Advertisement

ಪೊಲೀಸರ ಮೇಲೆ ದಾಳಿ:ಮಗು ಕಿಡ್ನ್ಯಾಪರ್ ಕಾಲಿಗೆ ಗುಂಡು 

11:48 AM Oct 13, 2017 | Team Udayavani |

ಬೆಂಗಳೂರು: ನಗರದ ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಮುಗವಿನ ಅಪಹರಣಕಾರನೊಬ್ಬ ಕಾರ್ಯಾಚರಣೆಗೆ ತೆರಳಿದ ಪೊಲೀಸರ ಮೇಲೆ ಮಾರಾಕಾಯುಧಗಳಿಂದ ಇರಿಯಲು ಯತ್ನಿಸಿದ್ದು ,ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. 

Advertisement

ನೂರುಲ್ಲಾ ಎಂಬ ದುಷ್ಕರ್ಮಿಯ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. 

ಏನಿದು ಘಟನೆ ? 

ಅಕ್ಟೋಬರ್‌ 5 ರಂದು ಬಡ ಕೂಲಿ ಕಾರ್ಮಿಕ ಮುಸ್ಲಿಂ ದಂಪತಿಯ 1 ವರ್ಷದ ಅಭಿರಾಮ್‌ ಎಂಬ ಮಗುವನ್ನು ಮೂವರು ಬೈಕ್‌ನಲ್ಲಿ ಬಂದು ಅಪಹರಿಸಿ ಇಂದಿರಾನಗರದ ಶಹನಾಜ್‌ ಖಾನಮ್‌ಗೆ ನೀಡಿದ್ದರು. 

ಶಹನಾಜ್‌ಎಂಬಾಕೆ ಗಂಡು ಮಗು ಬೇಕೆಂದು ನೂರುಲ್ಲಾ, ಇಜಾಕ್‌ ಖಾನ್‌ ಮತ್ತು ವಾಹಿದ್‌ ಎನ್ನುವವರಿಗೆ 15 ಸಾವಿರ ಅಡ್ವಾನ್ಸ್‌ ನೀಡಿದ್ದಳು. ಅಡ್ವಾನ್ಸ್‌ ಪಡೆದ ಕೂಡಲೇ ಮುಗವನ್ನು ಅಪಹರಿಸಿದ್ದರು. ಈ ಬಗ್ಗೆ ಕೊತ್ತನೂರು ಠಾಣೆಯಲ್ಲಿ ಅಭಿರಾಮ್‌ ಪೋಷಕರು ದೂರು ನೀಡಿದ್ದರು. 

Advertisement

ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿನ್ನೆ ಗುರುವಾರ ಶಿವಾಜಿನಗರದಲ್ಲಿ ಶಹನಾಜ್‌ ಬಳಿ ಮಗುವನ್ನು  ಪತ್ತೆ ಮಾಡಿದ್ದರು. ಕೂಡಲೇ ಶಹನಾಜ್‌ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಕೆ ನೀಡಿದ  ಮಾಹಿತಿಯನ್ನಾಧರಿಸಿ ಪ್ರಮುಖ ಆರೋಪಿಗಳಾದ ಇಜಾಕ್‌ ಮತ್ತು ವಾಹಿದ್‌ನನ್ನು ತಕ್ಷಣ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ನೂರುಲ್ಲಾ  ತಪ್ಪಿಸಿಕೊಂಡಿದ್ದ. 

ಕೊತ್ತೂರು ಠಾಣೆಯ ಇನ್ಸ್‌ಪೆಕ್ಟರ್‌ ಮತ್ತು ಪಿಎಸ್‌ಐ ಮತ್ತು ಸಿಬಂದಿಗಳು ಇಂದು ಬೆಳಗ್ಗೆ  ಕಾರ್ಯಾಚರಣೆ ನಡೆಸಿ ನೂರುಲ್ಲಾನನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ದಾಳಿ ನಡೆಸಲು ಮುಂದಾದಾಗ ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next