Advertisement

Police custody: ಆಹಾರ ಭತ್ತೆ 150 ರೂ.ಗೆ ಹೆಚ್ಚಳ

12:05 AM Oct 16, 2024 | Team Udayavani |

ಬೆಂಗಳೂರು: ಪೊಲೀಸ್‌ ವಶದಲ್ಲಿರುವ ಆರೋಪಿಗಳ ದೈನಂದಿನ ಆಹಾರ ಭತ್ತೆಯನ್ನು 75ರಿಂದ 150 ರೂ.ಗೆ ಏರಿಕೆ ಮಾಡಿ ಪೊಲೀಸ್‌ ಇಲಾಖೆ ಆದೇಶ ಹೊರಡಿಸಿದೆ.

Advertisement

ಪೊಲೀಸರು ಕಳ್ಳತನ, ಸುಲಿಗೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸುತ್ತಿದ್ದ ಆರೋಪಿಗಳನ್ನು ಕೋರ್ಟ್‌ ಅನುಮತಿ ಪಡೆದು ಪೊಲೀಸ್‌ ಕಸ್ಟಡಿ ಪಡೆಯುತ್ತಾರೆ.

ಅಂತಹ ಆರೋಪಿಗಳ ಆಹಾರ ಭತ್ತೆಯಾಗಿ ದಿನಕ್ಕೆ 75 ರೂ.ಗಳನ್ನು ಇಲಾಖೆ ನೀಡುತ್ತಿತ್ತು. ಇತ್ತೀಚೆಗೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ 75 ರೂ. ವೆಚ್ಚದಲ್ಲಿ ಆರೋಪಿಗಳಿಗೆ ಆಹಾರ ಒದಗಿಸುವುದು ಕಷ್ಟಕರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next