Advertisement

ಪೊಲೀಸ್‌ ದೌರ್ಜನ್ಯ ಆರೋಪ ಪ್ರಕರಣ : ಬಜಪೆ ಇನ್ಸ್‌ಪೆಕ್ಟರ್‌ ಸಹಿತ ಮೂವರು ಸಿಬಂದಿ ಅಮಾನತು

09:25 PM Apr 25, 2022 | Team Udayavani |

ಮಂಗಳೂರು : ಕಟೀಲು ದೇಗುಲದ ಎದುರು ಸೀಯಾಳ ಹಾಕುವ ವಿಚಾರಣೆಗೆ ಸಂಬಂಧಿಸಿ ಮೂವರು ಯುವಕರನ್ನು ಠಾಣೆಗೆ ವಿಚಾರಣೆಗೆ ಕರೆಸಿ ಬಳಿಕ ಹಲ್ಲೆ ನಡೆಸಿದ ಆರೋಪದಲ್ಲಿ ಬಜಪೆ ಪೊಲೀಸ್‌ ಇನ್ಸ್ ಪೆಕ್ಟರ್ ಸಹಿತ ಮೂವರನ್ನು ಅಮಾನತು ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

Advertisement

ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂದೇಶ್‌, ಸಿಬಂದಿ ಪ್ರವೀಣ್‌, ಸುನಿಲ್‌ ಮತ್ತು ಇಂತಿಯಾಸ್‌ ಅಮಾನತುಗೊಂಡವರು.

ಪ್ರಕರಣದ ಬಗ್ಗೆ ಸೋಮವಾರ ಇಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಆಯುಕ್ತರು, ಕಟೀಲು ಸಮೀಪದ ಮೂವರು ಯುವಕರು ಬಜಪೆ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ನಾಲ್ಕು ಮಂದಿ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಈ ಆರೋಪದ ಬಗ್ಗೆ ನಗರ ದಕ್ಷಿಣ ವಲಯ ಸಹಾಯಕ ಪೊಲೀಸ್‌ ಆಯುಕ್ತ ಮಹೇಶ್‌ ಕುಮಾರ್‌ ವಿಚಾರಣೆ ನಡೆಸಿ ವರದಿ ನೀಡಿದ ಆಧಾರದಲ್ಲಿ ಇಲಾಖಾ ಶಿಸ್ತಿನ ಕ್ರಮ, ವಿಚಾರಣೆ ಬಾಕಿ ಇರಿಸಿ ಮೂವರನ್ನು ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್‌ ನೇತೃತ್ವದಲ್ಲಿ ಈ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಲು ಸೂಚಿಸಲಾಗಿದೆ. ಗಾಯಗೊಂಡ ಮೂವರು ಯುವಕರಲ್ಲಿ ಇಬ್ಬರನ್ನು ವೆನ್ಲಾಕ್ ಗೆ, ಇನ್ನೊಬ್ಬರನ್ನು ಕಟೀಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ : ಕಾರ್ಕಳ :ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ : ಓರ್ವ ಸಾವು, ಮತ್ತೋರ್ವ ಗಂಭೀರ

ಪ್ರಕರಣದ ವಿವರ: ಕಟೀಲು ದೇವಸ್ಥಾನದಲ್ಲಿ ಕೆಲವು ಅಂಗಡಿಗಳನ್ನು ಮಂಗಳೂರು ಉಪವಿಭಾಗದ ಎ.ಸಿ. ಅವರು ತೆರವು ಮಾಡಿದ್ದರೂ, ಅದನ್ನು ಪಾಲಿಸದೆ ಕೆಲವು ಅಂಗಡಿಗಳು ತೆರೆದಿದ್ದವು. ಈ ಅಂಗಡಿಗಳಿಗೆ ಎಳನೀರು ಹಾಕುವ ವ್ಯಕ್ತಿಯನ್ನು ಮೂವರು ಯುವಕರು ಪ್ರಶ್ನಿಸಿದ್ದು, ಈ ಬಗ್ಗೆ ಬಜಪೆ ಠಾಣೆಗೆ ದೂರು ನೀಡಲಾಗಿತ್ತು. ಇದೇ ವಿಚಾರದಲ್ಲಿ ಮೂವರನ್ನು ಠಾಣೆಗೆ ಕರೆಸಿ ಹಲ್ಲೆ ನಡೆಸಿರುವ ಮಾಹಿತಿ ಲಭಿಸಿದೆ. ಪ್ರಾಥಮಿಕ ತನಿಖೆಯಿಂದ ಪೊಲೀಸ್‌ ಇನ್ಸ್‌ಪೆಕ್ಟರ್‌ ಮತ್ತು ಸಿಬಂದಿ ಲೋಪ ಎಸಗಿರುವುದು ಕಂಡು ಬಂದ ಹಿನ್ನಲೆಯಲ್ಲಿ ಶಿಸ್ತು ಕ್ರಮ ಜರಗಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next