ಚಿಕ್ಕಮಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಭಾಷಣದ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಕುಸಿದು ಬಿದ್ದ ಘಟನೆ ಕಡೂರು ತಾಲೂಕಿನ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದಿದೆ.
ಗೃಹ ಸಚಿವರ ಭಾಷಣದ ವೇಳೆ ವೇದಿಕೆಯ ಎಡ ಹಾಗೂ ಬಲ ಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಂತಿದ್ದರು. ಈ ವೇಳೆ ಮೈಸೂರು ಅಶ್ವದಳದ ಸಿಬ್ಬಂದಿ ಮೈಲುದ್ದೀನ್ ತಲೆ ಸುತ್ತು ಬಂದು ಬಿದ್ದರು. ಇದನ್ನು ಗಮನಿಸಿದ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿಯನ್ನು ಎತ್ತುಕೊಂಡು ಬಂದು ತಮ್ಮ ಪಕ್ಕದಲ್ಲೇ ಕೂರಿಸಿದರು.
ಅಪರಾಧಿಗಳಿಗೆ ಸಂದೇಶ: ಮೈಸೂರಿನ ಎರಡು ಪ್ರಮುಖ ಪ್ರಕರಣಗಳನ್ನು ಭೇದಿಸಿದ ಮೈಸೂರು ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ:ತಮಿಳುನಾಡಿನ ಪುಂಡಪೋಕರಿಗಳು ಮೈಸೂರಿಗೆ ಬಂದು ಕ್ರೈಂ ಮಾಡುತ್ತಾರೆಂದರೆ ಏನರ್ಥ?: ಸೋಮಶೇಖರ್
ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಎಲ್ಲರನ್ನೂ ಬಂಧಿಸುತ್ತಿದ್ದಾರೆ. ಎಲ್ಲರಿಗೂ ಶಿಕ್ಷೆಯಾಗುವಂತೆ ಪೊಲೀಸರು ವಿಶೇಷ ಶ್ರಮ ವಹಿಸುತ್ತಿದ್ದಾರೆ. ಸಂತ್ರಸ್ಥೆ ಹೇಳುವ ಸ್ಥಿತಿಯಲ್ಲಿಲ್ಲ, ಆಕೆ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಮಹಿಳಾ ಅಧಿಕಾರಿಗಳು ಪ್ರಯತ್ನ ಮಾಡಿದರು, ಸ್ವಲ್ಪ ಸಮಯದ ಬಳಿಕ ಹೇಳಬಹುದು. ಅಪರಾಧ ಮಾಡುವವರಿಗೆ ದೊಡ್ಡ ಸಂದೇಶ ಹೋಗಿದೆ. ಏನಾದರೂ ಮಾಡಿ ಹೇಗಾದರೂ ಬಚಾವ್ ಆಗಬಹುದು ಎನ್ನುವುದು ನಡೆಯಲ್ಲ ಎಂದರು.