Advertisement

ಕ್ಯಾಮರಾ ಕಣ್ಣಲ್ಲಿ ವಿಮಾನ ಪತನ; ಸಾವಿರಾರು ಜನ ಪ್ರತ್ಯಕ್ಷ ಸಾಕ್ಷಿ!

04:53 PM Jan 27, 2017 | Team Udayavani |

ಸಿಡ್ನಿ: ಲಘು ವಿಮಾನವೊಂದು ನೋಡ, ನೋಡುತ್ತಿದ್ದಂತೆಯೇ ಪರ್ತ್ ನ ಸ್ವಾನ್ ನದಿಗೆ ಬಿದ್ದು ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

Advertisement

ಇಲ್ಲಿನ ಪರ್ತ್ ನಗರದಲ್ಲಿ ಆಸ್ಟ್ರೇಲಿಯನ್ ಡೇ ಅಂಗವಾಗಿ ಗುರುವಾರ ಮಧ್ಯಾಹ್ನದಿಂದ ಸಿಡಿಮದ್ದು ಪ್ರದರ್ಶನ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಸಾವಿರಾರು ಜನರು ನೆರದಿದ್ದರು. ಆಸ್ಟ್ರೇಲಿಯನ್ ಡೇ ಅಂಗವಾಗಿ ನಡೆದ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಪೀಟರ್ ಲೈಂಚ್(52ವರ್ಷ) ಹಾಗೂ ಇಂಡಾ  ಕ್ಯಾಕ್ರಾವಾಟಿ(30) ಲಘು ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗ ವಿಮಾನ ಪರ್ತ್ ನದಿಯಲ್ಲಿ ಪತನಗೊಂಡಿತ್ತು! ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ನದಿ ಮೇಲೆ ಹಾರಾಟ ನಡೆಸುತ್ತಿದ್ದಾಗಲೇ ವಿಮಾನ ಪತನಗೊಂಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ, ಆದರೆ ವಿಮಾನ ಯಾವ ಕಾರಣದಿಂದ ಪತನಗೊಂಡಿದೆ ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ವಿಮಾನದ ಮುಂಭಾಗ ನೀರಿನೊಳಗೆ ಮುಳಗಿ, ಒಂದು ರೆಕ್ಕೆಯ ಭಾಗ ಮಾತ್ರ ನೀರಿನ ಮೇಲ್ಭಾಗದಲ್ಲಿ ಕಾಣಿಸುತ್ತಿತ್ತು ಎಂದು ವರದಿ ವಿವರಿಸಿದೆ.

ವಿಮಾನ ನೀರಿನಲ್ಲಿ ಪತನಗೊಳ್ಳುವಾಗ ಸಾವಿರಾರು ಮಂದಿ ವೀಕ್ಷಿಸುತ್ತಲೇ ಇದ್ದರು. ಆದರೆ ವಿಮಾನ ಪತನಗೊಳ್ಳುತ್ತಿದೆ ಎಂದು ಯಾರೂ ಭಾವಿಸಿಲ್ಲವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಘಟನೆಯಿಂದಾಗಿ 33 ವರ್ಷಗಳ ಇತಿಹಾಸ ಹೊಂದಿರುವ ಆಸ್ಟ್ರೇಲಿಯನ್ ಡೇ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next