Advertisement
ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸಾಮಾನ್ಯ ನಾಗರಿಕರಂತೆ ಬದುಕಬೇಕು. ಈಗಾಗಲೇ ತೊಡಗಿಸಿಕೊಂಡಿರುವವರು ಅದನ್ನು ಬಿಟ್ಟು ಗೌರವಯುತ ವೃತ್ತಿಗಳಲ್ಲಿ ಮುಂದುವರಿಯಬೇಕು.ಪ್ರತಿಯೊಬ್ಬರ ಚಲನವಲನಗಳನ್ನು ಪೊಲೀಸ್ ಇಲಾಖೆ ಗಮನಿಸುತ್ತಿರುತ್ತದೆ. ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಗೂಂಡಾ ಕಾಯಿದೆಯಂತಹ ಕಠಿಣ ಕಾನೂನು ಜಾರಿಗೊಳಿಸುತ್ತೇವೆ ಎಂದು ಮಂಗಳೂರು ಪೊಲೀಸ್ ಅಯುಕ್ತರು ಎಚ್ಚರಿಸಿದರು.