ಮಹಾನಗರ: ಸೈಬರ್ ಅಪರಾಧಗಳು ಪೊಲೀಸರಿಗೆ ಸವಾ ಲಾಗಿದ್ದು, ಅವುಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕುವ ಬಗ್ಗೆ ಎಲ್ಲ ಪೊಲೀಸರು ತಾಂತ್ರಿಕ ಮಾಹಿತಿಯನ್ನು ಕರಗತ ಮಾಡಿಕೊಂಡು ಅದರಲ್ಲಿ ಪರಿಣತಿಯನ್ನು ಹೊಂದ ಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಕರೆ ನೀಡಿದ್ದಾರೆ.
ಮಂಗಳೂರು ಪೊಲೀಸ್ ಕಮಿ ಷನರೆಟ್ ವ್ಯಾಪ್ತಿಯಲ್ಲಿ ಈ ವರ್ಷ ಮುಂಭಡ್ತಿ ಪಡೆದ 143 ಮಂದಿ ಪೊಲೀಸ್‌ರನ್ನು ಅಭಿನಂದಿಸಲು ನಗರದ ಪೊಲೀಸ್ ಸಮುದಾಯ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಕ್ಸಲಿಸಂ ಮತ್ತು ಟೆರರಿಸಂ ಹೊರತಾಗಿ ಇದೀಗ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂಬರುವ ದಿನಗಳಲ್ಲಿ ವಿವಿಧ ಅಪರಾಧಗಳ ಪೈಕಿ ಸೈಬರ್ ಅಪರಾಧಗಳೇ ಪ್ರಮುಖ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದ್ದರಿಂದ ಈ ಸವಾಲನ್ನು ಎದುರಿಸಿಲು ಎಲ್ಲ ಪೊಲೀಸರು ಕಂಪ್ಯೂಟರ್, ಇಂಟರ್‌ನೆಟ್ ಮತ್ತಿತರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಪ್ರತಿಭೆ ಮತ್ತು ಪಾಂಡಿತ್ಯವನ್ನು ಹೊಂದುವುದು ಅವಶ್ಯ. ಈ ನಿಟ್ಟಿನಲ್ಲಿ ಪೊಲೀಸ್ ಕೇಂದ್ರ ಕಚೇರಿ ವತಿಯಿಂದ ನೀಡಲಾಗುವ ತರಬೇತಿಯ ಪ್ರಯೋಜ ನವನ್ನು ಪಡೆಯಬೇಕು ಎಂದರು.ಜವಾಬ್ದಾರಿ ಹೆಚ್ಚಳ ವೃತ್ತಿ ಜೀವನದಲ್ಲಿ ಪದೋನ್ನತಿ ಬಹಳಷ್ಟು ಖುಷಿಯ ಸಂಗತಿ.
ಆದರೆ ಪದೋನ್ನತಿ ಪಡೆಯುವ ಮೂಲಕ ಅವರ ಜವಾಬ್ದಾರಿಯೂ ಹೆಚ್ಚುತ್ತದೆ. ಹೊಸ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸಲು ಕಾಲಕ್ಕೆ ತಕ್ಕಂತೆ ಸಾಮರ್ಥ್ಯವನ್ನು ಮೈಗೂ ಡಿಸಿಕೊಳ್ಳಬೇಕು ಎಂದು ಹೇಳಿದ ಕಮಿಷನರ್ ಪದೋನ್ನತಿ ಪಡೆದ ಎಲ್ಲರನ್ನೂ ಅಭಿನಂದಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಡಿಸಿಪಿ ಹನುಮಂತ ರಾಯ ಸ್ವಾಗತಿಸಿ, ಡಿಸಿಪಿ ಲಕ್ಷ್ಮೀ ಗಣೇಶ್ ವಂದಿಸಿದರು. ಎಸ್ಪಿಗಳಾದ ಮಂಜುನಾಥ ಶೆಟ್ಟಿ, ರಾಮ ರಾವ್, ಭಾಸ್ಕರ ಒಕ್ಕಲಿಗ, ಎಂ.ಎ. ಉಪಾಸೆ ಉಪಸ್ಥಿತರಿದ್ದರು. ಎಎಸ್‌ಐ ಹರಿಶ್ಚಂದ್ರ ಆರ್. ಬೈಕಂಪಾಡಿ ನಿರ್ವಹಿಸಿದರು.
ಪದೋನ್ನತಿ ಪಡೆದವರು
ಕಮಿಷನರೆಟ್ ವ್ಯಾಪ್ತಿಯಲ್ಲಿ ಈ ವರ್ಷ ಎ.ಆರ್.ಎಸ್.ಐ. ಹುದ್ದೆಯಿಂದ ಆರ್.ಎಸ್.ಐ. ಹುದ್ದೆಗೆ ಮೂವರು, ಪಿ.ಎಚ್.ಸಿ. ಹುದ್ದೆಯಿಂದ ಎ.ಎಸ್. ಐ. ಹುದ್ದೆಗೆ 29 ಮಂದಿ, ಎ.ಎಚ್.ಸಿ. ಹುದ್ದೆಯಿಂದ ಎ.ಆರ್.ಎಸ್.ಐ. ಹುದ್ದೆಗೆ 40 ಮಂದಿ, ಸಿ.ಪಿ.ಸಿ. (ಸಿವಿಲ್ ಪೊಲೀಸ್ ಕಾನ್ಸ್‌ಟೆಬಲ್) ಹುದ್ದೆಯಿಂದ ಸಿ.ಎಚ್.ಸಿ. ಹುದ್ದೆಗೆ 68 ಮಂದಿ ಮತ್ತು ಎ.ಪಿ.ಸಿ.ಯಿಂದ ಎ.ಎಚ್.ಸಿ. ಹುದ್ದೆಗೆ 3 ಮಂದಿ ಭಡ್ತಿ ಹೊಂದಿದ್ದಾರೆ.