ವಾಡಿ: ಇಪ್ಪತ್ತೆಂಟು ಹಳ್ಳಿಗಳ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪಟ್ಟಣದ ಪೊಲೀಸ್ ಠಾಣೆ, ಠಾಣಾಧಿಕಾರಿ ಇಲ್ಲದೆ ಕಳೆದ ಒಂದು ವರ್ಷದಿಂದ ಅನಾಥವಾಗಿದೆ. ನಿತ್ಯ ಘಟಿಸುವ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಇಲ್ಲಿನ ಪೊಲೀಸ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಚಿತ್ತಾಪುರ ತಾಲೂಕು ವಾಡಿ ಪಟ್ಟಣದ ಪೊಲೀಸ್ ಠಾಣೆ ಜಿಲ್ಲೆಯ ಅತಿ ದೊಡ್ಡ ಠಾಣೆ ಎನಿಸಿಕೊಂಡಿದೆ. 28 ಹಳ್ಳಿಗಳ
ವಿಸ್ತೀರ್ಣ ಹಾಗೂ ಒಟ್ಟು 1.20 ಲಕ್ಷ ಜನರಿಗೆ ಕಾನೂನಿನ ರಕ್ಷಣೆ ನೀಡುತ್ತಿದೆ. ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ವಿಭಾಗ ಸೇರಿ ಒಟ್ಟು ಎರಡು ಪಿಎಸ್‌ಐ ಹುದ್ದೆಗಳು ಖಾಲಿಯಿವೆ. ಕಳೆದ ಹದಿನೆಂಟು ತಿಂಗಳ ಹಿಂದೆ ಕ್ರೈಂ ಪಿಎಸ್‌ಐ ಸ್ಥಾನ ಖಾಲಿಯಾಗಿದ್ದರೆ, ಕಾನೂನು ಸುವ್ಯವಸ್ಥೆ ಠಾಣಾಧಿಕಾರಿ ಸ್ಥಾನ ತೆರವಾಗಿ ಆರು ತಿಂಗಳು ಗತಿಸಿದೆ. ಒಂದು ಎಎಸ್‌ಐ, 10 ಪೊಲೀಸ್ ಸಿಬ್ಬಂದಿ ಸ್ಥಾನ
ಖಾಲಿಯಿವೆ.
ಇತ್ತೀಚೆಗೆ ಪಟ್ಟಣದಲ್ಲಿ ನಡೆದ ನಿಗೂಢ ಕೊಲೆ ರಹಸ್ಯ ಬಯಲು ಮತ್ತು ಅಕ್ರಮ ಗಾಂಜಾ ಬೆಳೆ ಪ್ರಕರಣಗಳನ್ನು ಸಿಪಿಐ ಶಂಕರಗೌಡ ಪಾಟೀಲರೇ ಬೇಧಿಸಿದ್ದರು. ಜಯಂತಿಗಳು, ಜಾತ್ರೆಗಳು, ರಾಜಕೀಯ ಸಮಾವೇಶಗಳು, ಸಚಿವರ ಸಮಾರಂಭಗಳಿಗೆ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ. ಅಗತ್ಯ ಸಂದರ್ಭದಲ್ಲಿ ಚಿತ್ತಾಪುರ ಠಾಣೆ ಪಿಎಸ್‌ಐ ಜಗದೇವಪ್ಪ ಪಾಳಾ ಅವರು ವಾಡಿಗೆ ಬಂದು ಸಮಸ್ಯೆ ಬಗೆಹರಿಸಬೇಕಾದ ಸ್ಥಿತಿ ಎದುರಾಗಿದೆ. ರೇಲ್ವೆ ಜಂಕ್ಷನ್ ಮತ್ತು ಹೆಸರುವಾಸಿ ಎಸಿಸಿ ಸಿಮೆಂಟ್ ಘಟಕ ಇರುವ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರ ವ್ಯಾಪ್ತಿಗೆ ಬರುವ ವಾಡಿ ಪಟ್ಟಣದ ಠಾಣೆಯಲ್ಲಿ ಖಾಲಿಯಿರುವ ಎರಡು ಪಿಎಸ್‌ಐ ಸ್ಥಾನಗಳನ್ನು ಭರ್ತಿ ಮಾಡಲು ಪೊಲೀಸ್ ಇಲಾಖೆಗೆ ಸಾಧ್ಯವಾಗುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ಹಿಂದೆ ಠಾಣಾಧಿಕಾರಿಯಾಗಿದ್ದ ನಟರಾಜ ಲಾಡೆ ಅವರು ಸೇಡಂ ಠಾಣೆಗೆ ವರ್ಗವಾಗಿ ಹೋದ ಬಳಿಕ ಸೇಡಂ ಠಾಣೆಯ
ಸಂತೋಷ ರಾಠೊಡ ವಾಡಿ ಠಾಣೆಗೆ ವರ್ಗವಾಗಿ ಬಂದಿದ್ದರು. ಎರಡೇ ತಿಂಗಳಲ್ಲಿ ರಾಠೊಡ, ಅಫಜಲಪುರಕ್ಕೆ ವರ್ಗವಾದರು. ಆರು ತಿಂಗಳಿಂದ ವಾಡಿ ಠಾಣೆ ಎಎಸ್‌ಐ ಬನುದಾಸ್ ಕ್ಷಿರಸಾಗರ ಪ್ರಭಾರಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಜವಾಬ್ದಾರಿ ಮೇಲೆ ಠಾಣೆ ಕರ್ತವ್ಯ ಸಾಗಿ¨
ಮಡಿವಾಳಪ್ಪ ಹೇರೂರ