Advertisement
ಅವರು ಮಾ. 27ರಂದು ತಿಂಗಳಾಡಿ ಶ್ರೀ ದೇವತಾ ಭಜನ ಮಂದಿರದ ಸಭಾ ವೇದಿಕೆಯಲ್ಲಿ ನಡೆದ ಕೆದಂಬಾಡಿ ಗ್ರಾಮದ ಪೊಲೀಸ್ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೆದಂಬಾಡಿ ಗ್ರಾಮಸ್ಥರು ಶಾಂತಿ-ಸೌಹಾರ್ದ ಕಾಪಾಡಿಕೊಂಡು ಬಂದವರು. ಅಹಿತಕರ ಘಟನೆಗಳು ನಡೆದಲ್ಲಿ ಬೀಟ್ ಪೊಲೀಸ್ ಬಸವರಾಜ್ ಅವರಿಗೆ ತಿಳಿಸಿ ಅಥವಾ ನೇರವಾಗಿ ಠಾಣೆಗೆ ಮಾಹಿತಿ ಕೊಡಿ ಎಂದರು.
ಸಾರೆಪುಣಿಯ ಮಾರುತಿಪುರ ಎಂಬಲ್ಲಿರುವ ಕಟ್ಟೆಯ ವಿಚಾರವಾಗಿ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಎಂದು ಗ್ರಾ.ಪಂ. ಸಾಮಾನ್ಯ ಸಭೆಯ ನಿರ್ಣಯವನ್ನು ನಾವು ಒಪ್ಪಿಕೊಂಡಿದ್ದೇವೆ. ಗ್ರಾಮಸ್ಥರೂ ಇದನ್ನು ತಿಳಿದುಕೊಂಡು ಕಟ್ಟೆಯ ವಿಚಾರದಲ್ಲಿ ಶಾಂತಿ ಸೌಹಾರ್ದ ಕಾಪಾಡಬೇಕು. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಅದರ ಬೆನ್ನಲ್ಲೆ ನೀತಿ ಸಂಹಿತೆಯೂ ಜಾರಿಯಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. ದ್ವಿಚಕ್ರ ವಾಹನ ಸವಾರರು ಹಾಗೂ ಸಹ ಸವಾರರು ಹೆಲ್ಮೆಟ್ ಧರಿಸುವುದು ಸೂಕ್ತ. ಹೆಲ್ಮೆಟ್ ಧರಿಸದ ಸಂದರ್ಭದಲ್ಲಿ ಅಪಘಾತಗಳಾದರೆ ಸಾವಿನ ಸಾಧ್ಯತೆ ಹೆಚ್ಚು ಎಂದು ಕಿವಿಮಾತು ಹೇಳಿದರು. ಸಭಾಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಬಳಸುವವರು ಹೆಚ್ಚು ಜಾಗೃತರಾಗಿರಬೇಕು. ಮನೆ ಬಿಟ್ಟು ಹೊರಗೆ ಹೋಗುವಾಗ ಸ್ಟೇಟಸ್ ಗಳನ್ನು ಹಾಕುವುದು, ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಸರಿಯಲ್ಲ. ಗ್ರಾಮದ ಬೀಟ್ ಪೊಲೀಸ್ ಅಧಿಕಾರಿ ಬಸವರಾಜ್ ಜನಸ್ನೇಹಿ ಪೊಲೀಸ್ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
– ಸುವ್ಯವಸ್ಥೆಗೆ ಅಡ್ಡಿಪಡಿಸಿದವರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಶಾಂತಿಯುತ ಗ್ರಾಮವಾಗಿ ಮುಂದುವರಿಯಲು ಎಲ್ಲರೂ ಸಹಕರಿಸಬೇಕು ಎಂದರು. ಬೀಟ್ ಪೊಲೀಸ್ ಬಸವರಾಜ್ ಮಾತನಾಡಿ, ಗ್ರಾಮದಲ್ಲಿ ಎರಡು ಬೀಟ್‌ಗಳನ್ನು ಹಂಚಿಕೆ ಮಾಡಿದ್ದು, ತಾವು ಗ್ರಾಮದಲ್ಲೇ ಇದ್ದು ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
Advertisement
ಪಿಡಿಒ ಅಜಿತ್ ಜಿ.ಕೆ., ಗ್ರಾ.ಪಂ. ಸದಸ್ಯರಾದ ರಾಘವ ಗೌಡ ಕೆರೆಮೂಲೆ, ಕೃಷ್ಣ ಕುಮಾರ್ ರೈ, ವಿಜಯ ಕುಮಾರ್ ರೈ ಕೋರಂಗ, ಚಂದ್ರಹಾಸ ರೈ ಬೋಳ್ಳೋಡಿ, ಪುಷ್ಪಾ ಬೋಳ್ಳೋಡಿ, ರೇವತಿ, ಲಲಿತಾ, ಚಂದ್ರಾವತಿ ರೈ ಉಪಸ್ಥಿತರಿದ್ದರು. ಬೀಟ್ ಪೊಲೀಸ್ ಅಧಿಕಾರಿ ಆಶಾ ಸ್ವಾಗತಿಸಿ, ವಂದಿಸಿದರು.
ಇಲಾಖೆಗೆ ಮಾಹಿತಿ ನೀಡಿಗ್ರಾಮದಲ್ಲಿ ಅಕ್ರಮ ಸಾರಾಯಿ, ಗಾಂಜಾ ಮಾರಾಟ, ಗೋ ಸಾಗಾಟ ಇತ್ಯಾದಿ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸುಳಿವು ಸಿಕ್ಕರೆ, ಯುವತಿಯರು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಗುಂಪು ಸೇರಿ ರೇಗಿಸುವ ಕೃತ್ಯಗಳು ಕಂಡುಬಂದರೆ ಕೂಡಲೇ ಮೊ. 9480805363, 8861946463 ಅಥವಾ ಸಂಪ್ಯ ಠಾಣೆ ದೂ. 08251-232102ಗೆ ಕರೆ ಮಾಡಿ ತಿಳಿಸಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪಿಎಸ್‌ಐ ಶಕ್ತಿವೇಲು ತಿಳಿಸಿದರು. ಕಂಬಳಿ ಮಾರುವವರ ಬಗ್ಗೆ ನಿಗಾ ಇರಿಸಿ
ಗ್ರಾಮದಲ್ಲಿ ಕಂಬಳಿ, ಪ್ಲಾಸ್ಟಿಕ್ ಬಕೆಟ್ ಮಾರಾಟದ ನೆಪದಲ್ಲಿ ಬೇರೆ ಪ್ರದೇಶಗಳ ಜನರು ಮನೆ ಬಾಗಿಲಿಗೆ ಬರುತ್ತಾರೆ. ಇಂಥವರ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು. ಸಂಶಯ ಬಂದರೆ ನೇರವಾಗಿ ಬೀಟ್ ಪೊಲೀಸರಿಗೆ ಮಾಹಿತಿ ಕೊಡಿ ಎಂದು ಶಕ್ತಿವೇಲು ಹೇಳಿದರು.