Advertisement

ಗಣಪತಿ ಹಬ್ಬ: ಶಾಂತಿ ಸೌಹಾರ್ದತೆ ಕಾಪಾಡಲು ಎಸ್ಪಿ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ

12:04 PM Aug 31, 2022 | Team Udayavani |

ಗಂಗಾವತಿ: ಗಣಪತಿ ಹಬ್ಬದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸ್ ವರಿಷ್ಠಾಧಿಕಾರಿ  ಅರುಣಾಂಶ್ಯು ಗಿರಿ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪಥ ಸಂಚಲನೆ ಜರುಗಿತು.

Advertisement

ಈ ಹಿಂದೆ  ಗಣಪತಿ ಹಬ್ಬದ ಸಂದರ್ಭದಲ್ಲಿ  ಹಲವು ಅಹಿತಕರ ಘಟನೆಗಳಿಂದ ನಗರದಲ್ಲಿ ಅಶಾಂತಿ ಉಂಟಾಗಿತ್ತು ಆದ್ದರಿಂದ ಗಂಗಾವತಿ ನಗರದ ಜನರಲ್ಲಿ ಜಾಗೃತಿ ಮೂಡಿಸಲು  ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬೌಲಿಂಗ್ ಹೋಂಗಾರ್ಡ್ಸ್ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ವರ್ಗದವರು ನಗರ ಪೊಲೀಸ್ ಠಾಣೆಯಿಂದ ನಗರದ ಪ್ರಮುಖ ವೃತ್ತಗಳ ಮೂಲಕ ಪೊಲೀಸ್ ಪಥ ಸಂಚಲನ ನಡೆಸಿದರು.

ಈಗಾಗಲೇ ಗಣಪತಿ ಹಬ್ಬದ ಸಂಬಂಧ ಜಿಲ್ಲಾಡಳಿತ ಮುಂಜಾಗರೂಕತೆಯಾಗಿ ಕಡ್ಡಾಯವಾಗಿ ಗಣಪತಿ ಅನುಷ್ಠಾನ ಮಾಡುವವರು ಪರವಾನಿಗೆ ಪಡೆಯಬೇಕು ಏಕ ಗವಾಕ್ಷಿ ಮೂಲಕ ಜೆಸ್ಕಾಂ ನಗರಸಭೆ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಂದೇ ಕಡೆ ಸೇರಿಸಿ ಗಣಪತಿ ಪ್ರತಿಷ್ಠಾಪನಾ ಮಂಡಳಿಯವರಿಗೆ ಪರವಾನಗಿ ನೀಡಲಾಗಿದೆ .ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶ್ಯು ಗಿರಿ ಗಂಗಾವತಿಯಲ್ಲಿ ಮೊಕ್ಕಾಂ ಹೂಡಿದ್ದು ಇಲಿಯ ಶಾಂತಿ ಸೌಹಾರ್ದತೆ ಮತ್ತು ಸಂಚಾರಿ ವ್ಯವಸ್ಥೆಯನ್ನು ಗಮನಿಸುತ್ತಿದ್ದಾರೆ .

ಪಥಸಂಚಲನದಲ್ಲಿ ಎಸ್ಪಿ ಅರುಣಾಂಶ್ಯು ಗಿರಿ ಡಿಎಸ್ ಪಿ ರುದ್ರೇಶ್ ಉಜ್ಜನಕೊಪ್ಪ , ಸಿಪಿಐ ವೆಂಕಟಸ್ವಾಮಿ, ಮಂಜುನಾಥ, ಶಾರದಮ್ಮ, ಕಾಮಣ್ಣ ಸೇರಿದಂತೆ ಜಿಲ್ಲೆಯ  ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next