ದೊಡ್ಡಬಳ್ಳಾಪುರ: ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿಗೆ ‘ಗೋಮಾಂಸ’ (ಎಮ್ಮೆ ಮಾಂಸ) ಸಾಗಿಸುತ್ತಿದ್ದ ಏಳು ಮಂದಿಯನ್ನು ಭಾನುವಾರ ಬಂಧಿಸಲಾಗಿದ್ದು ಮತ್ತು ಐದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದ ಐಬಿ ವೃತ್ತದಲ್ಲಿ ವಾಹನಗಳನ್ನ ತಡೆದು ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳ ಕಾರಿಗೆ ಬೆಂಕಿ ಹಚ್ಚಿದುದಕ್ಕಾಗಿ ಶ್ರೀರಾಮ ಸೇನೆಯ 14 ಮಂದಿ ಕಾರ್ಯಕರ್ತನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರಕಾರ, ಬೆಳಗ್ಗೆ 5.45 ರ ಸುಮಾರಿಗೆ ಘಟನೆ ನಡೆದಿದ್ದು, ಹಿಂದೂಪುರದಿಂದ ಬೆಂಗಳೂರಿಗೆ ಮಾಂಸ ಸಾಗಿಸುತ್ತಿದ್ದ ಐದು ಮಿನಿ ಟ್ರಕ್‌ಗಳು ಮತ್ತು ಕಾರನ್ನು ದೊಡ್ಡಬಳ್ಳಾಪುರದಲ್ಲಿ ಶ್ರೀರಾಮಸೇನೆ ಸದಸ್ಯರು ಅಡ್ಡಗಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತರು ಕಾರಿಗೆ ಬೆಂಕಿ ಹಚ್ಚಿ ಮಾಂಸ ಸಾಗಿಸುತ್ತಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಾಹಿತಿ ತಿಳಿದ ತತ್ ಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಏಳು ಮಂದಿಯನ್ನು ರಕ್ಷಿಸಿದ್ದಾರೆ.ಈ ಸಂಬಂಧ ನಾವು ಎರಡು ಪ್ರಕರಣಗಳನ್ನು ದಾಖಲಿಸಿದ್ದೇವೆ. ಒಂದು ಗೋಹತ್ಯೆ ಕಾಯ್ದೆಯಡಿ ಮತ್ತು ಇನ್ನೊಂದು ಕಾರನ್ನು ಧ್ವಂಸಗೊಳಿಸಿದ ಮತ್ತು ಸಾಗಣೆದಾರರ ಮೇಲೆ ಹಲ್ಲೆ ಮಾಡಿದ ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ. ಹಾಗಾಗಿ ನಾವು 21 ಜನರನ್ನು ಬಂಧಿಸಿದ್ದೇವೆ. ಏಳು ಮಂದಿ ಮಾಂಸ ಸಾಗಣೆದಾರರು ಮತ್ತು 14 ಮಂದಿ ಶ್ರೀರಾಮ ಸೇನೆಯ ಕಾರ್ಯ ಕರ್ತರು ”ಎಂದು ಎಸ್ಪಿ ಹೇಳಿದ್ದಾರೆ.
ಮಾಂಸ ಸಾಗಣೆದಾರರಲ್ಲಿ ಐವರು ಹಿಂದೂಪುರದವರಾಗಿದ್ದು, ಇನ್ನಿಬ್ಬರು ಗೌರಿಬಿದನೂರಿನವರಾಗಿದ್ದಾರೆ. ಜಾನುವಾರುಗಳ ಅಕ್ರಮ ಸಾಗಣೆಯನ್ನು ಬೆಂಬಲಿಸಿದ ಜನರ ಬಗ್ಗೆ ಹೆಚ್ಚಿನ ಸುಳಿವುಗಳು ಮತ್ತು ಹೆಸರುಗಳನ್ನು ಪಡೆಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು.