Advertisement

ಶಿಥಿಲ ವಸತಿಗೃಹಗಳಲ್ಲೇ ಪೊಲೀಸರ ವಾಸ

05:44 PM Mar 27, 2018 | Team Udayavani |

ಹಟ್ಟಿ ಚಿನ್ನದ ಗಣಿ: ಸ್ಥಳೀಯ ಪೊಲೀಸ್‌ ಠಾಣೆ ಸಿಬ್ಬಂದಿಗೆ ಸುಮಾರು 75 ವರ್ಷದ ಹಿಂದೆ ನಿರ್ಮಿಸಿದ ವಸತಿಗೃಹಗಳು ಸಂಪೂರ್ಣ ಶಿಥಿಲಗೊಂಡಿದ್ದು, ಆರಕ್ಷಕರ ಕುಟುಂಬಗಳು ಜೀವ ಭಯದಲ್ಲೇ ಬದುಕುವಂತಾಗಿದೆ.

Advertisement

1942ರಲ್ಲಿ ಹಟ್ಟಿ ಕ್ಯಾಂಪ್‌ನಲ್ಲಿ ಪೊಲೀಸ್‌ ಠಾಣೆ ಎದುರು 16 ವಸತಿಗೃಹಗಳನ್ನು ನಿರ್ಮಿಸಲಾಗಿದೆ. ಸುಮಾರು 75 ವರ್ಷದಿಂದ ಇವುಗಳ ದುರಸ್ತಿಗೆ ಇಲಾಖೆ ಮುಂದಾಗಿಲ್ಲ. ಹೀಗಾಗಿ ಗೋಡೆಗಳು ಬಿರುಕು ಬಿಟ್ಟಿವೆ. ಛತ್ತಿನ ಕಾಂಕ್ರಿಟ್‌ ಉದುರುತ್ತಿದ್ದು, ಕಬ್ಬಿಣದ ಸರಳುಗಳು ಎಲುವಿನ ಹಂದರದಂತೆ ಕಾಣುತ್ತಿವೆ. ಮಳೆ ಬಂದರೆ ಮನೆ ಸೋರುತ್ತಿವೆ. ಈಗಾಗಲೇ ಪಿಡಬುÉÂಡಿ ಇಲಾಖೆಯವರು ಈ ಮನೆಗಳು ವಾಸಕ್ಕೆ ಯೋಗ್ಯವಿಲ್ಲವೆಂದು ವರದಿ ನೀಡಿದ್ದಾರೆ. 

ಹಟ್ಟಿ ಚಿನ್ನದ ಗಣಿ ಕಂಪನಿ ವ್ಯಾಪ್ತಿಯ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಸೇರಿ 25 ಜನ ಪೊಲೀಸ್‌ ಸಿಬ್ಬಂದಿ ಇದ್ದಾರೆ. ಒಟ್ಟು 16 ವಸತಿಗೃಹಗಳಲ್ಲಿ ಕೇವಲ 8 ರಿಂದ 10 ಮನೆಗಳಲ್ಲಿ ಪೊಲೀಸರ ಕುಟುಂಬಗಳು ವಾಸ ಇವೆ. ಉಳಿದ ಸಿಬ್ಬಂದಿ ಅಧಿಸೂಚಿತ ಪ್ರದೇಶದ ಕ್ಯಾಂಪ್‌ನಲ್ಲಿನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ರಕ್ಷಣೆ ಇಲ್ಲ: ಸಾರ್ವಜನಿಕರ ಆಸ್ತಿ, ಪಾಸ್ತಿ, ಜೀವ ರಕ್ಷಣೆಗೆ ಹಗಲು-ರಾತ್ರಿ ಸೇವೆ ಸಲ್ಲಿಸುವ ಪೊಲೀಸ್‌ ಸಿಬ್ಬಂದಿ ಕುಟುಂಬಕ್ಕೆ ಮಾತ್ರ ಭದ್ರತೆ ಇಲ್ಲದಂತಾಗಿದೆ. ಶಿಥಿಲಗೊಂಡ ಮನೆಗಳಲ್ಲೇ ಜೀವಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಆಗ್ರಹ: ಹಟ್ಟಿ ಚಿನ್ನದ ಗಣಿ ಕಂಪನಿಯವರು ಶಾಲೆ ಶಿಕ್ಷಕರಿಗೆ, ಬ್ಯಾಂಕ್‌ ನೌಕರರಿಗೆ, ಅಧಿಕಾರಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ. ವಿಪರ್ಯಾಸವೆಂದರೆ ಪೊಲೀಸ್‌ ಇಲಾಖೆಗೆ ಮಾತ್ರ ವಸತಿ ಸೌಲಭ್ಯ ಕಲ್ಪಿಸಲು ನಿರ್ಲಕ್ಷ್ಯವಹಿಸಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹಟ್ಟಿ ಚಿನ್ನದ ಗಣಿ ಕಂಪನಿ 100 ಮನೆಗಳನ್ನು ನಿರ್ಮಿಸಿದ್ದು, ಅದರಲ್ಲಿ ಕೆಲ ಮನೆಗಳನ್ನು ಪೊಲೀಸ್‌ ಸಿಬ್ಬಂದಿಗೆ ಒದಗಿಸಬೇಕೆಂಬುದು ಸಾರ್ವಜನಿಕರು ಮತ್ತು ಪೊಲೀಸ್‌ ಸಿಬ್ಬಂದಿ ಆಶಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳ ಜೊತೆ ಚರ್ಚಿಸಿ ಪೊಲೀಸ್‌ ಸಿಬ್ಬಂದಿ ವಸತಿಗೃಹ ಒದಗಿಸಲು ಮುಂದಾಗಬೇಕಿದೆ.

Advertisement

‌ಸತಿ ಗೃಹಗಳು ಶಿಥಿಲಗೊಂಡ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ವಸತಿ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಲಿದೆ ಎಂಬ ವಿಶ್ವಾಸವಿದೆ. ಪೊಲೀಸರಿಗೆ ಯೋಗ್ಯ ಮನೆಗಳ ಅಗತ್ಯವಿದೆ.
ಮಹ್ಮದ್‌ ರಫಿ, ಪಿಎಸ್‌ಐ ಹಟ್ಟಿ ಪೊಲೀಸ್‌ ಠಾಣೆ

ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ಮಿಸಿದ 100 ಮನೆಗಳಲ್ಲಿ 10 ಮನೆಗಳನ್ನು ಕಂಪನಿ ಆಡಳಿತ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದೇವೆ. ಕಂಪನಿ ಅಧಿಕಾರಿಗಳು ಅವುಗಳನ್ನು ಯಾರಿಗೆ ಕೊಡುತ್ತಾರೋ ಅವರಿಗೆ ಬಿಟ್ಟಿದ್ದು. ಪೊಲೀಸ್‌ ಇಲಾಖೆಗೂ ನಮಗೂ ಸಂಬಂಧವಿಲ್ಲ. 
 ಶಿವಾನಂದ, ವಸತಿ ಸಮಿತಿ ಸದಸ್ಯರು ಹಾಗೂ ಹಟ್ಟಿ ಚಿನ್ನದ ಗಣಿ ಕಾರ್ಮಿಕ ಮುಖಂಡ.

ಹಟ್ಟಿ ಚಿನ್ನದ ಗಣಿ ಕಂಪನಿಯವರು ನಿರ್ಮಿಸಿದ 100 ಮನೆಗಳಲ್ಲಿ ಕೆಲ ಮನೆಗಳನ್ನು ಪೊಲೀಸ್‌ ಇಲಾಖೆಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಕಂಪನಿಯವರು ಮನೆ ನೀಡಿದರೆ ನಮ್ಮ ಸಿಬ್ಬಂದಿಗೆ ಹಂಚಿಕೆ ಮಾಡಲಾಗುವುದು.
 ಶರಣಬಸಪ್ಪ ಸುಬೇದಾರ, ಡಿವೈಎಸ್ಪಿ 

ಅಮರೇಶ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next