Advertisement
ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಪೊಲೀಸರ ನಿರ್ಲಕ್ಷ್ಯದಿಂದಾಗಿ ರಾಷ್ಟ್ರವಿರೋಧಿಗಳಿಗೆ ಕುಮ್ಮಕ್ಕು ಸಿಗುವಂತಾಗಿದೆ. ಐವನ್ ಅವರ ವಿರುದ್ಧ ಪ್ರಕರಣ ದಾಖಲು ಮಾಡುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ. ಸದ್ಯ ಕೃಷ್ಣ ಜನ್ಮಾಷ್ಟಮಿ ಹಬ್ಬ ಬರಲಿದ್ದು, ಜನರಿಗೆ ತೊಂದರೆ ಆಗಬಾರದು ಎಂದು ರಸ್ತೆ ತಡೆ ಪ್ರತಿಭಟನೆಯನ್ನು ನಾಲ್ಕು ದಿನ ಮುಂದೂಡಿದ್ದೆವು. ರಾಷ್ಟ್ರವಿರೋಧಿ ಹೇಳಿಕೆ ನೀಡಿದ ಐವನ್ ಅವರು ಕ್ಷಮೆ ಕೇಳುವ ಬದಲು ತನ್ನ ಹೇಳಿಕೆಯನ್ನೇ ಸಮರ್ಥಿಸಿದ್ದಾರೆ. ಕಾನೂನು ತಜ್ಞರ ಸಲಹೆ ಪಡೆದು ಪ್ರಕರಣ ದಾಖಲು ಮಾಡುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದರು. ಬಿಜೆಪಿ ಶಾಸಕರ ಮೇಲೆ ಕೆಲವೇ ಗಂಟೆಗಳಲ್ಲಿ ಕೇಸ್ ದಾಖಲಾಗಿತ್ತು. ಕಾನೂನು ರಕ್ಷಿಸುತ್ತೇವೆ ಎಂದು ಪೊಲೀಸರು ಪ್ರಮಾಣವಚನ ಸ್ವೀಕರಿಸುತ್ತಾರೆ. ಆದರೆ ಐವನ್ ವಿಚಾರದಲ್ಲಿ ಕಾನೂನು ಬದ್ಧವಾಗಿ ನಡೆದುಕೊಳ್ಳಬೇಕಿದೆ ಎಂದು ತಿಳಿಸಿದರು.
Related Articles
Advertisement
ಇದನ್ನೂ ಓದಿ: Krishna Janmashtami: ಯಶೋದಾ ಕೃಷ್ಣ ಸ್ಪ ರ್ಧೆಗೆ ಫೋಟೋ ಕಳಿಸಿ ಬಹುಮಾನ ಗೆಲ್ಲಿ