Advertisement
ಘಾಟಿಯಲ್ಲಿ ಮಳೆಯಿಂದ ಜಲಪಾತಗಳು ಮೈದುಂಬಿಕೊಂಡಿದ್ದು, ಈ ಭಾಗದಲ್ಲಿ ವಾಹನಗಳನ್ನು ರಸ್ತೆಯು ದ್ದಕ್ಕೂ ನಿಲ್ಲಿಸುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಜತೆಗೆ ಘಾಟಿಯ ಅಪಾಯಕಾರಿ ತೊರೆ, ಹಳ್ಳಗಳಲ್ಲಿ ಇಳಿಯುವ ಕಲ್ಲು, ಬಂಡೆ, ತಡೆಗೋಡೆ ಏರುವ ಪ್ರವಾಸಿಗರು, ರಸ್ತೆ ಮಧ್ಯೆಯೇ ಫೋಟೋ ಕ್ಲಿಕ್ಕಿಸುವ ಮಂದಿ ಅಪಾಯವನ್ನು ಆಹ್ವಾನಿಸಿಕೊಳ್ಳುವುದು ಕೆಲವು ದಿನಗಳಿಂದ ನಡೆಯುತ್ತಿದೆ. ಈ ಬಗ್ಗೆ ಪತ್ರಿಕೆಯು ವರದಿ ಪ್ರಕಟಿಸಿತ್ತು.
ಘಾಟಿಯಲ್ಲಿ ಪ್ರವಾಸಿ ಗರಿಂದ ವಾಹನ ಸವಾರರಿಗೆ ಉಂಟಾಗುವ ತೊಂದರೆ ಹಾಗೂ ಕೆಲವು ಪ್ರವಾಸಿಗರ ಎಲ್ಲೆ ಮೀರಿದ ಮೋಜು-ಮಸ್ತಿಗೆ ಕಡಿವಾಣ ಹಾಕಲು ಹೈವೇ ಪೊಲೀಸ್ ಪಟ್ರೋಲ್ ಗಸ್ತುಆರಂಭಿಸಿದೆ. ಪ್ರವಾಸಿಗರಿಗೆ ಎಚ್ಚರಿಕೆನೀಡುತ್ತಾ ಅಲ್ಲಲ್ಲಿ ವಾಹನ ನಿಲ್ಲಿಸ ದಂತೆ ಹಾಗೂ ಅಪಾಯಕಾರಿ ಸ್ಥಳಗಳಿಗೆ ಇಳಿಯದಂತೆ ಸೂಚನೆ ನೀಡಲಾಗುತ್ತಿದೆ. ಈ ವಾಹನ ಚಿಕ್ಕಮಗಳೂರು ಘಾಟಿ ವಿಭಾಗದಲ್ಲಿ ನಿರಂತರವಾಗಿ ಸುತ್ತಾಡಿ ನಿಗಾ ಇರಿಸುತ್ತಿದೆ.