Advertisement
ಕೊಲೆ ಬೆದರಿಕೆ ಒಡ್ಡಿರುವ ಕಾರ್ತಿಕ್ ಕುಂಬ್ಳೆ ರಾಜಕೀಯವಾಗಿ ಗಡಿ ಜಿಲ್ಲೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ 1ನೇ ಆರೋಪಿ, ಬಂಟ್ವಾಳ ಆಸುಪಾಸಿನಲ್ಲಿ ಸುತ್ತಾಡುತ್ತಿದ್ದಾನೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ನಡೆದ ಶರತ್, ಜಲೀಲ್ ಕರೋಪಾಡಿ, ಹರೀಶ್, ಅಶ್ರಫ್, ನಝೀರ್ಹತ್ಯೆಗಳ ಆರೋಪಿಗಳು ಯಾರು ಎಂದು ಗಮನಿಸಿ ದರೆ ಅದರಲ್ಲಿ ಎರಡು ಮತೀಯ ಸಂಘಟನೆಗಳಿಗೆ ಸೇರಿದವರಿದ್ದಾರೆ. ಇಂತಹ ಕಾರ್ಯಕರ್ತರ ಪರ ನ್ಯಾಯವಾದಿಗಳು ಕೂಡ ಪಕ್ಷ ನೇಮಿಸಿದವರೇ ಆಗಿ ರುತ್ತಾರೆ. ಕಾಂಗ್ರೆಸ್‌ನ ಯಾರೊಬ್ಬ ಕಾರ್ಯಕರ್ತನೂ ಕೊಲೆ, ಹಲ್ಲೆ ಪ್ರಕರಣದಲ್ಲಿ ಇಲ್ಲ ಎಂದು ಹೇಳಿದರು.
ಶಾಲೆಗೆ ಅಕ್ಕಿಯನ್ನು ನಿಲ್ಲಿಸಿದ್ದೇನೆ ಎಂದು ಅಪಪ್ರಚಾರ ಮಾಡಲಾಗಿದೆ. ನಾನು ಅಕ್ಕಿಯನ್ನು ನಿಲ್ಲಿಸಿಲ್ಲ. ಕೊಲ್ಲೂರು ದೇವಸ್ಥಾನದಿಂದ ವರ್ಷಕ್ಕೆ 4 ಕೋಟಿ ರೂ. ಸಲ್ಲಿಕೆಯಾಗುತ್ತಿದ್ದ ದೇವರ ದುಡ್ಡನ್ನು ಉಳಿಸಿದ್ದೇನೆ. ಅದಕ್ಕೆ ಕೊಲ್ಲೂರು ದೇವಿಯ ಆಶೀರ್ವಾದವು ನನ್ನ ಮೇಲಿದೆ ಎಂದರು. ಲೋಕಸಭಾ ಅಭ್ಯರ್ಥಿಯ ಗೆಲುವು ಸಂಭ್ರಮಾಚರಣೆ ಮೆರವಣಿಗೆಯಲ್ಲಿದ್ದ ತಂಡವು ಬಡಕಬೈಲು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ಮನೆಗೆ ಹೋಗಿ ಪುರುಷರು ಮನೆಯಲ್ಲಿ ಇಲ್ಲದ ಸಂದರ್ಭ ಅಂಗಳದಲ್ಲಿ ಪಟಾಕಿ ಸಿಡಿಸಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದೆ. ಇಂಥ ವರ್ತನೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.
Related Articles
Advertisement
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ರಮಾನಾಥ ರೈ ಅಧಿಕಾರದಲ್ಲಿ ಇದ್ದಾಗ ಗಲಾಟೆ ಆಗುತ್ತಿತ್ತು, ಈಗ ಇಲ್ಲ ಎನ್ನುವವರು, ಆಗ ಗಲಾಟೆ ಮಾಡಿದವರು ಯಾರು ಎಂಬುದನ್ನು ಗಮನಿಸಬೇಕು. ಎರಡು ಮತೀಯ ಸಂಘಟನೆಗಳವರು. ಅದರಲ್ಲಿ ಒಂದು ದೇಶದ ರಾಷ್ಟ್ರೀಯ ಪಕ್ಷದ ಅಂಗಸಂಸ್ಥೆ ಎಂದು ತಿಳಿಯಬೇಕು.-ಬಿ. ರಮಾನಾಥ ರೈ