Advertisement

ಪೊಲೀಸ್ ಇಲಾಖೆ ಪ್ರತಿಭಟನಾಕಾರರ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ: ಮಾಜಿ ಪ್ರಧಾನಿ

12:46 PM Oct 23, 2019 | Mithun PG |

ಯಾದಗಿರಿ:  ಜೆಡಿಎಸ್‌ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ, ಹಿಂಸೆ ನೀಡಿದ್ದಾರೆಂದು ಆರೋಪಿಸಿ ನಗರ ಪೊಲೀಸ್ ಠಾಣೆ ಎದುರು ಉಪವಾಸ ನಿರಶನ ಆರಂಭಿಸಿರುವ ಜೆಡಿಎಸ್‌ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಅವರ ಹೋರಾಟಕ್ಕೆ ಮಾಜಿ ಪ್ರಧಾನಿ ಹೆಚ್. ಡಿ ದೇವೆಗೌಡ  ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

ನಗರದ ಗಾಂಧಿವೃತ್ತ ಸುತ್ತಮುತ್ತ ಪೊಲೀಸ್ ನಿಷೇಧಾಜ್ಞೆ ಹೊರಡಿಸಿದ್ದು ಈ  ಕಾನೂನನ್ನು ಪಾಲಿಸುತ್ತೇವೆ. ಮಂಗಳವಾರ ಸಂಜೆಯವರೆಗೂ ಪೊಲೀಸರು ಸುಮ್ಮನಿದ್ದು 9ಕ್ಕೆ ನಿಷೇಧ ಜಾರಿಗೊಳಿಸುವ ಮೂಲಕ ಹೋರಾಟಗಾರರ ಆತ್ಮಸ್ಥೈರ್ಯವನ್ನು ಪೊಲೀಸ್ ಇಲಾಖೆ  ಹತ್ತಿಕ್ಕುವ ಕೆಲಸ ಮಾಡುತ್ತಿದೆ.

ರಾಜ್ಯ ಸರ್ಕಾರ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ಮಾಡುತ್ತಿದೆ .  ಈ ಘಟನೆ ಕೂಡ ಅದರ ಒಂದು ಭಾಗ. ಶರಣಗೌಡ ಕಂದಕೂರ ಹೋರಾಟವನ್ನು ಬೆಂಬಲಿಸುತ್ತೇನೆ ಮತ್ತು ಅವರ ಉಪವಾಸ ಸತ್ಯಾಗ್ರಹ‌ ಕೈಬಿಡಲು ವಿನಂತಿಸಿಕೊಳ್ಳುತ್ತೇನೆ. ಜಿಲ್ಲಾಧಿಕಾರಿ ಕಚೇರಿ ಮುಂದೆ  ನಡೆಯಲಿರುವ ಬಹಿರಂಗ ಸಭೆಗೆ ಕಂದಕೂರನ್ನು ಕರೆದೊಯ್ಯಲಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next