Advertisement
ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವ ಜನಿಕರ ಕರೆಗಳನ್ನು ಸ್ವೀಕರಿಸಿ ಅವರು ಈ ಸೂಚನೆ ನೀಡಿದರು.
Related Articles
Advertisement
ಫುಟ್ಪಾತ್‌ನಲ್ಲಿ ಪಾರ್ಕಿಂಗ್
ಕಾವೂರಿನಲ್ಲಿ ಫುಟ್ಪಾತ್‌ನಲ್ಲಿ ವಾಹನ ಪಾರ್ಕಿಂಗ್ ಮತ್ತು ಮೀನು ಮಾರಾಟ ನಡೆಯುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಕಮಿಷನರ್ ಈ ಬಗ್ಗೆ ಕೂಡಲೇ ಕಾರ್ಯಾ ಚರಣೆ ನಡೆಸಲಾಗುವುದು ಎಂದು ತಿಳಿಸಿದರು. ಬಿಜೈ ಕೆಎಸ್‌ಆರ್‌ಟಿಸಿ ಬಳಿ ರಸ್ತೆ ಬದಿ ಜನರು ಮಲಗುತ್ತಿರುವ ಬಗ್ಗೆ ಬೀಟ್ ಪೊಲೀಸರು ಪರಿಶೀಲಿಸಿ ಕ್ರಮ ಜರಗಿಸಲಿದ್ದಾರೆ ಎಂದರು.
ಮಳೆ ನೀರು ರಸ್ತೆಯಲ್ಲಿ
ಕೂಳೂರು ಸೇತುವೆಯ ಮೇಲೆ ನೀರು ಹರಿಯಲು ವ್ಯವಸ್ಥೆ ಮಾಡಿದ್ದ ತೂಬುಗಳನ್ನು ಇತ್ತೀಚೆಗೆ ಡಾಮರು ಹಾಕುವ ವೇಳೆ ಮುಚ್ಚಿರುವುದಿರಿಂದ ಮಳೆ ನೀರು ರಸ್ತೆಯ ಮೇಲೆ ತುಂಬಿ ನಿಂತು ಡಾಮರು ಕಿತ್ತು ಹೋಗಿ ರಸ್ತೆಯು ಮತ್ತೆ ಗುಂಡಿಮಯವಾಗುವ ಭೀತಿ ಇದೆ ಎಂದು ನಾಗರಿಕರೊಬ್ಬರು ತಿಳಿಸಿದರು. ಈ ಕುರಿತು ಎನ್‌ಎಚ್ಎಐ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಲೇಡಿಹಿಲ್ ವೃತ್ತ: ಅಧ್ಯಯನ ನಡೆಸಿ ಕ್ರಮ
ಲೇಡಿಹಿಲ್ ವೃತ್ತದಲ್ಲಿ ಫ್ರೀ ಲೆಫ್ಟ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ತಿರುವಿನಲ್ಲಿಯೇ ಬಸ್ ನಿಲುಗಡೆಗೆ ಅವಕಾಶ ನೀಡಲಾಗಿದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ನಾಗರಿಕರು ಕಮಿಷನರ್ ಗಮನಕ್ಕೆ ತಂದರು. ಈ ವೃತ್ತದ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದು 118ನೇ ಫೋನ್ ಇನ್ ಕಾರ್ಯ ಕ್ರಮವಾಗಿದ್ದು, ಒಟ್ಟು 27 ಕರೆಗಳು ಬಂದವು.
ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ, ಡಿಸಿಪಿಗಳಾದ ಹನುಮಂ ತರಾಯ, ಲಕ್ಷ್ಮೀಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ಸುಕುಮಾರನ್, ಸುಧಾ ಕರ್, ಪೂವಪ್ಪ ಎಚ್. ಎಂ., ಎಎಸ್‌ಐ ಪಿ. ಯೋಗೇಶ್ವರನ್, ಪುರುಷೋತ್ತಮ ಉಪಸ್ಥಿತರಿದ್ದರು.
ಪ್ರಮುಖ ದೂರು
•ನಗರದ ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ಗಳು ಇಲ್ಲದ ಕಾರಣ ವಾಹನ ಸವಾರರಿಗೆ ಅನನುಕೂಲ ಆಗುತ್ತಿದೆ.
• ಉರ್ವಸ್ಟೋರ್,ಬೈಕಂಪಾಡಿಗಳಲ್ಲಿ ಬಸ್ ನಿಲ್ಲಿಸಲು ಬಸ್ ಬೇ ನಿರ್ಮಿಸಿ.
• ಬಬ್ಬುಕಟ್ಟೆ ಶಾಲೆಯ ಬಳಿ ಹಾಕಿದ್ದ ಹಂಪ್ ಕಳಚಿ ಹೋಗಿದ್ದು, ಪುನರ್ ನಿರ್ಮಾಣ ಮಾಡ ಬೇಕು.
• ಮುಳಿಹಿತ್ಲುವಿಗೆ ಪರವಾನಿಗೆ ಪಡೆದಿ ರುವ ಸಿಟಿ ಬಸ್‌ಗಳು ಕೆಲವೊಮ್ಮೆ ಟ್ರಿಪ್ ಕಟ್ ಮಾಡಿ ಮಂಗಳಾದೇವಿಯಿಂದಲೇ ವಾಪಸಾಗುತ್ತಿವೆ.
• ಕದ್ರಿ ಶಿವಬಾಗ್ ಮತ್ತು ಬೆಂದೂರ್‌ವೆಲ್ ಬಳಿ ರಸ್ತೆಯ ಬದಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ.
• ಖಾಸಗಿ ವಾಹನಗಳು ಬಾಡಿಗೆಗೆ ಕಾರ್ಯಾಚರಿಸುತ್ತಿವೆ.
• ಕೆಲವು ಬಸ್‌ಗಳ ಫುಟ್ಬೋರ್ಡ್ ಎತ್ತರವಾಗಿದ್ದು, ಮಕ್ಕಳಿಗೆ, ವೃದ್ಧರಿಗೆ, ಮಹಿಳೆಯರಿಗೆ ಬಸ್ ಹತ್ತಲು ಮತ್ತು ಇಳಿಯಲು ಅನನುಕೂಲ ಆಗುತ್ತಿದೆ.
• ಪರವಾನಿಗೆ ಇಲ್ಲದ ಕೆಲವು ರಿಕ್ಷಾಗಳು ನಗರದಲ್ಲಿ ಓಡಾಡುತ್ತಿವೆ.
• ಶರ್ಬತ್‌ಕಟ್ಟೆ- ಪಾದುವ ಹೈಸ್ಕೂಲ್ ರಸ್ತೆಯಲ್ಲಿ ರಸ್ತೆ ಅಗೆತದ ಕಾಮಗಾರಿ ಮುಗಿದು ತಿಂಗಳು ಕಳೆದರೂ ಗುಂಡಿ ಮುಚ್ಚಿಲ್ಲ.
•ಬಿಯರ್ ಮತ್ತು ಇತರ ಬಾಟಲಿಗಳನ್ನು ಕಾಡಿನಲ್ಲಿ ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ.
•ನಿತ್ಯಾಧರ್ ನಗರದಲ್ಲಿ ಸಾರ್ವಜನಿಕ ಕೊಳವೆ ಬಾವಿಯ ಪಂಪ್ ಹಾಳಾಗಿದ್ದು, ನೀರಿನ ಸಮಸ್ಯೆ ತಲೆದೋರಿದೆ.
•ಕೂಳೂರು ಸರ್ವಿಸ್ ರಸ್ತೆಯಲ್ಲಿ ಬೆಳಗ್ಗಿನ ಹೊತ್ತು ಬಸ್‌ಗಳನ್ನು ಬಹಳ ಹೊತ್ತು ನಿಲ್ಲಿಸುವುದರಿಂದ ವಾಹನಗಳ ಸಂಚಾ ರಕ್ಕೆ ಅಡ ಚಣೆ ಉಂಟಾಗಿ ಟ್ರಾಫಿಕ್ ಜಾಂ ಆಗುತ್ತಿದೆ.