Advertisement
ನಗರದ ಕೇಶ್ವಾಪುರ ಕುಸುಗಲ್ಲ ರಸ್ತೆಯ ವಿಜಯಪುರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಸ್ವತಃ ತಾವೇ ಬಸ್, ಕಾರು ಸೇರಿದಂತೆ ಎಲ್ಲ ವಾಹನಗಳನ್ನು ಪರಿಶೀಲಿಸಿದರು. ಅವಳಿ ನಗರದಲ್ಲಿ ನಿರ್ಮಿಸಲಾದ 13 ಚೆಕ್ ಪೋಸ್ಟ್ ಗಳಿಗೆ ಭೇಟಿಕೊಟ್ಟರು. ಆಯುಕ್ತರು ವಾಹನಗಳ ಪರಿಶೀಲನೆ ವೇಳೆ ಮಕ್ಕಳಿಗೆ ಚಾಕೋಲೇಟ್ ನೀಡಿದರು. ಅಲ್ಲದೆ ಎಲ್ಲ ಚೆಕ್ ಪೋಸ್ಟ್‌ಗಳಲ್ಲೂ ಪರಿಶೀಲನೆ ವೇಳೆ ವಾಹನಗಳಲ್ಲಿ ಮಕ್ಕಳಿದ್ದರೆ ಅವರಿಗೆ ಚಾಕೋಲೇಟ್ ಕೊಡುವಂತೆ ಚೆಕ್ ಪೋಸ್ಟ್ ಸಿಬ್ಬಂದಿಗೆ ಸೂಚಿಸಿದರು. ಅಲ್ಲದೆ ಎಲ್ಲಾ ಚೆಕ್‌ಪೋಸ್ಟ್‌ಗಳಿಗೆ ಚಾಕೋಲೇಟ್ ಕಿಟ್ಗಳನ್ನು ವಿತರಿಸಿದರು.