ಮಂಗಳೂರು: ನೀರು ಮಾರ್ಗ ಪಡು ಎಂಬಲ್ಲಿ ಶುಕ್ರವಾರ ರಾತ್ರಿ ಅಬ್ದುಲ್ ರಿಯಾಜ್ ಎನ್ನುವವರ ಹಲ್ಲೆ ನಡೆಸಿದ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಗಾಯಾಳು ಅಬ್ದುಲ್ ರಿಯಾಜ್ ಆಸ್ಪತ್ರೆಯಲ್ಲಿದ್ದು ಹಲ್ಲೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ರಿಟ್ಜ್ ಕಾರಿನಲ್ಲಿ ಮಹಿಳೆಯರು ಧರಿಸುವ ಒಂದು ಜತೆ ಚಪ್ಪಲಿ ಪತ್ತೆಯಾಗಿದೆ ಎಂದು ಆಯುಕ್ತರು ಹೇಳಿಕೆ ನೀಡಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಯಾಝ್ ಎಂಬಾತನ ಮೇಲೆ ಅಪರಿಚಿತ 5 ರಿಂದ 6 ಮಂದಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಂಗಳೂರು ನಗರದಿಂದ 15 ಕಿ.ಮೀ ದೂರದ ಅಡ್ಯಾರ್ ಪಡುವಿನ ನಿವಾಸಿಯಾದ ರಿಯಾಝ್ ಅಹ್ಮದ್ (38)ಮೇಲೆ ನೀರುಮಾರ್ಗ ಪಡು ಪ್ರದೇಶದಲ್ಲಿ ರಾತ್ರಿ 9 ಗಂಟೆಗೆ 5 ರಿಂದ 6 ಮಂದಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದರು. ತಲೆಗೆ ಪೆಟ್ಟಾಗಿದ್ದು, ವೈದ್ಯರು ಹೇಳಿದಂತೆ ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ನಾಲ್ವರ ಸಾವು: ಮಂಗಳೂರಿನಲ್ಲಿ ಮತಾಂತರ ಮಾಡಲು ಯತ್ನಿಸಿದ್ದು ದೃಢ
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 307 ಐಪಿಸಿ ಪ್ರಕರಣ ದಾಖಲಾಗಿದೆ.
ಘಟನೆ ಬಳಿಕ ನೂರಾರು ಜನರು ಆಸ್ಪತ್ರೆ ಬಳಿ, ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಆತಂಕಕ್ಕೆ ಕಾರಣವಾಗಿತ್ತು.