Advertisement

ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ ಪೊಲೀಸರು

04:23 PM Jan 02, 2021 | Team Udayavani |

ಚಿಕ್ಕಮಗಳೂರು: ಸಮವಸ್ತ್ರ ಧರಿಸಿ ಬಂದೋಬಸ್ತ್, ರಕ್ಷಣೆ, ಭದ್ರತಾ ಕಾರ್ಯಗಳಲ್ಲಿತೊಡಗಿಸಿಕೊಳ್ಳುತ್ತಿದ್ದ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳು ಪಂಚೆ, ಶಲ್ಯ ಧರಿಸಿಸಾರೋಟಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿಸಂಚರಿಸಿ ಪೊಲೀಸ್‌ ವರಿಷ್ಠಾಧಿಕಾರಿಗಳ ನಿವಾಸಕ್ಕೆ ತೆರಳಿ ಶುಭಾಶಯ ಕೋರುವ ಮೂಲಕ ವಿನೂತನವಾಗಿ ಹೊಸ ವರ್ಷವನ್ನು ಸ್ವಾಗತಿಸಿದರು.

Advertisement

ಡಿವೈಎಸ್‌ಪಿ ಟಿ.ಡಿ. ಪ್ರಭು ನೇತೃತ್ವದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕಿ ಸ್ವರ್ಣ, ನಗರ ವೃತ್ತ ನಿರೀಕ್ಷಕ ವಿನೋದ್‌ ಭಟ್‌, ಹಿರಿಯ ಅಧಿಕಾರಿ ಸಲೀಂ ಅಬ್ಟಾಸ್‌, ಮಲ್ಲಂದೂರು ಪಿಎಸ್‌ಐನಂದಿನಿ ಶೆಟ್ಟಿ ಸೇರಿದಂತೆ ಪಿಎಸ್‌ಐಗಳು ಅಲಂಕೃತ ಸಾರೋಟಿನಲ್ಲಿ ಮೆರವಣಿಗೆಯಮೂಲಕ ಪೊಲೀಸ್‌ ವರಿಷ್ಠಾ ಧಿಕಾರಿಗಳ ಕಚೇರಿ ತಲುಪಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಹರಿಶಿನ ಬಣ್ಣದ ಸೀರೆ ಉಟ್ಟು ಎದುರಾದ ಡಿವೈಎಸ್‌ಪಿ ಶೃತಿಅವರಿಗೆ ಎಲ್ಲಾ ಅಧಿಕಾರಿಗಳು ಸಾರೋಟಿನಿಂದಇಳಿದು ನಿಂಬೆಹಣ್ಣು ನೀಡಿ ಹೊಸ ವರ್ಷದ ಶುಭಾಷಯ ಕೋರಿದರು. ನಂತರ ಎಲ್ಲ ಅಧಿಕಾರಿಗಳು ಒಗ್ಗೂಡಿ ಪೊಲೀಸ್‌ ವರಿಷ್ಠಾಧಿಕಾರಿಗಳ ನಿವಾಸಕ್ಕೆ ತೆರಳಿ ಹೊಸ ವರ್ಷದ ಶುಭಾಶಯ ಕೋರಿದರು.

ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವಸಿಬ್ಬಂದಿಗಳಿಗೆ ಕೊಡಮಾಡುವ ಮುಖ್ಯಮಂತ್ರಿಪದಕಕ್ಕೆ ಜಿಲ್ಲೆಯ ಇಬ್ಬರು ಪೊಲೀಸ್‌ ಅಧಿಕಾರಿಗಳು ಭಾಜನರಾಗಿದ್ದಾರೆ.ಚಿಕ್ಕಮಗಳೂರು ಡಿಸಿಐಬಿ ಪೊಲೀಸ್‌ ನಿರೀಕ್ಷಕಕೆ. ಸತ್ಯನಾರಾಯಣ್‌ ಹಾಗೂ ಚಿಕ್ಕಮಗಳೂರು ಉಪವಿಭಾಗದ ಡಿ.ಟಿ. ಪ್ರಭು ಅವರಿಗೆ 2019ನೇ ಸಾಲಿನ ಸಿಎಂ ಪ್ರಶಸ್ತಿ ಪ್ರಕಟಿಸಿದೆ.

ರಸ್ತೆ ಬದಿಯ ಪ್ಲಾಸ್ಟಿಕ್‌ ಆರಿಸಿ ಹೊಸ ವರ್ಷಾಚರಣೆ :

ಶೃಂಗೇರಿ: ಹೊಸ ವರ್ಷಾಚರಣೆಯನ್ನು ಗ್ರಾಮದ ರಸ್ತೆಯಇಕ್ಕೆಲದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ತ್ಯಾಜ್ಯವನ್ನು ತೆಗೆಯುವುದರ ಮೂಲಕ ವಿದ್ಯಾರಣ್ಯಪುರ ಗ್ರಾಮಸ್ಥರು ವಿಭಿನ್ನವಾಗಿ ಆಚರಿಸಿದರು.

Advertisement

ಶ್ರಮದಾನ ಉದ್ಘಾಟಿಸಿ ಮಾತನಾಡಿದ ಪಪಂ ಮಾಜಿ ಅಧ್ಯಕ್ಷ ನಾಗೇಶ್‌ ಕಾಮತ್‌, ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡುವಸಂಕಲ್ಪ ಎಲ್ಲರೂ ಕೈಗೊಳ್ಳಬೇಕು ಎಂದರು. ಕಸಾಪ ಮಾಜಿ ಅಧ್ಯಕ್ಷ ಬಿ.ಎಲ್‌. ರವಿಕುಮಾರ್‌ ಮಾತನಾಡಿದರು. ಪಟ್ಟಣದಿಂದವಿದ್ಯಾರಣ್ಯಪುರ ರಸ್ತೆಯ ಇಕ್ಕೆಲದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ ತ್ಯಾಜ್ಯವನ್ನುಚೀಲಗಳಿಗೆ ತುಂಬಲಾಯಿತು. ಶ್ರಮದಾನದಲ್ಲಿ ಪಪಂ ಅಧ್ಯಕ್ಷಹರೀಶ್‌ ಶೆಟ್ಟಿ, ವಿದ್ಯಾರಣ್ಯಪುರ ಗ್ರಾಪಂ ಸದಸ್ಯರಾದ ವಿಜಯತಿಪ್ಪನಮಕ್ಕಿ, ಶಿಲೇಂದ್ರ,ನಾಗೇಶ್ವರ ರಾವ್‌, ವಿದ್ಯಾಶಂಕರ್‌ ಬಾಪಟ್‌, ಸತ್ಯನಾರಾಯಣ ಭಟ್‌, ಜ್ಯೋತಿ, ಕವಿತಾ, ರವಿ, ಸಂಪ್ರತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next