Advertisement

ಪ್ರತ್ಯೇಕತಾಗಳ ಧರಣಿ ವಿಫ‌ಲ;ಮೀರ್‌ ವೇಜ್‌, ಮಲಿಕ್‌ ಸೆರೆ

04:29 PM Nov 15, 2017 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರ ಪೊಲೀಸರಿಂದು ಪ್ರತ್ಯೇಕವಾದಿ ನಾಯಕರಾದ ಮೀರ್‌ ವೇಜ್‌ ಉಮರ್‌ ಫಾರೂಕ್‌ ಮತ್ತು ಮೊಹಮ್ಮದ್‌ ಯಾಸಿನ್‌ ಮಲಿಕ್‌ ಅವರನ್ನು ಬಂಧಿಸಿದರು. 

Advertisement

ಈ ಪ್ರತ್ಯೇಕತಾವಾದಿ ನಾಯಕರು ಪ್ರತಿಭಟನ ಮೆರವಣಿಗೆಯನ್ನು ನಡೆಸಿ ಬಳಿಕ ನಗರ ಕೇಂದ್ರ ಪ್ರದೇಶದಲ್ಲಿ ಧರಣಿ ಕೂರಲು ಯತ್ನಿಸಿದ್ದರು. ಪೊಲೀಸರು ಇವರ ಧರಣಿಯನ್ನು ವಿಫ‌ಲಗೊಳಿಸಿದರು.

ಬಂಧನದಲ್ಲಿರುವ ಕಾಶ್ಮೀರೀ ತರುಣರಿಗೆ ಮೂರನೇ ದರ್ಜೆಯಲ್ಲಿ ನಡೆಸಿಕೊಳ್ಳಲಾಗುತ್ತಿದೆ; ಅನೇಕರು ಇನ್ನೂ ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯುತ್ತಿದ್ದಾರೆ; ಇವರ ವಿಮೋಚನೆಯನ್ನು ಪ್ರತ್ಯೇಕತಾವಾದಿ ನಾಯಕರು ಆಗ್ರಹಿಸಿ ಧರಣಿ ಹೂಡುವವರಿದ್ದರು.

ಪ್ರತ್ಯೇಕತಾವಾದಿ ನಾಯಕರೊಂದಿಗೆ ಅಬಿ ಗುಜಾರ್‌ ಸಹಿತ ಹಲವು ಬೆಂಬಲಿಗರನ್ನು ಜೆಕೆಎಲ್‌ಎಫ್ ಪ್ರಧಾನ ಕಾರ್ಯಾಲಯದ ಮುಂದೆ ಬಂಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next