Advertisement

ಪೊಲೀಸರೇ, ವರ್ಗಾವಣೆಗೆ ಪ್ರಭಾವ ಬಳಸೀರಾ ಜೋಕೆ!

01:51 PM Nov 22, 2018 | |

ಬೆಂಗಳೂರು: ಅನಾರೋಗ್ಯದ ನೆಪ ಹಾಗೂ ಸಚಿವ-ಶಾಸಕರ ಶಿಫಾರಸುಗಳ ಪ್ರಭಾವ ಬಳಸಿ ಹೇಳಿ ತಾವು ಬಯಸಿದ ಠಾಣೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗುವ ಸಿಬ್ಬಂದಿಗೆ “ಕಡ್ಡಾಯ ನಿವೃತ್ತಿ’ ಅಸ್ತ್ರ ಬಳಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

Advertisement

ಇತ್ತೀಚೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಅನಾರೋಗ್ಯದ ಕಾರಣಗಳಿನ್ನಿಟ್ಟು ಕೊಂಡು ಅಸಿಸ್ಟೆಂಟ್‌ ಸಬ್‌ ಇನ್ಸ್‌ ಪೆಕ್ಟರ್‌ (ಎಎಸ್‌ಐ) ಹೆಡ್‌ ಕಾನ್ಸ್‌ ಟೇಬಲ್‌, ಕಾನ್ಸ್‌ಟೇಬಲ್‌ಗ‌ಳ ಹೆಚ್ಚು ಮುಂದಾಗುತ್ತಿದ್ದಾರೆ. ಈ ಬೆಳವಣಿಗೆ ತಲೆನೋವಾಗಿ ಪರಿಣಮಿಸಿದೆ.

ಅನಾರೋಗ್ಯ ಹಾಗೂ ಜನಪ್ರತಿನಿಧಿಗಳ ಶಿಫಾರಸು ಪಡೆದು “ಆಯಕಟ್ಟಿನ’ ಪೊಲೀಸ್‌ ಠಾಣೆಗೆ ವರ್ಗಾವಣೆ ಪಡೆದುಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್‌ ಇಲಾಖೆ, ಅಂಥವರು ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅಸಮರ್ಥರು ಎಂದು ಪರಿಗಣಿಸಿ ಕೆಸಿಎಸ್‌ಆರ್‌ ನಿಯಮ 285ರ ಅನ್ವಯವೇ ಕಡ್ಡಾಯ ನಿವೃತ್ತಿಗೊಳಿಸಲು ಇಲಾಖೆ ನಿರ್ಧರಿಸಿದೆ.

 ಕನಿಷ್ಠ ವರ್ಗಾವಣೆ ಅವಧಿ ಪೂರೈಸದೆ, ಗಂಭೀರ ಅನಾರೋಗ್ಯ ಸಮಸ್ಯೆ ಇಲ್ಲದಿದ್ದರೂ, ಸಾಮಾನ್ಯ ಅನಾರೋಗ್ಯ ಕಾರಣಗಳಿಗೆ ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸುವ ಸಿಬ್ಬಂದಿಯನ್ನು ಕಡ್ಡಾಯ ನಿವೃತ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ರವಾನಿಸಲಾಗುತ್ತಿದೆ. ಜತೆಗೆ, ಅಂತಹ ಪ್ರಕರಣಗಳಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ (ಕೆಸಿಎಸ್‌ಆರ್‌)ಯ 285ರ ಅಡಿಯಲ್ಲಿರುವ ಅವಕಾಶದಂತೆ ಕಡ್ಡಾಯ ನಿವೃತ್ತಿ ಮಾಡುವ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿ ಎಂದು ಆಯಾ ಘಟಕಗಳ
ಮುಖ್ಯಸ್ಥರಿಗೆ ಸೂಚನೆ ರವಾನಿಸಲಾಗಿದೆ.

ವರ್ಗಾವಣೆ ಅವಧಿ ಪೂರೈಸದೆ ಅನಾರೋಗ್ಯದ ಆಧಾರದಲ್ಲಿ ವರ್ಗಾವಣೆ ಬಯಸುವ ಸಿಬ್ಬಂದಿ ನೇರವಾಗಿ ವರ್ಗಾವಣೆ ಬಯಸಿ ಪದೇ ಪದೆ ಮನವಿ ಸಲ್ಲಿಸಿದರೆ ಕೆಸಿಎಸ್‌ಆರ್‌ ನಿಯಮಾವಳಿ 285ರ ಅಡಿಯ ಅವಕಾಶ ಬಳಸಿ ಕಡ್ಡಾಯ ನಿವೃತ್ತಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಈ ವಿಚಾರದಲ್ಲಿ ಘಟಕಾಧಿಕಾರಿಗಳಿಗೆ ಅಧಿಕಾರವಿದೆ. ಹೀಗಾಗಿ ಅವರ ಘಟಕಗಳಲ್ಲಿರುವ ಪರಿಸ್ಥಿತಿಗೆ ಅನುಗುಣವಾಗಿ ಅವರೇ ಕ್ರಮವಹಿಸುತ್ತಿದ್ದಾರೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.  

Advertisement

ಇಲಾಖೆ ಅಧಿಕಾರಿಗಳಿಗೆ ಡಿಜಿಪಿ ಚಾಟಿ ಕೆಲದಿನಗಳ ಹಿಂದಷ್ಟೇ ವರ್ಗಾವಣೆ ವಿಚಾರದಲ್ಲಿ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಸೇರಿ ಹಿರಿಯ ಅಧಿಕಾರಿಗಳಿಗೂ ಬಿಸಿಮುಟ್ಟಿಸಿದ್ದ ಡಿಜಿಪಿ ನೀಲಮಣಿ ರಾಜು, , ವರ್ಗಾವಣೆ ಸಮಯದಲ್ಲಿಯೇ ಪದೇ ಪದೇ ವೈದ್ಯಕೀಯ ರಜೆ ಪಡೆಯುವ ಪೊಲೀಸ್‌ ಸಿಬ್ಬಂದಿ ಎಕ್ಸಿಕ್ಯೂಟೀವ್‌ ಹುದ್ದೆ ನಿರ್ವಹಿಸುವುದು ಸೂಕ್ತವಲ್ಲ, ಅವರ ದೈಹಿಕ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಪರಿಗಣಿಸಿ ಕಡ್ಡಾಯವಾಗಿ 6 ತಿಂಗಳು ಅಥವಾ 1 ವರ್ಷ ನಾನ್‌ ಎಕ್ಸಿಕ್ಯೂಟೀವ್‌ ಹುದ್ದೆಗೆ ವರ್ಗಾಯಿಸುವ ಶಿಫಾರಸಿನ ಕುರಿತು ಸುತ್ತೋಲೆ ಹೊರಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next