Advertisement
ಮಧ್ಯಾಹ್ನ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಆಯುಕ್ತ ಎಂ. ಚಂದ್ರಶೇಖರ್ ಅವರು ಅಧಿಕಾರವನ್ನು ಹಸ್ತಾಂತರಿಸಿದರು.
Related Articles
Advertisement
ಜಿಲ್ಲಾ ಎಸ್‌ಪಿ ಆಗಿ ಪ್ರಥಮವಾಗಿ ಕೊಡಗು, ಬಳಿಕ ಬಾಗಲ ಕೋಟೆ, ರಾಯಚೂರು, ತುಮಕೂರು ಜಿಲ್ಲೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು. ಡಿಸಿಪಿಯಾಗಿ ಬೆಂಗಳೂರು ಈಶಾನ್ಯ ವಲಯ ಮತ್ತು ಉತ್ತರ ವಲಯಗಳಲ್ಲಿ ಸೇವೆ ಒದಗಿಸಿದ ಬಳಿಕ ಡಿಐಜಿ ಹುದ್ದೆಗೆ ಭಡ್ತಿ ಹೊಂದಿ ಕಳೆದ 6 ತಿಂಗಳಿಂದ ಬೆಂಗ ಳೂರಿನ ಅಗ್ನಿ ಶಾಮಕ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಶಿವಮೊಗ್ಗದವರಾಗಿದ್ದು, ಬಿ.ಕಾಂ. ಮತ್ತು ಮೈಸೂರು ವಿಶ್ವ ವಿದ್ಯಾ ನಿಲಯದಿಂದ
ಎಂಬಿಎ ಪದವಿ ಪಡೆದಿದ್ದಾರೆ. ಉತ್ತಮ ಸೇವೆಯ ಭರವಸೆ
ಮಂಗಳೂರು ನಗರಕ್ಕೆ ಉತ್ತಮ ಪೊಲೀಸ್ ಸೇವೆಯನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಕಾನೂನು ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಆಸ್ತಿ ಪಾಸ್ತಿ ರಕ್ಷಣೆ ಮತ್ತು ಇತರ ಪೊಲೀಸ್ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಟಿ.ಆರ್. ಸುರೇಶ್ ತಿಳಿಸಿದರು. ನಿರ್ಗಮನ ಕಮಿಷನರ್ ಎಂ. ಚಂದ್ರಶೇಖರ್ ಅವರ ಒಳ್ಳೆಯ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗು ತ್ತೇನೆ. ಅವಕಾಶ ಲಭಿಸಿದಲ್ಲೆಲ್ಲಾ ಹೊಸ ಸೇವೆಯನ್ನು ಕಮಿಷನರೆಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಜತೆ ಸೇರಿ ಒದಗಿಸಲು ಯತ್ನಿಸುತ್ತೇನೆ. ಹಿರಿಯ ನಾಗರಿಕರ ಮತ್ತು ಮಾಧ್ಯಮದವರ ಸಲಹೆಗಳನ್ನು ಪಡೆದು ಮಂಗಳೂರಿಗೆ ಒಳ್ಳೆಯ, ಜನಸ್ನೇಹಿ ಪೊಲೀಸ್ ವ್ಯವಸ್ಥೆ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಅವರು ವಿವರಿಸಿದರು. ಜನತೆ, ಮಾಧ್ಯಮಗಳಿಂದ ಉತ್ತಮ ಸಹಕಾರ: ಎಂ. ಚಂದ್ರಶೇಖರ್
ಮಂಗಳೂರಿಲ್ಲಿ ಒಂದು ವರ್ಷ 6 ತಿಂಗಳು ಕೆಲಸ ಮಾಡಿರುವುದು ನನ್ನ ವೃತ್ತಿ ಜೀವನದ ಆವಿಸ್ಮರಣೀಯ ದಿನಗಳಾಗಿವೆ. 2016 ಜನವರಿಯಲ್ಲಿ ಇಲ್ಲಿಗೆ ಬಂದಾಗ ಇದು ಅಪರಿಚಿತ ನಗರವಾಗಿದ್ದರೂ ಸಹೃದಯಿ ಹಾಗೂ ಕಾನೂನನ್ನು ಗೌರವಿಸುವ ಜನರು ಇಲ್ಲಿರುವುದರಿಂದ ಅವರ ಮತ್ತು ಪೊಲೀಸ್ ಸಹೋದ್ಯೋಗಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು ಎಂದು ನಿರ್ಗಮನ ಆಯುಕ್ತ ಎಂ. ಚಂದ್ರಶೇಖರ್ ಅವರು ತಿಳಿಸಿದರು. ಸಮಾಜದ ಕೆಲವೊಂದು ದುಷ್ಟ ಶಕ್ತಿಗಳು ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಹದಗೆಡಿಸಲು ಪ್ರಯತ್ನಿಸಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಅವರನ್ನು ನಿಯಂತ್ರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ ಎಂದರು. ಮಂಗಳೂರು ನಗರ ಪೊಲೀಸನ್ನು ಜನಸ್ನೇಹಿ ಪೊಲೀಸ್ ಆಗಿ ಮಾಡಲು ಹಲವು ಕಾರ್ಯಕ್ರಮ ಹಮಿಕೊಂಡಿದ್ದು, ಇದರಲ್ಲಿ “ಫೋನ್ ಇನ್ ಕಾರ್ಯ ಕ್ರಮ’ ಪ್ರಮುಖವಾಗಿದೆ. ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಗೂ ತಿಳಿಸಲಾಗಿದೆ ಎಂದರು. ಸಮಾಜ ಘಾತಕ ಶಕ್ತಿಗಳು ಹಲವು ಬಾರಿ ಒತ್ತಡ ತಂದು ಪ್ರಕರಣಗಳ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದರೂ ಮಾಧ್ಯಮಗಳು ವಸ್ತುಸ್ಥಿತಿಯನ್ನು ವರದಿ ಮಾಡಿದ್ದರಿಂದ ಅಂತಹ ಶಕ್ತಿಗಳನ್ನು ಮಟ್ಟ ಹಾಕಿ ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಮಾಧ್ಯಮದವರ ಸಲಹೆಗಳು ಕೆಲವು ಪ್ರಕರಣಗಳ ಪತ್ತೆಗೂ ಸಹಕಾರಿಯಾಗಿವೆ ಎಂದರು. ಫೇಸ್‌ಬುಕ್ ಸಂಸ್ಥೆಯ ಅಧಿಕಾರಿಯನ್ನೂ ಮಂಗಳೂರಿಗೆ ಕರೆಸಲು ಸಾಧ್ಯವಾಗಿರುವುದು ಮಹತ್ವದ ವಿಷಯವಾಗಿದ್ದು, ಮುಂದಿನ ದಿನಗಳಲ್ಲೂ ಫೇಸ್‌ಬುಕ್ ಸಂಸ್ಥೆಯು ತನಿಖೆಗೆ ಸಹಕಾರ ನೀಡುವುದು ಎಂಬ ಭರವಸೆಯನ್ನು ಎಂ. ಚಂದ್ರಶೇಖರ್ ವ್ಯಕ್ತಪಡಿಸಿದರು.