Advertisement

ಪೊಲೀಸ್‌ ಎಸ್ಕಾರ್ಟ್‌ ಸೇವೆ ಇನ್ನು ಮುಂದೆ ದುಬಾರಿ

08:26 AM Dec 05, 2017 | |

ಬೆಂಗಳೂರು: ಪೊಲೀಸ್‌ ಎಸ್ಕಾರ್ಟ್‌ ಸೇವೆಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿದ್ದ ಶುಲ್ಕವನ್ನು ಶೇ.569 ರಿಂದ ಶೇ. 
616ರಷು ಹೆಚ್ಚಿಸಿ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ. ತನ್ಮೂಲಕ 26 ವರ್ಷಗಳ ಹಿಂದಿನ ದರ ಶುಲ್ಕವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ಹೊಸ ದರ ನಿಗದಿ ಮಾಡಿ ಆದೇಶಿಸಿದೆ.

Advertisement

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಖಜಾನೆ ವಿಭಾಗಕ್ಕೆ ಮಾತ್ರ ಪೊಲೀಸ್‌ ಎಸ್ಕಾರ್ಟ್‌ ಸೇವಾ ಶುಲ್ಕದಿಂದ ವಿನಾಯಿತಿ ಮುಂದುವರಿಯಲಿದ್ದು, ಉಳಿದಂತೆ ಇತರೆ ಎಲ್ಲಾ ವಿಭಾಗಗಳಿಗೆ ಎಸ್ಕಾರ್ಟ್‌ ಸೇವೆ ಮತ್ತು ವಾಹನಗಳ ಶುಲ್ಕಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಸರ್ಕಾರದ ಹೊಸ ಆದೇಶದಿಂದಾಗಿ ಒಬ್ಬ ಇನ್‌ಸ್ಪೆಕ್ಟರ್‌, ಮೂವರು ಸಿಬ್ಬಂದಿ ಒಳಗೊಂಡ ಎಸ್ಕಾರ್ಟ್‌ ವಾಹನ ದಿನಕ್ಕೆ 100 ಕಿ.ಮೀ. ಸೇವೆ ಒದಗಿಸಿದರೆ ಇದುವರೆಗೆ ವಾಹನ ಸೇರಿದಂತೆ ಇದ್ದ ಒಟ್ಟು ಸೇವಾ ಶುಲ್ಕ 1,450 ರೂ.ನಿಂದ 7,950 ರೂ.ಗೆ ಏರಲಿದೆ. ಖಾಸಗಿ ವ್ಯಕ್ತಿ ಹಾಗೂ ಬ್ಯಾಂಕಿಂಗ್‌ ಸೇವೆಗೆ ಇನ್ಸ್‌ಪೆಕ್ಟರ್‌ ನೇತೃತ್ವದ ಎಸ್ಕಾರ್ಟ್‌ ಸೇವೆ
ಬಳಸಿಕೊಂಡರೆ ಹಾಲಿ ಇರುವ 1,670 ರೂ. ಶುಲ್ಕದ ಬದಲು ಒಟ್ಟು 9,950 ರೂ. ಪಾವತಿಸಬೇಕಾಗುತ್ತದೆ. ಒಂದು ವೇಳೆ ಈ ಸೇವೆಯ ಅವಧಿ 3 ಗಂಟೆಗಿಂತ ಹೆಚ್ಚಾದರೆ ಹೆಚ್ಚುವರಿ 300 ರೂ. ಭರಿಸಬೇಕಾಗುತ್ತದೆ.

ಎಸ್ಕಾರ್ಟ್‌ ವಾಹನ ಶುಲ್ಕವನ್ನು ಪ್ರತಿ ಕಿ.ಮೀ.ಗೆ 60 ರೂ. (ಪೆಟ್ರೋಲ್‌) ಹಾಗೂ 30 ರೂ.ಗೆ (ಡಿಸೇಲ್‌) ಹೆಚ್ಚಿಸಲಾಗಿದೆ. ಬ್ಯಾಂಕಿಂಗ್‌ ಹಾಗೂ ಇತರೆ ಸೇವೆಗಳಿಗೆ ವಾಹನ ಬಳಕೆಗೆ ಪ್ರತಿ ಕಿ.ಮೀ.ಗೆ 120 ರೂ. (ಪೆಟ್ರೋಲ್‌) ಹಾಗೂ 60 ರೂ. (ಡಿಸೇಲ್‌)ಗೆ ನಿಗದಿಪಡಿಸಲಾಗಿದೆ. ಅದೇ ರೀತಿ ಸ್ವಾಧೀನ ಪಡಿಸಿಕೊಂಡರೆ ಪ್ರತಿ ಕಿ.ಮೀ.ಗೆ 150 ರೂ. ಹಾಗೂ 24 ಗಂಟೆ ನಂತರದ ದರವನ್ನು ಕಿ.ಮೀ.ಗೆ 575 ರೂ.ಗೆ ಏರಿಕೆ ಮಾಡಲಾಗಿದೆ. ಪೊಲೀಸ್‌ ಎಸ್ಕಾರ್ಟ್‌ ಸಿಬ್ಬಂದಿ ಮತ್ತು ಎಸ್ಕಾರ್ಟ್‌ ವಾಹನ ಶುಲ್ಕವನ್ನು ಹೆಚ್ಚಿಸುವಂತೆ ಈ ಹಿಂದೆ ಪೊಲೀಸ್‌ ಇಲಾಖೆ ನಾಲ್ಕೈದು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸ್ಪಂದಿಸಿರಲಿಲ್ಲ. ಇದೀಗ ಏಕಾಏಕಿ ಶುಲ್ಕ
ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next