದಲಿಂಗಪ್ಪ ವಂದಿಸಿದರು. ಮಲ್ಪೆ ಸಿಪಿಐ ಸುರೇಶ್‌ ಎಚ್‌. ಎಸ್‌, ಸಿಎಸ್‌ಪಿ ಕಂಟ್ರೋಲ್‌ ರೂಂ ಪಿಎಸ್‌ಐ ಬಿ. ಮನಮೋಹನ್‌ ರಾವ್‌ ನಿರೂಪಿಸಿದರು.

ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪೊಲೀಸ್‌ ನಿರೀಕ್ಷಕ ರಾಘವ ಎಸ್‌. ಪಡೀಲ್‌ ಮಾತನಾಡಿ, ಪೊಲೀಸರು ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆ, ಕೌಶಲ, ಜ್ಞಾನವನ್ನು ಹೊರತರುವಲ್ಲಿ ಪ್ರಯತ್ನಿಸಬೇಕು. ಪ್ರಾಮಾಣಿಕ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಾಗ ಒಂದು ದಿನ ಗೌರವಕ್ಕೆ ಪಾತ್ರರಾಗುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next