Advertisement

ಠಾಗೋರ್ ಹುಟ್ಟುಹಬ್ಬದಂದು ದೀದಿ ಕೋವಿಡ್ ಗೀತೆ ವಿವಾದ

08:20 AM May 09, 2020 | Sriram |

ಕೋಲ್ಕತ: ದಿಗ್ಗಜ ಕವಿ ರವೀಂದ್ರನಾಥ್‌ ಠಾಗೋರ್ ಹುಟ್ಟು ಹಬ್ಬದ ದಿನದ ವಿಶೇಷ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರೆದಿರುವ ಕೋವಿಡ್-19 ವೈರಸ್‌ ಕುರಿತ ಜಾಗೃತಿ ಗೀತೆಯನ್ನು ರಾಜ್ಯವ್ಯಾಪಿ ಘಟಕಗಳಲ್ಲಿ ಹಾಡುವಂತೆ ಪಶ್ಚಿಮ ಬಂಗಾಳ ಪೊಲೀಸ್‌ ಇಲಾಖೆ ಹೇಳಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಮಮತಾ ಬ್ಯಾನರ್ಜಿ ಕ್ರಮವನ್ನು ಬಿಜೆಪಿ ಕಟು ಪದಗಳಿಂದ ಟೀಕಿಸಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಮುಕುಲ್‌ ರಾಯ್‌, “ಗುರುದೇವ ಜೀವನ ಪರಂಪರೆ ಆಚರಿಸುತ್ತಿರುವುದಕ್ಕೂ, ಮಮತಾ ಬ್ಯಾನರ್ಜಿಯ ಜಾಗೃತಿ ಗೀತೆಗೂ ಏನು ಸಂಬಂಧವಿದೆ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಹೂಗ್ಲಿಯ ಬಿಜೆಪಿ ಸಂಸದ ಚಟರ್ಜಿ, “ಪೊಲೀಸ್‌ ಆದೇಶಗಳು ಅವಮಾನಕರವಾಗಿದೆ, ಮಮತಾ ಜನಗಳ ಮೇಲೆ ಇದನ್ನು ಹೇರುವ ಪ್ರಯತ್ನ ನಡೆಸಿದ್ದಾರೆ’ ಎಂದು ಟೀಕಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ತೃಣಮೂಲ ಕಾಂಗ್ರೆಸ್‌ ನಾಯಕ ಮದನ್‌ ಮಿತ್ರಾ. “ದೀದಿ ಇಂತಹ ಸಂದರ್ಭದಲ್ಲಿ ಕೋವಿಡ್-19 ವಿರುದ್ಧ ಜಾಗೃತಿ ಮಾಡುವ ಕೆಲಸ ಮಾಡಿದ್ದಾರೆ. ಆದರೆ ಬಿಜೆಪಿ ಇಂತಹ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ದೂರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next