Advertisement
ಇಡೀ ದೇಶವೇ ಆಮ್ಲಜನಕ ಕೊರತೆಯನ್ನುಎದುರಿಸುತ್ತಿರುವ ಗಂಡಾಂತರಕಾರಿ ದಿನಗಳಲ್ಲಿಎಸಿಬಿಯ ಎಡಿಜಿಪಿ ಸೀಮಾಂತ್‌ಕುಮಾರ್ ಸಿಂಗ್‌ತಾವು ಮತ್ತು ತಮ್ಮ ದಾನಿ ಗೆಳೆಯರ ಸಹಾಯದಿಂದ ಆಮ್ಲಜನಕ ಸಾಂದ್ರತೆ ಯಂತ್ರಗಳನ್ನು ನೀಡುವ ಮೂಲಕಮಾನವೀಯತೆ ಮೆರೆದಿದ್ದಾರೆ.
Related Articles
Advertisement
ವ್ಯಾಟ್ಸ್ ಆ್ಯಪ್ ಗುಂಪಿನ ನೆರವು: ಕೊರೊನಾ ಮೊದಲಅಲೆಯ ಸಂದರ್ಭದಲ್ಲಿಯೇ ಜನರಿಗೆ ನೆರವಾಗುವಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿ ಸೀಮಾಂತ್‌ಕುಮಾರ್‌ಸಿಂಗ್ ಎರಡು ವಾಟ್ಸ್‌ಆ್ಯಪ್ ಗ್ರೂಪ್‌ಗ್ಳನ್ನುರಚಿಸಿ ಬಂಧು ಮಿತ್ರರಿಂದಸಹಾಯವನ್ನು ಯಾಚಿಸಿದರು .ಮೊದಲ ಅಲೆಯ ಸಂದರ್ಭದಲ್ಲಿ ದಾನಿಗಳು ಜನಸಮುದಾಯಕ್ಕೆ ನೆರವಾಗಲು ಉದಾರವಾಗಿ ಮುಂದಾಗಿದ್ದು, ನೆರವು ಬಯಸುತ್ತಿರುವರಿಗೆ ವಲಸೆಕಾರ್ಮಿಕರಿಗೆ ಆಹಾರ ಕಿಟ್‌ಗಳು, ವೈದ್ಯಕೀಯ ನೆರವು,ಆಸ್ಪತ್ರೆ ವೆತ್ಛ ಇತ್ಯಾದಿಗಳನ್ನು ಒದಗಿಸಿ ಸಮಾಜ ಸೇವೆಮಾಡಿದ್ದರು.
ನಾಲ್ಕು ತಂಡ ರಚನೆ: ಇದೀಗ ಎರಡನೇ ಅಲೆಯಲ್ಲಿಇಡೀ ದೇಶವೇ ಆಮ್ಲಜನಕ ಕೊರತೆಯನ್ನುಎದುರಿಸುತ್ತಿರುವುದರಿಂದ ಬೇಡಿಕೆ ಇರುವ ಆಸ್ಪತ್ರೆಗಳಿಗೆಆಮ್ಲಜನಕ ಕೊರತೆ ನೀಗುವ ಉದ್ದೇಶವನ್ನು ಹೊಂದಿತಮ್ಮ ವಾಟ್ಸ್‌ಆ್ಯಪ್ ಗುಂಪಿನ ಮೂಲಕ ನೆರವು ಬಯಸಿದ್ದರು.
ಆಮ್ಲಜನಕ ಬೇಡಿಕೆಯನ್ನು ಈಡೇರಿಸುವಸಲುವಾಗಿಯೇ ವಾಟ್ಸ್‌ಆ್ಯಪ್ ಗುಂಪಿನಲ್ಲಿ ನಾಲ್ಕುತಂಡಗಳನ್ನು ರಚಿಸಿಕೊಳ್ಳಲಾಗಿದೆ. ಈ ತಂಡಗಳುಚೀನಾ, ತೈವಾನ್, ಕೆನಡಾ ಮತ್ತು ಭಾರತದ ಇನ್ನಿತರರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಿ ಆಮ್ಲಜನಕಸಾಂದ್ರಕಗಳನ್ನು ಖರೀದಿಸುತ್ತಿದೆ.ಕೆನಡಾ ಕನ್ನಡಿಗರ ನೆರವು: ಸೀಮಾಂತ್‌ಕುಮಾರ್‌ಸಿಂಗ್‌ರ ಸಹಾಯ ಹಸ್ತ ವಾಟ್ಸ್‌ಆ್ಯಪ್ ಗುಂಪಿನಪ್ರಯತ್ನಕ ಸ್ಕೆ ³ಂದಿಸಿರುವ ಕೆನಡಾ ಕನ್ನಡಿಗರ ತಂಡವು 30ಆಮ್ಲಜನಕ ಸಾಂದ್ರಕಗಳನ್ನು ತಾವು ಕಳುಹಿಸುವುದಾಗಿ ವಾಗ್ಧಾನ ಮಾಡಿದ್ದು, ಒಂದು ವಾರದೊಳಗೆಬೆಂಗಳೂರು ತಲುಪುವ ನಿರೀಕ್ಷೆ ಇದೆ.
ಇದೇ ಗುಂಪಿನಮೂಲಕ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ತಲಾ 1.25 ಲಕ್ಷ ರೂ ವೆತ್ಛದ 10 ಲೀಟರ್ ಸಾಮರ್ಥ್ಯದ50 ಆಮ್ಲಜನಕ ಸಾಂದ್ರತೆಗಳನ್ನು ಕೆನಡಾ ಮತ್ತುಲಭ್ಯವಿರುವ ದೇಶಗಳಿಂದ ಖರೀದಿಸಲುಮುಂದಾಗಿದ್ದಾರೆ.ಬೆಂಗಳೂರು ತಲುಪಲಿರುವ ಈ ಆಮ್ಲಜನಕಸಾಂದ್ರತೆಗಳನ್ನು ಆಸ್ಪತ್ರೆಗಳ ಬೇಡಿಕೆ ಆಧಾರದ ಮೇಲೆರಾಜ್ಯದ ಇನ್ನಿತರ ಜಿಲ್ಲೆಯ ಆಸ್ಪತ್ರೆಗಳಿಗೆ ವಿತರಿಸಲುಕ್ರಮವಹಿಸಲಾಗುತ್ತಿದೆ.
ನಿರ್ವಹಣೆ ಸುಲಭ: ಈಗಾಗಲೇ ವಿತರಿಸುತ್ತಿರುವಆಮ್ಲಜನಕ ಸಾಂದ್ರತೆಗಳ ನಿರ್ವಹಣೆ ಸುಲಭವಾಗಿದೆ.ಆಮ್ಲಜನಕ ತಯಾರಿಕೆಗೆ ಬೇರಾವುದೇ ಮೂಲವಸ್ತುಗಳನ್ನು ಜೋಡಿಸುವ ಅಗತ್ಯವಿಲ್ಲ. ಈ ಯಂತ್ರಗಳನ್ನುಸ್ವಿಚ್ ಹಾಕಿದರೆ ಸಾಕು ಯಂತ್ರವು ತಾನೇ ತಾನಾಗಿಆಮ್ಲಜನಕ ಉತ್ಪಾದಿಸಿ ಅಗತ್ಯವಿರುವ ರೋಗಿಗಳಿಗೆ ವಿತರಿಸಲಿದೆ.
ಕೋಲಾರ ಸೇರಿದಂತೆ ಏಳೆಂಟುಜಿಲ್ಲೆಗಳಲ್ಲಿ ಅಳವಡಿಸಿರುವ ಈ ಯಂತ್ರಗಳಿಂದ ನಿತ್ಯವೂಹಲವು ಜೀವಗಳನ್ನು ಉಳಿಸಲು ನೆರವಾಗುತ್ತಿದೆ. ಈರೀತಿಯ ಮತ್ತಷ್ಟು ಯಂತ್ರಗಳನ್ನು ವಿತರಣೆಗೆ ಹಿರಿಯಪೊಲೀಸ್ ಅಧಿಕಾರಿಗೆ ಪ್ರೇರಣೆಯಾಗಿದೆ.
‘ಕೆ.ಎಸ್.ಗಣೇಶ್