Advertisement

ವಿಶೇಷ ವರದಿ : ನಿರ್ಭೀತ ಚುನಾವಣೆಗೆ ಪೊಲೀಸ್‌ ಇಲಾಖೆ ಸಜ್ಜು

08:25 AM Apr 21, 2018 | Team Udayavani |

ಕುಂದಾಪುರ: ನಕ್ಸಲ್‌ ಬಾಧಿತ ಪ್ರದೇಶಗಳಿಗೆ ವಿಶೇಷ ಸಿಬಂದಿಗಳನ್ನು, CRPF ಯೋಧರನ್ನು ನೇಮಿಸಲಾಗುತ್ತದೆ. ಅಲ್ಲಲ್ಲಿ ಚೆಕ್‌ ಪೋಸ್ಟ್‌ ಗಳನ್ನು ಮಾಡಿ ಚುನಾವಣಾ ಅವ್ಯವಹಾರ ತಡೆಯಲಾಗುತ್ತಿದೆ. ಜನತೆ ಯಾವುದೇ ಹೆದರಿಕೆ ಇಲ್ಲದೆ ನಿರ್ಭೀತರಾಗಿ ಮತ ಚಲಾಯಿಸಬೇಕು ಎನ್ನುವುದೇ ಉದ್ದೇಶ ಎಂದು ಕುಂದಾಪುರ ಉಪವಿಭಾಗ ಡಿ.ವೈ.ಎಸ್‌.ಪಿ. ಬಿ.ಪಿ. ದಿನೇಶ್‌ ಕುಮಾರ್‌ ಹೇಳಿದ್ದಾರೆ. ಈಚೆಗಷ್ಟೇ ಕುಂದಾಪುರ ವಿಭಾಗ ಡಿವೈಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ದಿನೇಶ್‌ ಕುಮಾರ್‌ ಚುನಾವಣೆ ತಯಾರಿ ಬಗ್ಗೆ ‘ಉದಯವಾಣಿ’ ಜತೆ ಮಾತಕತೆ ನಡೆಸಿದರು. 

Advertisement

ಚುನಾವಣಾ ಅಕ್ರಮ ತಡೆಗೆ ಶಿರೂರು, ದಳಿ, ಹಾಲಾಡಿ, ಹೊಸಂಗಡಿ, ಕಂಡೂÉರಿನಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಫ್ಲೈಯಿಂಗ್‌ ಸ್ಕ್ವಾಡ್‌ ಮೊದಲಾದ ಜಾಗೃತದಳಗಳು ಇದ್ದು ಅವು ಅಕ್ರಮ ಮದ್ಯ ಪೂರೈಕೆ, ಹಣ ಹಂಚುವಿಕೆಯಂತಹ ಪ್ರಕರಣ, ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಕಂಡು ಬಂದರೆ ದಾಳಿ ನಡೆಸುತ್ತಾರೆ. ಅನಂತರ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ಕಾನೂನು ಕ್ರಮ ಜರುಗುತ್ತದೆ. ಅಕ್ರಮಗಳ ವಿರುದ್ಧ  ಹದ್ದಿನ ಕಣ್ಣು ಇಡಲಾಗಿದೆ ಎಂದರು.


ಯೋಧರ ನಿಯೋಜನೆ

1 ಪ್ಲಟೂನ್‌ CRPF ಯೋಧರ ತಂಡ ಆಗಮಿಸಿದ್ದು ಇದನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಳಸಿಕೊಳ್ಳಲಾಗಿದೆ. ಇನ್ನೊಂದು ಪ್ಲಟೂನ್‌ ಆಗಮಿಸುತ್ತಿದ್ದು ಇದನ್ನು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನಿಯೋಜಿಸಲಾಗುವುದು. ವಿವಿಧ ಚೆಕ್‌ ಪೋಸ್ಟ್‌ಗಳಲ್ಲಿ ಸಿಆರ್‌ಪಿಎಫ್ನವರನ್ನು ಬಳಸಿಕೊಳ್ಳಲಾಗಿದೆ. ಒಟ್ಟು 160 ಯೋಧರು ಕರ್ತವ್ಯದಲ್ಲಿರುತ್ತಾರೆ. ಈಗಾಗಲೇ ಅನೇಕ ಕಡೆ ಪಥಸಂಚಲನ ನಡೆಸುವ ಮೂಲಕ ಪೊಲೀಸರು, ಯೋಧರು ಭದ್ರತೆ ಭಾವನೆ ಬಿತ್ತಿದ್ದಾರೆ ಎಂದರು.

ನಕ್ಸಲ್‌ ಬಾಧಿತ
ಕುಂದಾಪುರದಲ್ಲಿ 44, ಬೈಂದೂರಿನಲ್ಲಿ 49 ಸೂಕ್ಷ್ಮ ಮತಗಟ್ಟೆಗಳಿವೆ. ಕುಂದಾಪುರದಲ್ಲಿ 8, ಬೈಂದೂರಿನಲ್ಲಿ 19 ನಕ್ಸಲ್‌ ಬಾಧಿತ ಮತಗಟ್ಟೆಗಳಿವೆ. ಇವುಗಳಲ್ಲಿ ಕೂಡ ಸೂಕ್ತ ಬಂದೋಬಸ್ತು ಕೈಗೊಳ್ಳಲಾಗಿದೆ. ಡಿಸಿ ಹಾಗೂ ಎಸ್‌.ಪಿಯವರು ಈ ಪ್ರದೇಶಗಳಿಗೆ ಭೇಟಿ ನೀಡಿದ್ದು ಹಳ್ಳಿಹೊಳೆಯಲ್ಲಿ ಸಭೆ ನಡೆಸಿದ್ದಾರೆ. ಜನರಿಗೆ ಧೈರ್ಯ ತುಂಬಿದ್ದಾರೆ ಎಂದರು.

ಪೊಲೀಸರಿಗೆ ಆಹಾರ
ಸಾಮಾನ್ಯವಾಗಿ ಚುನಾವಣಾ ಕರ್ತವ್ಯ ನಿರತ ಪೊಲೀಸರಿಗೆ ಆಹಾರದ ಲಭ್ಯತೆ ಇರುವುದಿಲ್ಲ. ಎಲ್ಲೆಲ್ಲೋ ಕರ್ತವ್ಯ ನಿರ್ವಹಿಸಬೇಕಾದ ಕಾರಣ ಅಲ್ಲಿ ಸ್ಥಳೀಯವಾಗಿ ಹೊಟೇಲ್‌ ಗ‌ಳು ಇಲ್ಲದೇ ಪರದಾಟ ಸಾಮಾನ್ಯವಾಗಿತ್ತು. ಆದರೆ ಈಗ ಅಂತಹ ಸಮಸ್ಯೆ ಇಲ್ಲ. ಈ ಬಾರಿ ಆಹಾರ ಪೊಟ್ಟಣದ ವ್ಯವಸ್ಥೆ  ಮಾಡಲಾಗಿದೆ. ಚುನಾವಣೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

Advertisement

– ಕುಂದಾಪುರ, ಬೈಂದೂರಿನಲ್ಲಿ ಸಿಆರ್‌ಪಿಎಫ್ ಪಡೆ  
– ಕುಂದಾಪುರ 44, ಬೈಂದೂರು 49 ಸೂಕ್ಷ್ಮ ಮತಗಟ್ಟೆಗಳು
– ಕುಂದಾಪುರ 8, ಬೈಂದೂರು 19 ನಕ್ಸಲ್‌ ಬಾಧಿತ ಮತಗಟ್ಟೆಗಳು
– 5 ಕಡೆ ಚೆಕ್‌ಪೋಸ್ಟ್‌ಗಳು

Advertisement

Udayavani is now on Telegram. Click here to join our channel and stay updated with the latest news.

Next