ಬಂಟ್ವಾಳ: ಆರಕ್ಷಕರ ಕೆಲಸವೆಂದರೆ ಸದಾ ಒತ್ತಡದ ಬದುಕು. ಕಾನೂನು ಪಾಲನೆ, ಜನರ ರಕ್ಷಣೆಗೆ ದುಡಿಯುವ ಪೊಲೀಸರು ಕೆಲವೊಮ್ಮೆ ಇತರ ಕಾರ್ಯಗಳಿಗೆ ಸುದ್ದಿಯಾಗುತ್ತಾರೆ. ಇದು ಅಂತಹದ್ದೇ ಸುದ್ದಿ.
ತಾಲೂಕಿನ ಪಂಜಿಕಲ್ಲಿನಲ್ಲಿ ಪೋಲೀಸರಿಬ್ಬರು ಕರ್ತವ್ಯದ ಜೊತೆಗೆ ಒಂದು ಸಣ್ಣ ಸಮಾಜ ಸೇವೆ ಮಾಡಿದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂಜಿಕಲ್ಲು ಗ್ರಾಮದ ಗರೋಡಿ ಎಂಬಲ್ಲಿ ಇರುವ ಜಿನ್ನು ಎಂಬ ಅಜ್ಜಿಗೆ ದಿನಬಳಕೆಯ ವಸ್ತುಗಳ ಜೊತೆಗೆ ಅಕ್ಕಿಯನ್ನು ನೀಡಿ ಮಾನವೀಯತೆ ಮೆರೆದ ಪೋಲೀಸರು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೈವೇ ಪಟ್ರೋಲ್ ವಾಹನದಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಕಾನ್ಸ್ ಟೇಬಲ್ ವಿಜಯ್ ಹಾಗೂ ಚಾಲಕ ವಿಶ್ವನಾಥ ಪೆರಾಜೆ ಅವರೇ ಬಡತನದಲ್ಲಿ ಜೀವನ ಮಾಡುವ ಕುಟುಂಬಕ್ಕೆ ನೆರವಾದವರು.
ಇದನ್ನೂ ಓದಿ:ಮಹಿಳೆಯನ್ನು ಕಟ್ಟಿಹಾಕಿ ಹಾಡಹಗಲೇ ದರೋಡೆಗೆ ಯತ್ನ: ಸಿನಿಮೀಯಾ ರೀತಿಯಲ್ಲಿ ನಡೆಯಿತು ಚೇಸಿಂಗ್
ಜಿನ್ನು ಅಜ್ಜಿ ಅವರಯ ಕಷ್ಟಕರ ಸ್ಥಿತಿಯಲ್ಲಿದ್ದಾರೆ. ಜಿನ್ನು ಅವರ ಪತಿ ಮತ್ತು ಮಗ ಅನಾರೋಗ್ಯದಿಂದ ನಿಧನರಾಗಿದ್ದು, ಈಗ ಹೆಣ್ಣು ಮಗಳ ಜೊತೆ ಅಜ್ಜಿಯ ಜೀವನ ನಡೆಸುತ್ತಿದ್ದಾರೆ. ವಯಸ್ಸಾದ ಕಾರಣ ಜಿನ್ನು ಅಜ್ಜಿ ದುಡಿಮೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಕುಟುಂಬದ ಬಗ್ಗೆ ತಿಳಿದ ಪೋಲೀಸರು ಇವರ ಊಟಕ್ಕೆ ಬೇಕಾದ ಸಹಾಯ ಮಾಡಿದ್ದಾರೆ. ಇವರು ಮಾಡಿದ ಸೇವೆ ಇದೀಗ ಸಾಮಾಜಿಕ ಜಾಲತಾಟದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಸಹೋದರಿಯ ರಕ್ಷಣೆಗೆ ನಿಂತವನ ಮೇಲೆ ಪುಂಡರಿಂದ ಹಲ್ಲೆ ..!
ಅಜ್ಜಿಯ ಮನೆಯ ಅಂಗಳಕ್ಕೆ ಹೋಗಿ ಸಾಮಾಗ್ರಿಗಳನ್ನು ಕೊಡುವಾಗ ಅಜ್ಜಿಯ ಕಣ್ಣಿನಲ್ಲಿ ಆನಂದಬಾಷ್ಪ ಬಂದಾಗ ಕರಳು ಚುರುಕ್ ಎಂದಿತು ಎಂದು ಪೊಲೀಸರು ಹೇಳುತ್ತಾರೆ.
ಲಾಕ್ ಡೌನ್ ಅವಧಿಯಲ್ಲಿ ಸಹಾಯ: ಕೋವಿಡ್ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ಸಮಯದಲ್ಲಿ ಜಿನ್ನು ಕುಟುಂಬಕ್ಕೆ ಈ ವ್ಯಾಪ್ತಿಯ ಬೀಟ್ ಪೋಲೀಸ್ ಬಸವರಾಜ್ ಅವರು ಗ್ರಾಮಾಂತರ ಎಸ್.ಐ.ಪ್ರಸನ್ನ ಅವರ ಸೂಚನೆಯಂತೆ ವೈಯಕ್ತಿಕ ನೆಲೆಯಲ್ಲಿ ಅಜ್ಜಿಯ ಕುಟುಂಬಕ್ಕೆ ದಿನಬಳಕೆಯ ವಸ್ತುಗಳ ನ್ನು ಪೂರೈಕೆ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ.