ಹಾವೇರಿ: ರಾಜ್ಯದಲ್ಲಿ ಕಳಪೆ ಗುಣಮುಟ್ಟದ ಮತ್ತು ನಕಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತುದೆ. ಕಳಪೆ ಬೀಜ ಮಾರುವ ಮೂಲ ಬೇರು ತೆಗೆಯಬೇಕಾಗಿದೆ .ಆದರೆ ಈ ಜಾಲದ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಾವೇರಿ, ಧಾರವಾಡ, ಬಳ್ಳಾರಿ 1685 ಕ್ಚಿಂಟಲ್ ಕಳಪೆ ಬೀಜ ವಶಕ್ಕೆ ಪಡೆಯಲಾಗಿದೆ. ಮುಸುಕಿನ ಜೋಳ, ಸೂರ್ಯಕಾಂತಿ ಸೇದಂತೆ ಅನೇಕ ಬೀಜ ವಶಪಡಿಸಿಕೊಂಡಿದ್ದಾರೆ. ಕಳಪೆ ಬೀಜ ಮಾರುವ ಮೂಲ ಬೇರು ತೆಗೆಯಬೇಕಾಗಿದೆ. ಇಲ್ಲವದಾರೆ ಆ ಜಾಲ ಹಾಗೆ ಮುಂದುವರೆಯುತ್ತದೆ. ಪೊಲೀಸ್ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲಾ. ಇದು ನನಗೆ ಬಹಳ ನೋವಾಗಿದೆ ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು.
ನಕಲಿ ಬೀಜದ ಮೂಲ ಆಂಧ್ರಪ್ರದೇಶ, ವಿಜಯವಾಡ ಸೇರಿದಂತೆ ಅನೇಕ ಕಡೆ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದೆ ಇರೋದು ವಿಷಾಧನಿಯ. ಈ ಬಗ್ಗೆ ಗೃಹ ಮಂತ್ರಿ, ಡಿಜಿಪಿಗೆ ಪತ್ರ ಬರೆದಿದ್ದೇನೆ. ಈ ಪ್ರಕರಣದಲ್ಲೂ ಕ್ರಮ ಕೈಗೊಳ್ಳಲು ಹಿಂಜರಿದರೆ ರೈತರಿಗೆ ಅಪಚಾರ ಮಾಡಿದಂತಾಗುತ್ತದೆ. ರೈತರನ್ನು ಜೀವಂತ ಸಮಾಧಿ ಮಾಡುವ ಕಲಸ ಇದು ಎಂದು ಪೊಲೀಸ್ ಇಲಾಖೆ, ಗೃಹ ಇಲಾಖೆ ವಿರುದ್ಧ ಸಚಿವ ಬಿ ಸಿ ಪಾಟೀಲ್ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಯಾವುದೇ ಬೀಜ, ಗೊಬ್ಬರದ ಕೊರತೆಯಿಲ್ಲಾ. ಕೀಟ ನಾಶಕಗಳು ಕಳೆಪೆಯಾಗಿರೋದು ಗಮನಕ್ಕೆ ಬಂದಿದೆ. ಅಂತವರ ಮೇಲೆ ಕ್ರಮ ಕೈಗೊಳ್ಳಲು, ಲೈಸೆನ್ಸ್ ರದ್ದು ಮಾಡಲು ಆದೇಶ ಮಾಡಿದ್ದೇನೆ. ಈ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮೆಕ್ಕೆಜೋಳ ಖರೀದಿಗೆ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. 1760 ರೂಪಾಯಿಗೆ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲಾಗುವುದು ಎಂದರು.