Advertisement

Udupi: ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ‘ಕ್ಯಾಪ್ಟನ್’ ಶ್ವಾನ ನಿವೃತ್ತಿ

11:56 AM Oct 25, 2024 | Team Udayavani |

ಉಡುಪಿ: ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶ್ವಾನ ‘ಕ್ಯಾಪ್ಟನ್’ ತನ್ನ ಸೇವೆಯಿಂದ ಶುಕ್ರವಾರ (ಅ.25) ರಂದು ನಿವೃತ್ತಿ ಹೊಂದಿದೆ.

Advertisement

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಗೆ ಪೊಲೀಸ್ ಅಧೀಕ್ಷಕರು ನಿವೃತ್ತಿ ಸನ್ಮಾನವನ್ನು ನೆರವೇರಿಸಿದರು. ಕವಾಯತು ನೀಡುವುದರ ಮೂಲಕ ಗೌರವ ಸಲ್ಲಿಸಲಾಯಿತು.

ಕ್ಯಾಪ್ಟನ್ ಶ್ವಾನ ಸೇವೆ ಸಲ್ಲಿಸಿದ ವಿವರ:
ಮಾನ್ಯ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು, ಐಪಿಎಲ್ ಟೂರ್ನಿ, ವಿಶ್ವಕಪ್, ಏರ್ ಶೋ, ಬೇರೆ ದೇಶಗಳ ಗೌರವಾನ್ವಿತ ಪ್ರಧಾನಿಗಳು ಹೀಗೆ ರಾಜ್ಯ ಹೊರರಾಜ್ಯ ಹೊರ ಜಿಲ್ಲೆಗಳಲ್ಲಿ ಸರಿ ಸುಮಾರು 400 ಕ್ಕೂ ಅಧಿಕ ವಿದ್ವಂಸಕ ಕೃತ್ಯ ತಪಾಸಣ ಕಾರ್ಯ ಯಶಸ್ವಿಯಾಗಿ ಪೊರೈಸಿದೆ. ಮಾತ್ರವಲ್ಲ ಹೆಸರಿಗೆ ತಕ್ಕಹಾಗೆ ಕ್ಯಾಪ್ಟನ್ ಎಂಬ ಗರಿಮೆಯನ್ನು ಪಡೆದುಕೊಂಡಿದೆ.

ವಲಯ ಮಟ್ಟದ ಕರ್ತವ್ಯಕೂಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದೆ. ಈ ಕವಾಯತಿನಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ. ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್ ಟಿ ಸಿದ್ಧಲಿಂಗಪ್ಪ. ಕೆಎಸ್ ಪಿಎಸ್, ಡಿಎಆರ್ ಅಧಿಕ್ಷಕರಾದ ಶ್ರೀ ತಿಮ್ಮಪ್ಪ ಗೌಡ ಕೆಎಸ್ ಪಿಎಸ್ , ಹಾಗೂ ಎಲ್ಲ ಠಾಣೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು‌.

ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ: NIA ಘೋಷಣೆ

Advertisement

Advertisement

Udayavani is now on Telegram. Click here to join our channel and stay updated with the latest news.

Next