Advertisement
ಹೀಗೆಂದು ತಮ್ಮ ಅನಿಸಿಕೆ ಹಂಚಿಕೊಂಡವರು, ಬೆಂಗಳೂರಿನ ಬೇಗೂರು ಠಾಣೆಯ ಮುಖ್ಯ ಪೇದೆ. ಜಿಲ್ಲೆಯ ಹನೂರು ಸಮೀಪದ ಬೆಳತ್ತೂರಿನ ತಮ್ಮ ಪತ್ನಿಯ ಮನೆಗೆ ಬಂದ ನಂತರ ಆದ ಅವಾಂತರಗಳಿಂದ ನೊಂದಿರುವ ಅವರನ್ನು ಉದಯವಾಣಿ ಸಂಪರ್ಕಿಸಿದಾಗ ಅಳುಕಿನಿಂದಲೇ ತಮ್ಮ ಅನುಭವ ಹಂಚಿಕೊಂಡರು.
Related Articles
Advertisement
ಇನ್ನು ಅನೇಕ ಕಡೆ ಪುಂಖಾನುಪುಂಖವಾಗಿ ವದಂತಿಗಳು ಹರಡಿದವು. ಮನೆಗೆ ಬಂದು ನಂತರ ಬಾರ್‌ಗೆ ಹೋಗಿದ್ದನಂತೆ ಎಂಬ ಮಾತುಗಳು ಕೇಳಿಬಂದವು. ನಾನು ಕುಡಿಯುವುದೇ ಇಲ್ಲ. ಆದರೂ ಈ ರೀತಿ ಸುಳ್ಳು ಹರಡಿದ್ದು ಬೇಸರ ತಂದಿತು. ನಾನು ಬೆಂಗಳೂರಿನಿಂದ ಬಂದು ಕೊಳ್ಳೇಗಾಲ ಹೊರವಲಯದಲ್ಲೇ ಬೈಪಾಸ್ ಮಾಡಿಕೊಂಡು ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಲೊಕ್ಕನಹಳ್ಳಿ ಮಾರ್ಗ ಬೆಳತ್ತೂರಿಗೆ ಹೋಗಿದ್ದೆ. ಕೊಳ್ಳೇಗಾಲ ಪಟ್ಟಣ, ಹನೂರಿಗೂ ಹೋಗಿಲ್ಲ. ಹೀಗಿದ್ದರೂ ಚಾಮರಾಜನಗರಕ್ಕೂ ಹೋಗಿದ್ದ ಅಂಗಡಿ, ಪೆಟ್ರೋಲ್ ಬಂಕ್ ಗೆ ಹೋಗಿದ್ದ ಎಂಬ ವದಂತಿಗಳು ಹರಡಿದವು. ಕಾರಿನಲ್ಲಿ ಫುಲ್ ಟ್ಯಾಂಕ್ ಇತ್ತು. ಎಲ್ಲೂ ಪೆಟ್ರೋಲ್ ಸಹ ಹಾಕಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕೋವಿಡ್ ಇಲ್ಲ ಎಂಬ ಭರವಸೆ ಇತ್ತು: ಪಾಸಿಟಿವ್ ಇದೆ ಎಂದು ಫೋನ್ ಮಾಡಿದ್ದರೂ ಸಹ ನನಗೆ ಕೋವಿಡ್ ಬಂದಿಲ್ಲ ಎಂಬ ಭರವಸೆ ಇತ್ತು. ನಾನು ಎಲ್ಲೂ ಈಚೆಗೇ ಹೋಗಿರಲಿಲ್ಲ. ನನಗೆ ಯಾರ ಸಂಪರ್ಕವೂ ಇರಲಿಲ್ಲ. ಹೊರ ಬಂದಾಗ ಮಾಸ್ಕ್ ಧರಿಸುತ್ತಿದ್ದೆ. ಸ್ಯಾನಿಟೈಸರ್ ನನ್ನ ಜೊತೆಯಲ್ಲೇ ಇಟ್ಟುಕೊಂಡಿದ್ದೇನೆ. ಇಷ್ಟೆಲ್ಲ ಮುನ್ನೆಚ್ಚರಿಕೆ ವಹಿಸಿರುವಾಗ ಕೋವಿಡ್ ಬರಲು ಹೇಗೆ ಸಾಧ್ಯ ಎಂಬ ಭರವಸೆ ನನ್ನಲ್ಲಿತ್ತು ಎಂದರು.
ಇದರಲ್ಲಿ ಯಾರ ತಪ್ಪೋ ಏನೋ ನನಗೆ ಗೊತ್ತಿಲ್ಲ ಸರ್. ರಿಪೋರ್ಟು ನನಗೆ ತೋರಿಸಿಲ್ಲ. ಏನಾಯ್ತೋ ಗೊತ್ತಿಲ್ಲ. ಸೀರಿಯಲ್ ನಂ. ಚೇಂಜ್ ಆಗಿತ್ತು ಅಂತಾರೆ. ಒಟ್ಟಿನಲ್ಲಿ ನಾನಂತೂ ತೀವ್ರ ತೊಂದರೆಗೊಳಾಗದೆ. ನನ್ನಿಂದ ಬೇರೆಯವರಿಗೂ ತೊಂದರೆಯಾಯಿತು.
ನನ್ನಿಂದ ನಮ್ಮ ಕುಟುಂಬದವರು, ಬಂಧುಗಳು, ನಮ್ಮ ಸಿಬ್ಬಂದಿ ಕ್ವಾರಂಟೈನ್‌ನಲ್ಲಿರಬೇಕಾಯಿತು. ಚಾಮರಾಜನಗರದಲ್ಲಿ 38 ಮಂದಿ ಮಾತ್ರವಲ್ಲ, ಬೆಂಗಳೂರಿನಲ್ಲೂ ಸಹ ನಮ್ಮ ಕುಟುಂಬದವರು, ನಮ್ಮ ಸಿಬ್ಬಂದಿ ಸೇರಿ 35 ಜನರನ್ನು ಕ್ವಾರಂಟೈನ್ ನಲ್ಲಿರಿಸಿದ್ದರು. ಈಗ ಎಲ್ಲ ಬಿಡುಗಡೆಯಾಗಿದ್ದಾರೆ. ನನ್ನಿಂದ ಯಾರ್ಯಾರಿಗೆ ತೊಂದರೆಯಾಯಿತೋ ಅವರೆಲ್ಲರ ಕ್ಷಮೆ ಯಾಚಿಸುತ್ತೇನೆ. ಈಗ ಎಲ್ಲವೂ ನಿರಾಳವಾಗಿದೆ. ಇದಕ್ಕೆ ಬಿಳಿಗಿರಿರಂಗನಾಥ, ಮಹದೇಶ್ವರರ ಕೃಪೆಯೇ ಕಾರಣ ಎಂದು ಅವರು ಕೃತಜ್ಞತೆ ಸಲ್ಲಿಸಿದರು.
ಘಟನೆ ಹಿನ್ನಲೆಕಳೆದ ಸೋಮವಾರ ಬೆಂಗಳೂರಿನ ಬೇಗೂರು ಠಾಣೆಯ ಮುಖ್ಯ ಪೇದೆ ಜಿಲ್ಲೆಯ ಬೆಳತ್ತೂರು ಗ್ರಾಮದ ತಮ್ಮ ಅತ್ತೆ ಮನೆಗೆ ತನ್ನ ಹೆಂಡತಿ ಮಗುವಿನೊಂದಿಗೆ ಬಂದಿದ್ದರು. ಗ್ರಾಮದಲ್ಲಿದ್ದಾಗ ಬೆಂಗಳೂರಿನ ಆಸ್ಪತ್ರೆಯಿಂದ ಕರೆಬಂದು, ನಿಮಗೆ ಕೋವಿಡ್-19 ಪಾಸಿಟಿವ್ ಇರುವುದರಿಂದ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು. ತಕ್ಷಣ ಅವರು ವಾಪಸಾಗಿದ್ದರು. ಅವರು ಹೋದ ಬಳಿಕ ಬೆಳತ್ತೂರಿನ ಅವರ ಅತ್ತೆ ಮನೆ ಹಾಗೂ ಅಕ್ಕಪಕ್ಕದ ಮನೆಯವರೂ ಸೇರಿ 38 ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. ಬೆಂಗಳೂರಿಗೆ ತೆರಳಿದ ಪೇದೆಯವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪೇದೆಯವರಿಗೆ ಕೋವಿಡ್-19 ನೆಗೆಟಿವ್ ಇದ್ದು, ಪಾಸಿಟಿವ್ ಇದ್ದ ಇನ್ನೋರ್ವ ರೋಗಿಯ ವರದಿಯನ್ನು ಇವರದೆಂದು ತಪ್ಪಾಗಿ ಭಾವಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಮತ್ತೊಮ್ಮೆ ಖಚಿತಪಡಿಸಿಕೊಳ್ಳುವ ಸಲುವಾಗಿ ಬುಧವಾರ ಮತ್ತೊಮ್ಮೆ ಪೇದೆಯ ಗಂಟಲು ದ್ರವ ಪರೀಕ್ಷೆ ನಡೆಸಿ, ಅದರಲ್ಲೂ ನೆಗೆಟಿವ್ ಬಂದಿತು. ನಂತರ ಪೇದೆಯವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಪ್ರಸ್ತುತ ಕ್ವಾರಂಟೈನ್ ನಲ್ಲಿಡಲಾಗಿದೆ. ವರದಿ: ಕೆ.ಎಸ್. ಬನಶಂಕರ ಆರಾಧ್ಯ