Advertisement
ಕರ್ನಾಟಕ ರಾಜ್ಯ ಪೊಲೀಸ್, ದ.ಕ. ಜಿಲ್ಲಾ ಪೊಲೀಸ್ ಘಟಕದಿಂದ ಧರ್ಮಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ 2.18. ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪೊಲೀಸ್ ಠಾಣೆಯ ನೂತನ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
Related Articles
Advertisement
ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಪೊಲೀಸ್‌ಠಾಣೆಗೆ ಹೆಚ್ಚುವರಿ 1.30 ಕೋ.ರೂ. ಅನುದಾನ ಹಾಗೂ ಸಿಬಂದಿ ನೇಮಕ ಅವಶ್ಯವಿದೆ. ಧರ್ಮಸ್ಥಳ ಗ್ರಾಮವು ಸುತ್ತಮುತ್ತ 18 ಗ್ರಾಮಗಳಿಗೆ ಕಾರ್ಯವ್ಯಾಪ್ತಿ ವಿಸ್ತರಿಸುವ ಸಲುವಾಗಿ ಇಲ್ಲಿ ವೃತ್ತ ನಿರೀಕ್ಷ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಜತೆಗೆ ವಿಪತ್ತು ನಿರ್ವಹಣೆಗಾಗಿ ಅಗ್ನಿಶಾಮಕ ದಳ ಘಟಕವನ್ನು ಧರ್ಮಸ್ಥಳದಲ್ಲಿ ಪ್ರಾರಂಭಿಸಬೇಕೆಂದ ಅವರು ಪೊಲೀಸರಿಗೆ ಅವಶ್ಯವಿರುವ ವಸತಿ ಸಮುಚ್ಚಯ ನಿರ್ಮಿಸಲು ನೆರವು ನೀಡುವಂತೆ ಮನವಿ ಮಾಡಿದರು.
ಕ.ರಾ.ಪೊ.ವ. ಮುಖ್ಯಅಭಿಯಂತ ಎನ್.ಜಿ.ಗೌಡಯ್ಯ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಸಹಾಯಕ ಪೊಲೀಸ್‌ಅಧೀಕ್ಷಕ ಶಿವಾಂಶು ರಜಪೂತ್ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸ್ವಾಗತಿಸಿದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ವಂದಿಸಿದರು.
ಗ್ರಾ.ಯೋಜನೆಯಿಂದ ಏಳಿಗೆಪರಿಸರದಿಂದ ಆರಂಭಿಸಿ ಮನುಷ್ಯನವರೆಗಿ ಸರ್ವತೋಮುಖ ಬೆಳವಣಿಗೆಯಲ್ಲಿ ಒಂದು ಸರಕಾರ ಅನುಸರಿಸಬೇಕಾದ ಯೋಜನೆಗಳನ್ನು ಡಾ| ಹೆಗ್ಗಡೆಯವರ ಅಣತಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಕಾರಗೊಂಡಿದೆ. ಜನರಲ್ಲಿ ಆರ್ಥಿಕ ಶಿಸ್ತು, ಸಂಯಮ, ಸೇವಾ ಕಳಕಳಿ, ದಯೆ, ಅನುಕಂಪ, ಸ್ವಾವಲಂಬನೆ ಮೊದಲಾದ ಮಾನವೀಯ ಮೌಲ್ಯಗಳು ಮೂಡಿ ಬಂದಿದ್ದರಿಂದ ಶ್ರೀಸಾಮಾನ್ಯರ ಪರಿವರ್ತನೆಗೆ ನಾಂದಿ ಹಾಡಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.