Advertisement

ಮೈಸೂರು ಗ್ಯಾಂಗ್ ರೇಪ್: 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು

05:45 PM Nov 28, 2021 | Team Udayavani |

ಮೈಸೂರು: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ  ಪೊಲೀಸ್ ಅಧಿಕಾರಿಗಳು ಬರೋಬ್ಬರಿ 1499 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.

Advertisement

ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಆರು ಆರೋಪಿಗಳನ್ನು ಹೆಸರಿಸಲಾಗಿದ್ದು, ಘಟನೆಯಲ್ಲಿ ಒಬ್ಬ ಆರೋಪಿಯ ಪಾತ್ರವಿಲ್ಲದ ಕಾರಣ ಅವನ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಪೊಲೀಸರು ಉಳಿದ ಆರೋಪಿಗಳನ್ನು ಐಪಿಸಿ ಸೆಕ್ಷನ್ 397, 376ಬಿ , 120ಬಿ, 334, 325 ಮತ್ತು 326ರ ಅಡಿಯಲ್ಲಿ ದಾಖಲಿಸಿದ್ದು, ನ್ಯಾಯಾಲಯ ಪ್ರಕರಣವನ್ನು ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ.

ಘಟನೆ ಆಗಸ್ಟ್ 24 ರಂದು ನಡೆದಿತ್ತು, ಸಂತ್ರಸ್ತೆ ತನ್ನ ಗೆಳೆಯನೊಂದಿಗೆ ಕಾಲೇಜ್ ಮುಗಿಸಿ ಚಾಮುಂಡಿ ಬೆಟ್ಟದ ಬಳಿಯ ಏಕಾಂತ ಸ್ಥಳಕ್ಕೆ ಹೋಗಿದ್ದ ವೇಳೆ ಗ್ಯಾಂಗ್ ರೇಪ್ ಎಸಗಲಾಗಿತ್ತು.

ಏಳು ಮಂದಿ ದುಷ್ಕರ್ಮಿಗಳು ಇಬ್ಬರ ಮೇಲೆ ಹಲ್ಲೆ ನಡೆಸಿ, ಯುವಕನಿಂದ 3 ಲಕ್ಷ ರೂ.ಹಣ ಕೇಳಿ ಬೆದರಿಕೆ ಹಾಕಿದ್ದರು.

Advertisement

ಘಟನೆಯ ನಂತರ ಸಂತ್ರಸ್ತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮಿಳುನಾದು ಮೂಲದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದರು.

ಘಟನೆ ಬಳಿಕ ರಾಜ್ಯದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿಡಿದ್ದರು.ವ್ಯಾಪ್ಯಾಕ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆ ಬಳಿಕ ಸಂತ್ರಸ್ತೆ ತನ್ನ ಹುಟ್ಟೂರಿಗೆ ಹಿಂತಿರುಗಿ ಬಹಳ ಸಮಯದವರೆಗೆ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಳು. ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಆಕೆ ಹೇಳಿಕೆ ನೀಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next